ಕರ್ನಾಟಕ

karnataka

ETV Bharat / state

ಬೆಂಗಳೂರು ಪೊಲೀಸ್​​ ಬಲೆಯಲ್ಲಿ 'ಲ್ಯಾಂಡ್​' ಆದ Fly-by-night ಟೂರ್​ ಕಂಪನಿ ಮಾಲೀಕ! - ರಾಯಲ್ ಡ್ರೀಮ್ ಟು ಫ್ಲೆ ಕಂಪನಿ

ಪ್ರವಾಸಕ್ಕೆ ಕರೆದೊಯ್ಯುವುದಾಗಿ ಹೇಳಿ ನೂರಾರು ಜನರಿಂದ ಹಣ ಸಂಗ್ರಹಿಸಿ ಎಸ್ಕೇಪ್ ಆಗಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Prashant
ಪ್ರಶಾಂತ್​​

By

Published : Oct 26, 2021, 1:51 PM IST

Updated : Oct 26, 2021, 10:10 PM IST

ಬೆಂಗಳೂರು: ಟ್ರಿಪ್‌ಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಎಲ್ಲರಿಂದ ಹಣ ವಸೂಲಿ ಮಾಡಿ, ಪ್ರವಾಸಕ್ಕೂ ಕರೆದೊಯ್ಯದೆ, ಹಣವನ್ನೂ ಹಿಂದಿರುಗಿಸದೆ ನೂರಾರು ಜನರಿಗೆ ಮೋಸ ಮಾಡಿರುವ ಆರೋಪಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ವಂಚನೆಗೊಳಗಾದವರು ನೀಡಿದ ದೂರಿನ ಮೇರೆಗೆ ಸಿಸಿಬಿ ಅಧಿಕಾರಿಗಳು ರಾಯಲ್ ಡ್ರೀಮ್ ಟು ಫ್ಲೈ (Royal Dream To Fly Private Ltd.) ಕಂಪನಿಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್​​ನನ್ನು ಬಂಧಿಸಿದ್ದಾರೆ. ಸಿಸಿಬಿ ಅಧಿಕಾರಿಗಳು ಆರೋಪಿಯನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಹಸ್ತಾಂತರಿಸಿದ್ದಾರೆ.

ಸಿಸಿಬಿ ಜಂಟಿ ಪೊಲೀಸ್ ಆಯುಕ್ತರ ಹೇಳಿಕೆ

ಹಲವು ವರ್ಷಗಳ ಹಿಂದೆ ಗಿರಿನಗರದಲ್ಲಿ ರಾಯಲ್ ಡ್ರೀಮ್ ಟು ಫ್ಲೈ (Royal Dream To Fly Private Ltd.) ಕಂಪನಿ ನಡೆಸುತ್ತಿದ್ದ. ಬಣ್ಣ ಬಣ್ಣದ ಮಾತುಗಳನ್ನಾಡಿ ವಿವಿಧ ಪ್ಯಾಕೇಜ್​ ಅಡಿಯಲ್ಲಿ ಪ್ರವಾಸ ಕಳಿಸುವುದಾಗಿ ನಂಬಿಸುತ್ತಿದ್ದ. ಅಲ್ಲದೇ, ಹಣ ಕೊಟ್ಟು ತಮ್ಮ ಕಂಪನಿಗೆ ಸದಸ್ಯರಾದರೆ ಪ್ರವಾಸಕ್ಕೆ ಕರೆದೊಯ್ಯುವುದಾಗಿ ಹೇಳುತ್ತಿದ್ದ. ವಂಚಕನ ಮಾತನ್ನು ನಂಬಿದ ಜನತೆ ಹಣ ಪಾವತಿಸಿ ಸದಸ್ಯರಾಗುತ್ತಿದ್ದರಂತೆ. ತಮ್ಮ ಕಂಪನಿಗೆ ಬೇರೊಬ್ಬರನ್ನು ಸೇರಿಸಿದ್ರೆ ಹೂಡಿಕೆ ಹಣದಲ್ಲಿ ಶೇ. 25 ರಷ್ಟು ಹಣ ನೀಡೋದಾಗಿ ಭರವಸೆ ನೀಡಿದ್ದನಂತೆ.

ಆರೋಪಿ ಪ್ರಶಾಂತ್​​​​ ಚೈನ್ ಲಿಂಕ್​ ರೀತಿಯಂತೆ ವ್ಯವಹರಿಸುತ್ತಿದ್ದ. ವಿವಿಧ ಪ್ಯಾಕೇಜ್​ಗಳಡಿ ಪ್ರವಾಸಕ್ಕೆ ಕರೆದೊಯ್ಯುವುದಾಗಿ ಜನರನ್ನು ನಂಬಿಸುತ್ತಿದ್ದ. ಹೀಗಾಗಿ ನೂರಾರು ಜನರು ಹಣ ಹೂಡಿಕೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ: ಪೊಕ್ಸೊ ಕಾಯ್ದೆಯಡಿ ದೈಹಿಕ ಶಿಕ್ಷಣ ನಿರ್ದೇಶಕನ ಬಂಧನ

ಮೊದಲ ಬಾರಿ ಹಣ ಹೂಡಿಕೆ ಮಾಡಿದವರಿಗೆ ತಮ್ಮ ಕಂಪನಿಯ ಬಗ್ಗೆ ನಂಬಿಕೆ ಗಿಟ್ಟಿಸಲು ಮೊದಮೊದಲು ಪ್ರವಾಸಕ್ಕೆ ಕರೆದೊಯ್ದಿದ್ದ. ಕಂಪನಿಯಲ್ಲಿ ಸದಸ್ಯರು ಹೆಚ್ಚಾಗುತ್ತಿದ್ದಂತೆ ತನ್ನ ಅಸಲಿ ವರಸೆ ತೋರಿಸೋಕೆ ಶುರು ಮಾಡಿದ್ದಾನೆ. ಇತ್ತೀಚೆಗೆ ಗಿರಿನಗರದಿಂದ ಕಚೇರಿಯನ್ನು ಬದಲಾಯಿಸಿದ್ದ. ಆದರೆ, ಆರೋಪಿಯ ಬೆನ್ನತ್ತಿದ ಪೊಲೀಸರು ಕೆಲವೇ ದಿನಗಳಲ್ಲಿ ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

Last Updated : Oct 26, 2021, 10:10 PM IST

ABOUT THE AUTHOR

...view details