ಕರ್ನಾಟಕ

karnataka

ETV Bharat / state

ಜಾರಕಿಹೊಳಿ ವಿರುದ್ಧದ ದೂರು: ವಿಸ್ತೃತ ತನಿಖೆ ಭರವಸೆ ನೀಡಿದ ಬೊಮ್ಮಾಯಿ - ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಬಗ್ಗೆ ಬೊಮ್ಮಾಯಿ ಹೇಳಿಕೆ

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೋ ಬಹಿರಂಗಗೊಂಡಿದ್ದು, ಸಂತ್ರಸ್ತೆ ಪರ ಮಾಹಿತಿ ಹಕ್ಕು ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನಗರ ಪೊಲೀಸ್ ಆಯುಕ್ತರಿಗೆ ನೀಡಿದ್ದಾರೆ. ಈ ದೂರನ್ನು ಈಗ ಕಬ್ಬನ್ ಪಾರ್ಕ್ ಠಾಣೆಗೆ ವರ್ಗಾಯಿಸಲಾಗಿದೆ. ಈ ಪ್ರಕರಣ ಕುರತಂತೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸಚಿವ ಬಸವರಾಜ ಬೊಮ್ಮಾಯಿ
Basavaraj Bommai

By

Published : Mar 3, 2021, 10:32 AM IST

Updated : Mar 3, 2021, 11:03 AM IST

ಬೆಂಗಳೂರು:ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ

ಆರ್‌ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಪ್ರಕರಣದ ವಿಚಾರವಾಗಿ ನಾನು ಸಿಎಂ ಭೇಟಿಯಾಗಿಲ್ಲ. ಈಗಾಗಲೇ ಒಂದು ದೂರು ಕಬ್ಬನ್ ಪಾರ್ಕ್ ಸ್ಟೇಷನ್‌ನಲ್ಲಿ ದಾಖಲಾಗಿದೆ. ಈ ಬಗ್ಗೆ ವಿಸ್ತೃತ ತನಿಖೆ ಮಾಡಲಿದ್ದೇವೆ ಎಂದರು.

ಓದಿ: ಸಿಎಂ ಸಚಿವರ ರಾಜೀನಾಮೆ ಪಡೆಯಲಿ: ಧ್ರುವ ನಾರಾಯಣ್

ಈ ವಿಚಾರದಲ್ಲಿ ಪಕ್ಷದ ನಿಲುವು, ಹಿರಿಯರ ನಿಲುವು ಅವರೇ ಪ್ರಕಟ ಮಾಡುತ್ತಾರೆ. ಅದರ ಬಗ್ಗೆ ಮಾತನಾಡುವ ಅಧಿಕಾರ ನನಗಿಲ್ಲ. ಇದೆಲ್ಲವೂ ನಮ್ಮ ಗಮನದಲ್ಲಿದೆ. ಪಕ್ಷ ಮತ್ತು ಹಿರಿಯರು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ತನಿಖೆಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುವುದು ಎಂದರು.

Last Updated : Mar 3, 2021, 11:03 AM IST

ABOUT THE AUTHOR

...view details