ಕರ್ನಾಟಕ

karnataka

ETV Bharat / state

ಉಪ ಲೋಕಾಯುಕ್ತ ನ್ಯಾಯಮೂರ್ತಿ ಎನ್​. ಆನಂದ್ ನಿವೃತ್ತಿ - ಉಪ ಲೋಕಾಯುಕ್ತ ಎನ್ ಆನಂದ್ ನಿವೃತ್ತಿ

ಉಪ ಲೋಕಾಯುಕ್ತ ಹುದ್ದೆಯಿಂದ ನಿವೃತ್ತರಾದ ನ್ಯಾಯಮೂರ್ತಿ ಎನ್. ಆನಂದ್ ಅವರಿಗೆ ಕರ್ನಾಟಕ ಲೋಕಾಯುಕ್ತದ ಪ್ರಧಾನ ಕಚೇರಿಯಲ್ಲಿ ಬುಧವಾರ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

Deputy Lokayukta Anand retirment
ಎನ್​. ಆನಂದ್ ನಿವೃತ್ತಿ

By

Published : Dec 17, 2020, 1:28 PM IST

ಬೆಂಗಳೂರು: ಕರ್ನಾಟಕ ಲೋಕಾಯುಕ್ತದ ಉಪ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಎನ್. ಆನಂದ್​ ತಮ್ಮ ಐದು ವರ್ಷಗಳ ಸೇವಾ ಅವಧಿ ಪೂರ್ಣಗೊಳಿಸಿ ಬುಧವಾರ ನಿವೃತ್ತರಾದರು.

ನಿವೃತ್ತರಾದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತದ ಪ್ರಧಾನ ಕಚೇರಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ವೇಳೆ ಮಾತನಾಡಿದ ಅವರು, ತಮ್ಮ ಸೇವಾವಧಿಯಲ್ಲಿ ಮಾಡಿದ ಕೆಲಸವು ತಮಗೆ ತೃಪ್ತಿ ತಂದಿದೆ ಎಂದು ಮತ್ತು ಸಂಸ್ಥೆಯ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ತಾವು ಸೇವೆಯನ್ನು ಸಲ್ಲಿಸಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಮಾತನಾಡಿ, ನ್ಯಾಯಮೂರ್ತಿ ಎನ್. ಆನಂದ್ ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾದ ಯಾವುದೇ ಕೆಲಸವನ್ನು ಮಾಡದೆ ತಮ್ಮ ಸೇವಾವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಹೇಳುತ್ತಾ ಅವರ ಕಾರ್ಯವೈಖರಿಯ ಒಳ್ಳೆಯ ಗುಣಗಳನ್ನು ಅನುಕರಣೆ ಮಾಡುವುದೇ ನಾವೆಲ್ಲರೂ ಅವರಿಗೆ ನೀಡಬಹುದಾದ ಗೌರವವೆಂದು ತಿಳಿಸಿದರು.

ಬುಧವಾರ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್, ಕರ್ನಾಟಕ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಡಾ. ಎ.ಎಸ್.ಎನ್.ಮೂರ್ತಿ, ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ, ಅಪರ ನಿಬಂಧಕರು ವಿ.ಜಿ.ಬೋಪಯ್ಯ ಅವರು ಆನಂದ್​ ಅವರ ಜೊತೆಗಿನ ಒಡನಾಟದ ಬಗ್ಗೆ ಸ್ಮರಿಸಿದರು.

ಓದಿ...ಡ್ರಗ್ ಕೇಸ್​: ಆದಿತ್ಯಾ ಆಳ್ವಾ ಜಾಮೀನು ಅರ್ಜಿ ವಿಚಾರಣೆ ನಿರಾಕರಿಸಿದ ಸುಪ್ರೀಂಕೋರ್ಟ್

ABOUT THE AUTHOR

...view details