ಬೆಂಗಳೂರು: ಇಲ್ಲಿ ಜಮೀನಿನ ಬೆಲೆ ಮಾತ್ರ ಗಗನಕ್ಕೇರಿಲ್ಲ. ಜೊತೆಗೆ, ಇಲ್ಲಿಗೆ ಬರುವಂತಹ ಅಧಿಕಾರಿಗಳು ಸಹ ನಾ ಮುಂದು ತಾ ಮುಂದು ಎಂದು ಭ್ರಷ್ಟಾಚಾರಕ್ಕಿಳಿದು ಇಲ್ಲಿನ ಜಮೀನುಗಳ ವಹಿವಾಟಿನಲ್ಲಿ ತೊಡಗಿದ್ದಾರೆ ಎಂಬ ಆರೋಪಗಳು ದೇವನಹಳ್ಳಿ ತಾಲೂಕಲ್ಲಿ ಕೇಳಿಬಂದಿವೆ.
ಇಲ್ಲಿನ ಸಬ್ ರಿಜಿಸ್ಟ್ರಾರ್ಗಳಿಗೆ ಭಾರಿ ಬೇಡಿಕೆಯಿದೆ. ಇವರೆಲ್ಲಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿದ್ದು, ನಿಯಮ ಬಾಹಿರವಾಗಿ ಸರ್ಕಾರಿ ಜಮೀನುಗಳನ್ನು ರಿಜಿಸ್ಟರ್ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ.
ದೇವನಹಳ್ಳಿ ಸಬ್ರಿಜಿಸ್ಟ್ರಾರ್ಕಚೇರಿಯಲ್ಲಿ ಬೃಹತ್ ಗೋಲ್ ಮಾಲ್ ನಡೆಯುತ್ತಿದೆ ಎನ್ನಲಾಗ್ತಿದೆ. ಸರ್ಕಾರಿ ನಿಯಮಗಳಂತೆ ಸೈಟ್ ನ್ನು ರಿಜಿಸ್ಟರ್ ಮಾಡಬೇಕಾದರೆ ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಇ-ಸ್ವತ್ತು ಮಾಡಿಸಬೇಕಾಗುತ್ತದೆ. ಇನ್ನು ಕೃಷಿ ಜಮೀನಿನಲ್ಲಿ ಲೇಔಟ್ ಮಾಡಿ ಸೈಟ್ಗಳ ನೋಂದಣಿ ಮಾಡಿಸಬೇಕಾದ್ರೆ ಸಾಕಷ್ಟು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆದ್ರೆ ಇಲ್ಲಿನ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಈ ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲವಂತೆ. ದುಡ್ಡು ಕೊಟ್ರೆ ಸಾಕು ಯಾವ ಸೈಟ್ ಬೇಕಾದ್ರು ನೋಂದಣಿಯನ್ನು ಸಬ್ ರಿಜಿಸ್ಟ್ರಾರ್ರ್ಸ್ ಮಾಡುತ್ತಾರೆ ಅನ್ನೋ ಆರೋಪ ಕೇಳಿಬಂದಿದೆ. ಈ ಬಗ್ಗೆ ಕೇಳಲು ಹೋದ್ರೆ ಮಾಧ್ಯಮದವರ ಮೇಲೂ ಗರಂ ಆಗ್ತಾರೆ.