ಕರ್ನಾಟಕ

karnataka

ETV Bharat / state

ರೆಡ್ ಸ್ಯಾಂಡಲ್ ಸ್ಮಗ್ಲಿಂಗ್.. ಸಿಸಿಬಿಯಿಂದ ಬಂಧಿತ ಆರೋಪಿಗಳ ಮೇಲೆ ಕೋಕಾ ಆ್ಯಕ್ಟ್‌ನಡಿ ಕೇಸ್‌? - undefined

ಕಳೆದ 17 ರಂದು ನಗರ ಹಾಗೂ ಹೊರವಲಯದಲ್ಲಿ ಹಬ್ಬಿದ್ದ ಬೃಹತ್ ರಕ್ತಚಂದನ ಸ್ಮಗ್ಲಿಂಗ್ ಜಾಲವನ್ನ ಸಿಸಿಬಿ ಭೇದಿಸಿತ್ತು. ದಾಳಿ ವೇಳೆ ಸುಮಾರು ನಾಲ್ಕು ಸಾವಿರ ಕೆಜಿ ರೆಡ್ ಸ್ಯಾಂಡಲ್‌ ಪತ್ತೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಮಗ್ಲಿಂಗ್ ಮಾಡುತ್ತಿದ್ದ ಅಬ್ಧುಲ್ ರಶೀದ್ ಹಾಗೂ 13 ಕುಖ್ಯಾತ ಆರೋಪಿಗಳನ್ನ ಬಂಧಿಸಲಾಗಿತ್ತು. ಸದ್ಯ ಅಷ್ಟೂ ಆರೋಪಿಗಳ ಮೇಲೆ ಕೋಕಾ ಆ್ಯಕ್ಟ್​​​ ಹಾಕಲು ಸಿಸಿಬಿ ಸಿದ್ಧತೆ ನೆಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ‌.

ರೆಡ್ ಸ್ಯಾಂಡಲ್ ಸ್ಮಗ್ಲಿಂಗ್

By

Published : May 26, 2019, 8:05 AM IST

ಬೆಂಗಳೂರು : ಕರ್ನಾಟಕದ ಸಂಪತ್ತು ರೆಡ್ ಸ್ಯಾಂಡಲ್ ಮೇಲೆ ಕೈ ಇಟ್ಟವರ ವಿರುದ್ಧ ಕೋಕಾ ಕಾಯಿದೆ ಅಸ್ತ್ರ ಪ್ರಯೋಗಿಸಲು ಸಿಸಿಬಿ ಸಿದ್ಧತೆ ನೆಡೆಸಿದೆ‌.

ಸದ್ಯ ಅಷ್ಟೂ ಆರೋಪಿಗಳ ಮೇಲೆ ಕೋಕಾ ಕೇಸ್ ಹಾಕಲು ಸಿಸಿಬಿ ಸಿದ್ಧತೆ ನೆಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ‌. ಹತ್ತಾರು ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಆರೋಪಿಗಳ ವಿರುದ್ಧ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ( ಕೋಕಾ ) ಅಸ್ತ್ರ ಪ್ರಯೋಗಿಸಲು ಸಿಸಿಬಿ ಸಿದ್ಧತೆ ಮಾಡಿಕೊಂಡಿದ್ದು, ಆ ಮೂಲಕ ರೆಡ್ ಸ್ಯಾಂಡಲ್ ಜಾಲದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮುಂಬೈ ಸೇರಿದಂತೆ ಹಲವು ರಾಜ್ಯಗಳಿಗೆ ಬೇಕಾಗಿದ್ದ ಆರೋಪಿಗಳಿಗೆ ಬಿಸಿ ಮುಟ್ಟಿಸಲು ರೆಡಿಯಾಗಿದೆ.

ಕೋಕಾ ಕಾಯ್ದೆ ಎಂದರೇನು?

ಇಬ್ಬರು ಮತ್ತು ಅದಕ್ಕಿಂತ ಹೆಚ್ಚು ಜನ ಒಟ್ಟಿಗೆ ಸೇರಿ ಮಾಡುವ ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಬಳಕೆಯಾಗುವ ಕಾಯ್ದೆಯೇ ಕೋಕಾ. ಇದರನ್ವಯ ಆರೋಪಿಗಳಿಗೆ ಮಾಮೂಲಿ ಪ್ರಕರಣಗಳಂತೆ ಸುಲಭವಾಗಿ ಜಾಮೀನು ಸಿಗುವುದಿಲ್ಲ. ಕನಿಷ್ಠ ಆರು ತಿಂಗಳವರೆಗೂ ಜಾಮೀನು ಸಿಗುವುದು ಕಷ್ಟ. ಕೋಕಾ ಕಾಯ್ದೆ ಆರೋಪ ಸಾಬೀತಾದ್ಯರೇ ಜೀವನ ಪರ್ಯಂತ ಜೈಲಾಗಬಹುದು. ಅಥವಾ ಐದು ಲಕ್ಷದವರೆಗೂ ದಂಡ ಹಾಗೂ ಎರಡನ್ನು ವಿಧಿಸಬಹುದು. ಕೋಕಾ ಪ್ರಕರಣಗಳ ವಿಚಾರಣೆ ಸಹ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ. ಕೋಕಾ‌ ಆ್ಯಕ್ಟ್‌ನಲ್ಲಿ ಆರೋಪಿಗಳನ್ನು ಗರಿಷ್ಠ 30 ದಿನ ವಿಚಾರಣೆಗೆ ವಶಕ್ಕೆ ಪಡೆಯಲು ಪೊಲೀಸರಿಗೆ ಅವಕಾಶವಿರಲಿದೆ.

For All Latest Updates

TAGGED:

ABOUT THE AUTHOR

...view details