ಬೆಂಗಳೂರು:ದೇವನಹಳ್ಳಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದ್ದು, ತಾಲೂಕು ಕಚೇರಿಯಲ್ಲಿ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. 23 ವಾರ್ಡ್‌ಗಳಿಂದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಬಿಎಸ್ಪಿ ಮತ್ತು ಪಕ್ಷೇತರರು ಸೇರಿದಂತೆ ಕಣದಲ್ಲಿದ್ದ ಒಟ್ಟು 77 ಜನ ಅಭ್ಯರ್ಥಿಗಳ ಭವಿಷ್ಯ ಇಂದು ಹೊರ ಬೀಳಲಿದೆ.
ಕಳೆದ 29 ರಂದು ಪಟ್ಟಣದ 23 ವಾರ್ಡ್ಗಳಲ್ಲಿ ಮತದಾನ ನಡೆದಿತ್ತು. ಮುಂಜಾಗ್ರತ ಕ್ರಮವಾಗಿ ಪಟ್ಟಣದಲ್ಲಿ 144 ಸೆಕ್ಷನ್ ಜಾರಿಯಾಗಿದೆ.
ನೆಲಮಂಗಲ ಪುರಸಭೆ ಚುನಾವಣೆ ಒಂದನೇ ಸುತ್ತಿನ ಮತ ಎಣಿಕೆ ಪ್ರಾರಂಭ
- ವಾರ್ಡ್ ನಂ 14- ಎಂ ಶಿವಕುಮಾರ್ ಜೆಡಿಎಸ್ ಗೆಲುವು
- ವಾರ್ಡ್ ನಂಬರ್ 2 - ಜೆಡಿಎಸ್ ಅಭ್ಯರ್ಥಿ ರಾಜಮ್ಮ ಅವಿರೊದ ಆಯ್ಕೆ
- ದೇವನಹಳ್ಳಿ ವಾರ್ಡ್ ನಂ 1 - ಬಿ. ಕೋಮಾಲ, ಜೆಡಿಎಸ್ ಗೆಲುವು, ಮತಗಳು 492
- ದೇವನಹಳ್ಳಿ ವಾರ್ಡ್ 8 - ಪಕ್ಷೇತರ ಅಭ್ಯರ್ಥಿ ನಾರಾಯಣಸ್ವಾಮಿ ಗೆಲುವು
- ದೇವನಹಳ್ಳಿ ವಾರ್ಡ್ ನಂ. 14 - ಜೆಡಿಎಸ್ನ ವೈ.ಸಿ.ಸತೀಶ್ ಕುಮಾರ್ ಗೆಲುವು, ಮತಗಳು 464
- ನೆಲಮಂಗಲ ವಾರ್ಡ ನಂಬರ್ 1- ಕಾಂಗ್ರೆಸ್ ಅಭ್ಯರ್ಥಿ ಅಂಜನ ಮೂರ್ತಿ ಗೆಲವು
- ನೆಲಮಂಗಲ ವಾರ್ಡ್ ನಂಬರ್ 7- ಕಾಂಗ್ರೆಸ್ ಅಭ್ಯರ್ಥಿ ಪುರುಷೋತ್ತಮ್ ಗೆಲುವು
- ನೆಲಮಂಗಲ ವಾರ್ಡ್ ನಂಬರ್ - 15 ಕಾಂಗ್ರೆಸ್ ಅಭ್ಯರ್ಥಿ ಭಾಗ್ಯಮ್ಮ ಗೆಲುವು
- ನೆಲಮಂಗಲ ಪುರಸಭೆ 16ನೇ ವಾರ್ಡ್ ಜೆಡಿಎಸ್ ಅಭ್ಯರ್ಥಿ ಭಾರತೀ ಬಾಯಿ ಗೆಲುವು
- ನೆಲಮಂಗಲ ಪುರಸಭೆ 8ನೇ ವಾರ್ಡ್‌ನ ಜೆಡಿಎಸ್ ಅಭ್ಯರ್ಥಿ ಶಾರದ ಉಮೇಶ್ ಗೆಲುವು
- ವಾರ್ಡ್ 15ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್. ರಾಜು ಗೆಲುವು, ಮತಗಳು 362
- ವಾರ್ಡ್ 16ರಲ್ಲಿ ಕಾಂಗ್ರೆಸ್ನ ಮಂಜುಳಾ ಮೂರ್ತಿ ಗೆಲುವು, ಮತಗಳು 570
- 3ನೇ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಜಾತ ಗೆಲುವು
- ವಾರ್ಡ್ 2 - ಕಾಂಗ್ರೆಸ್ನ ಗೀತಾ ಎನ್. ಗೆಲುವು, ಮತಗಳು 360
- ವಾರ್ಡ್ 3 - ಜೆಡಿಎಸ್ನ ಡಿ. ಗೋಪಮ್ಮ ಗೆಲುವು, ಮತಗಳು 604