ಬೆಂಗಳೂರು: ಹೊರ ರಾಜ್ಯದಿಂದ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಆರೋಪಿಗಳನ್ನು ಕೆಂಪೆಗೌಡನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿನ್ನೆ ಬೆಳಗ್ಗೆ ಸುಮಾರು 9.30ರ ವೇಳೆಗೆ ಬಂಡಿಮಹಾಕಾಳಿ ದೇವಸ್ಥಾನದ ಬಳಿ ಆಟೋದಲ್ಲಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಪರಿಕಲ ವೆಂಕಟರಮಣ ಹಾಗೂ ಮುನೀರ್ ಬಾನ್ ಎಂಬ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೋರ್ವ ಅರೋಪಿ ತಲೆಮರೆಸಿಕೊಂಡಿದ್ದು, ಆತನನ್ನು ವಶಕ್ಕೆ ಪಡೆಯಲು ಬಲೆ ಬೀಸಿದ್ದಾರೆ. ಈಗಾಗಲೇ ಆರೋಪಿಗಳಿಂದ 104 ಕೆಜಿ 300 ಗ್ರಾಂ ಗಾಂಜಾ ಸೇರಿದಂತೆ ಅಟೋ ಹಾಗೂ ಇಬ್ಬರ 2 ಮೊಬೈಲ್ ವಶಪಡಿಸಿಕೊಂಡಿದ್ದಾರೆ.