ಬೆಂಗಳೂರು: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ (ಯತ್ನಾಳ್) ಕುರಿತು ಶಾಸಕರ ಭವನದಲ್ಲಿನ ಕೊಠಡಿ ಬಾಗಿಲಿಗೆ ಅವಹೇಳನಕಾರಿ ಪೋಸ್ಟರ್ ಅಂಟಿಸಿರುವ ಘಟನೆ ಇಂದು ನಡೆದಿದೆ.
ಯತ್ನಾಳ್ ಅವರನ್ನು ಬಿಲ್ ಲಾಡೆನ್ಗೆ ಹೋಲಿಸಿ ಭಿತ್ತಿಪತ್ರ ಅಂಟಿಸಲಾಗಿದೆ. ಕೊಠಡಿಯಲ್ಲಿ ಯಾರೂ ಇಲ್ಲದ ವೇಳೆ ಬಂದ ಕಿಡಿಗೇಡಿಗಳು ಬಾಗಿಲು, ಗೋಡೆ ಮೇಲೆ ಪೋಸ್ಟರ್ ಅಂಟಿಸಿದ್ದಾರೆ. ಶಾಸಕರ ಭವನ 5ನೇ ಬ್ಲಾಕ್ ನಲ್ಲಿನ ಯತ್ನಾಳ್ ಕೊಠಡಿ ಸಂಖ್ಯೆ 2001ರಲ್ಲಿ ಈ ರೀತಿ ವಿಕೃತಿ ಮೆರೆಯಲಾಗಿದೆ.