ಬೆಂಗಳೂರು: ಮಹಾಮಾರಿ ಕೋವಿಡ್-19 ನಿಯಂತ್ರಣಕ್ಕೆ ಪ್ರಧಾನಿಗಳು ಕೈಗೊಂಡಿರುವ ನಿರ್ಧಾರಗಳನ್ನು ಶ್ಲಾಘಿಸಿ ಮಾಜಿ ಸಚಿವ ಹಾಗೂ ಶಾಸಕ ಆರ್.ವಿ.ದೇಶಪಾಂಡೆ ಪತ್ರ ಬರೆದಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಪ್ರಧಾನಿ ಕೈಗೊಂಡ ನಿರ್ಧಾರಕ್ಕೆ ದೇಶಪಾಂಡೆ ಶ್ಲಾಘನೆ - ಕೋವಿಡ್ ನಿಯಂತ್ರಣಕ್ಕೆ ಪ್ರಧಾನಿ ಕೈಗೊಂಡ ನಿರ್ಧಾರ ಶ್ಲಾಘಿಸಿದ ದೇಶಪಾಂಡೆ
ದೇಶದಲ್ಲಿ ಕುಸಿಯುತ್ತಿರುವ ಆರ್ಥಿಕ ಪರಿಸ್ಥಿತಿ ಹಳಿಗೆ ತರಲು ಆರ್ಥಿಕ ಟಾಸ್ಕ್ ಫೋರ್ಸ್ ರಚನೆ ಕ್ರಮ ಸ್ವಾಗತಾರ್ಹ. ಇದು ದೇಶದ ಜನರಲ್ಲಿ ಭರವಸೆ ಹಾಗೂ ಆತ್ಮವಿಶ್ವಾಸ ಮೂಡಿಸಿದೆ ಎಂದು ಆರ್.ವಿ.ದೇಶಪಾಂಡೆ ಪತ್ರ ಬರೆದಿದ್ದಾರೆ.
![ಕೊರೊನಾ ನಿಯಂತ್ರಣಕ್ಕೆ ಪ್ರಧಾನಿ ಕೈಗೊಂಡ ನಿರ್ಧಾರಕ್ಕೆ ದೇಶಪಾಂಡೆ ಶ್ಲಾಘನೆ R V Deshpande news](https://etvbharatimages.akamaized.net/etvbharat/prod-images/768-512-6484937-thumbnail-3x2-deshpande.jpg)
ದೇಶದಲ್ಲಿ ಕುಸಿಯುತ್ತಿರುವ ಆರ್ಥಿಕ ಪರಿಸ್ಥಿತಿ ಹಳಿಗೆ ತರಲು ಆರ್ಥಿಕ ಟಾಸ್ಕ್ ಫೋರ್ಸ್ ರಚನೆ ಕ್ರಮ ಸ್ವಾಗತಾರ್ಹ. ಇದು ದೇಶದ ಜನರಲ್ಲಿ ಭರವಸೆ ಹಾಗೂ ಆತ್ಮವಿಶ್ವಾಸ ಮೂಡಿಸಿದೆ ಎಂದಿದ್ದಾರೆ. ವಿಶ್ವದಲ್ಲಿಯೇ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದರ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು. ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ನಿರ್ಮಲಾ ಸೀತಾರಾಮನ್ ಅವರಿಗೂ ಪತ್ರ ಬರೆದಿದ್ದಾರೆ.
ಆರ್ಥಿಕ ಟಾಸ್ಕ್ ಫೋರ್ಸ್ಗೆ ಅಧ್ಯಕ್ಷರಾಗಿ ನೇಮಕಗೊಂಡಿದ್ದಕ್ಕೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ. ಕೂಡಲೇ ಕೆಲವು ಆರ್ಥಿಕ ನೆರವು ನೀಡುವ ನಿರ್ಧಾರಗಳನ್ನು ಕೈಗೊಳ್ಳಿ. ಆರ್ಥಿಕವಾಗಿ ಉಂಟಾದ ನಷ್ಟ ಭರಿಸಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ. ಈಗಾಗ್ಲೇ ಈ ನಿಟ್ಟಿನಲ್ಲಿ ಹಲವು ದೇಶಗಳು ಕ್ರಮ ಕೈಗೊಂಡಿವೆ ಎಂದಿದ್ದಾರೆ.