ಕರ್ನಾಟಕ

karnataka

By

Published : Jan 19, 2020, 1:21 PM IST

ETV Bharat / state

ಅಂತರ ರಾಜ್ಯ ಡ್ರಗ್ಸ್ ದಂಧೆಕೋರರ ಬಂಧನ.. ಸಿಸಿಬಿಯಿಂದ ಆರೋಪಿಗಳ ವಿಚಾರಣೆ..

ಮಿಥುನ್ ದಿಗಲ್ ಹಾಗೂ ತಬರೇಷ್ ಪಾಷಾ ಬಂಧಿತರು. ನಗರದ ಉದ್ಯಮಿಗಳು, ವಿದ್ಯಾರ್ಥಿಗಳು, ಯುವಕ-ಯುವತಿಯರನ್ನು ಟಾರ್ಗೆಟ್ ಮಾಡಿ ಇವರು ಗಾಂಜಾ ಮಾರಾಟ ಮಾಡುತ್ತಿದ್ದರು.

Detention of interstate drug dealer
ಅಂತರಾಜ್ಯ ಡ್ರಗ್ಸ್ ದಂಧೆಕೋರರ ಬಂಧನ

ಬೆಂಗಳೂರು:ಸಿಲಿಕಾನ್​ ಸಿಟಿಯಲ್ಲಿ ಡ್ರಗ್ಸ್​ ಮಾರಾಟ ಮಾಡುತ್ತಿದ್ದ ಇಬ್ಬರು ಅಂತರ ರಾಜ್ಯ ಡ್ರಗ್ಸ್ ದಂಧೆಕೋರರನ್ನು ಬಂಧಿಸುವಲ್ಲಿ ಡಿಜೆಹಳ್ಳಿ ಮತ್ತು ಹೈಗ್ರೌಂಡ್ಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಿಥುನ್ ದಿಗಲ್ ಹಾಗೂ ತಬರೇಷ್ ಪಾಷಾ ಬಂಧಿತರು. ನಗರದ ಉದ್ಯಮಿಗಳು, ವಿದ್ಯಾರ್ಥಿಗಳು, ಯುವಕ-ಯುವತಿಯರನ್ನು ಟಾರ್ಗೆಟ್ ಮಾಡಿ ಇವರು ಗಾಂಜಾ ಮಾರಾಟ ಮಾಡುತ್ತಿದ್ದರು. ಅಷ್ಟೇ ಅಲ್ಲ, ಮಿಥುನ್ ದಿಗಲ್ ಬೆಂಗಳೂರಿನ ಕಂಟೋನ್ಮೆಂಟ್ ಬಸ್ ಸ್ಟಾಂಡ್ ಬಳಿ ಹಾಗೂ ತಬರೇಷ್ ಪಾಷಾ ಕಾವಲ್ ಬೈರಸಂದ್ರ ಬಳಿ ಮಾದಕ ವಸ್ತು ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದರಂತೆ. ವಿಷಯದ ತಿಳಿದ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸದ್ಯ ಆರೋಪಿಗಳಿಂದ ಪೊಲೀಸರು ಮಾದಕ ವಸ್ತು ಹಾಗೂ 3 ಲಕ್ಷ ರೂ. ವಶ ಪಡಿಸಿಕೊಂಡಿದ್ದಾರೆ.

ABOUT THE AUTHOR

...view details