ಕರ್ನಾಟಕ

karnataka

ETV Bharat / state

ಬೆಂಗಳೂರಿನಿಂದ ಗೋವಾಕ್ಕೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಮೂವರ ಬಂಧನ - ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಮೂವರ ಬಂಧನ

ಗೋವಾಕ್ಕೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಆರೋಪದಡಿ ನಗರದ ಅಪಾರ್ಟ್​ಮೆಂಟ್​ವೊಂದರ ಮೇಲೆ ಕೇಂದ್ರ ಮಾದಕ ದ್ರವ್ಯ ನಿಗ್ರಹ ದಳ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Detention of Drugs Supply three arrested in Bangalore
ಬಂಧನ

By

Published : Jan 11, 2020, 7:57 PM IST

ಬೆಂಗಳೂರು:‌ ಗೋವಾಕ್ಕೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಆರೋಪದಡಿ ನಗರದ ಅಪಾರ್ಟ್​ಮೆಂಟ್​ವೊಂದರ ಮೇಲೆ ಕೇಂದ್ರ ಮಾದಕ ದ್ರವ್ಯ ನಿಗ್ರಹ ದಳ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಡ್ರಗ್ಸ್

ಸಂಜಯನಗರದ ಅಪಾರ್ಟ್​ಮೆಂಟ್​ವೊಂದರ ಮೇಲೆ ದಾಳಿ ನಡೆಸಿ ಮುಹಾದ್ ಮುಸೀನ್, ಆಸೀಫ್ ಪತನ್, ಎಂ.ಡಿ.ಅಜರುದ್ದೀನ್ ಬಂಧಿತ ಆರೋಪಿಗಳು. ಇವರು ಅಪಾರ್ಟ್​ಮೆಂಟ್​ನಲ್ಲಿ ವಿವಿಧ ಮಾದರಿಯ ಡ್ರಗ್ಸ್​ಗಳನ್ನು ಸಂಗ್ರಹಿಸಿಟ್ಟು, ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಮಾರಾಟ ಮಾಡುತ್ತಿದ್ದರು. ಅಲ್ಲದೇ ಹೆಚ್ಚಾಗಿ ಪಾರ್ಟಿಗಳಲ್ಲಿ ತೊಡಗಿಸುವಕೊಳ್ಳುವವರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಇವರು ಗೋವಾಕ್ಕೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು. ಮನೆಯಲ್ಲಿ‌ ಅಡಗಿಸಿಟ್ಟಿದ್ದ 1.5 ಕೆ.ಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಎನ್​ಡಿಪಿಎಸ್ ನ್ಯಾಯಾಲಯಕ್ಕೆ ಹಾಜರುಪಡಿಸಿ 6 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ‌.

ABOUT THE AUTHOR

...view details