ಕರ್ನಾಟಕ

karnataka

ETV Bharat / state

2023-24ರ ಬಜೆಟ್ ವರ್ಷದ 9 ತಿಂಗಳಲ್ಲಿ ರಾಜ್ಯದ ಇಲಾಖಾವಾರು ಆರ್ಥಿಕ ಪ್ರಗತಿ ಹೀಗಿದೆ

ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಕೇಂದ್ರೀಕೃತ ಮೊದಲ ಬಜೆಟ್ ಮಂಡಿಸಿತ್ತು. ಈಗಾಗಲೇ ಆರ್ಥಿಕ ವರ್ಷದ 9 ತಿಂಗಳು ಕಳೆದಿದೆ. ಸದ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಮಾಹಿತಿ ಇಲ್ಲಿದೆ.

Etv Bharatdepartment-wise-financial-progress-in-nine-months-of-budget-2023-24
2023-24ರ ಬಜೆಟ್ ವರ್ಷದ ಒಂಬತ್ತು ತಿಂಗಳಲ್ಲಿ ಇಲಾಖಾವಾರು ಆರ್ಥಿಕ ಪ್ರಗತಿ ಹೀಗಿದೆ

By ETV Bharat Karnataka Team

Published : Jan 8, 2024, 8:06 AM IST

ಬೆಂಗಳೂರು:2023-24ರ ಬಜೆಟ್ ವರ್ಷದ ಒಂಬತ್ತು ತಿಂಗಳು ಕಳೆದಿವೆ. ಇನ್ನೇನು 2024-25ನೇ ಸಾಲಿನ‌ ಆಯವ್ಯಯ ಮಂಡನೆಗೆ ಸಿಎಂ‌ ಸಿದ್ದರಾಮಯ್ಯ ತಯಾರಿ ನಡೆಸುತ್ತಿದ್ದಾರೆ. ಪಂಚ ಗ್ಯಾರಂಟಿ ಕೇಂದ್ರೀಕೃತ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ತನ್ನ ಮೊದಲ ಬಜೆಟ್ ಅನುಷ್ಠಾನದ ಆರ್ಥಿಕ ಪ್ರಗತಿಯ ಸ್ಥಿತಿಗತಿ ಹೇಗಿದೆ ಎಂಬ ವರದಿ ಇದು.

ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಹೊರೆ ಹಾಗೂ ಬರದ ಬರೆಯೊಂದಿಗೆ ಆಡಳಿತದ ನೊಗ ಹೊತ್ತಿದೆ.‌ ಅಭಿವೃದ್ಧಿ ಕಾಯ್ದುಕೊಳ್ಳುವ ಜೊತೆಗೆ ಸಮತೋಲಿತ ಬಜೆಟ್ ಅನುಷ್ಠಾನ ಮಾಡುವ ಸವಾಲು ಸಿದ್ದರಾಮಯ್ಯ ಸರ್ಕಾರದ ಮೇಲಿದೆ. ಬಜೆಟ್ ವರ್ಷದ ಒಂಬತ್ತು ತಿಂಗಳಲ್ಲಿ ಇಲಾಖಾವಾರು ಕೆಡಿಪಿ ಆರ್ಥಿಕ ಪ್ರಗತಿಯ ಸ್ಥಿತಿಗತಿ ಹೀಗಿದೆ.

ಬಜೆಟ್ ವರ್ಷದ 9 ತಿಂಗಳಲ್ಲಿ 53% ಪ್ರಗತಿ:ಕೆಡಿಪಿ ಪ್ರಗತಿ ಅಂಕಿ-ಅಂಶದ ಪ್ರಕಾರ 2023-24ರ ಬಜೆಟ್ ವರ್ಷದ ಒಂಬತ್ತು ತಿಂಗಳಲ್ಲಿ ಇಲಾಖಾವಾರು ಒಟ್ಟು 53% ಆರ್ಥಿಕ ಪ್ರಗತಿ ಕಂಡಿದೆ. ಈ ಬಾರಿ ಎಲ್ಲಾ ಇಲಾಖೆಗಳಿಗೆ ಒಟ್ಟು 2,96,683 ಕೋಟಿ ರೂ. ಬಜೆಟ್ ಅನುದಾನ ಹಂಚಿಕೆ ಮಾಡಲಾಗಿದೆ. ಈ ಪೈಕಿ ಡಿಸೆಂಬರ್​​ವರೆಗೆ ಒಟ್ಟು 1,82,940.51 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಅಂದರೆ ಒಟ್ಟು ಹಂಚಿಕೆಯಲ್ಲಿ 62%ರಷ್ಟು ಬಜೆಟ್ ಅನುದಾನ ಬಿಡುಗಡೆ ಮಾಡಲಾಗಿದೆ.

ಡಿಸೆಂಬರ್​​​​ವರೆಗೆ ವಿವಿಧ ಇಲಾಖೆಗಳಿಗೆ ಒಟ್ಟು 1,57,299 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆ ಮೂಲಕ ಒಟ್ಟು ಹಂಚಿಕೆ ಎದುರು 53.02% ಆರ್ಥಿಕ ಪ್ರಗತಿ ಆಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಇದೇ ಅವಧಿಗೆ ಹೋಲಿಸಿದರೆ ಈ ಸಲ ಇಲಾಖಾವಾರು ಆರ್ಥಿಕ ಪ್ರಗತಿ ಸುಮಾರು 10% ಅಧಿಕವಾಗಿದೆ. ಕಳೆದ ಬಾರಿ ಈ ಅವಧಿಗೆ 43%ರಷ್ಟು ಆರ್ಥಿಕ ಪ್ರಗತಿ ಇತ್ತು.

40%ಗೂ ಕಡಿಮೆ ಆರ್ಥಿಕ ಪ್ರಗತಿ ಕಂಡ ಇಲಾಖೆಗಳು:ತೋಟಗಾರಿಕೆ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ವಸತಿ, ಸಹಕಾರ, ಐಟಿಬಿಟಿ, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ‌, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳು ಏಪ್ರಿಲ್​ನಿಂದ ಡಿಸೆಂಬರ್​​ವರೆಗೆ 40%ಗೂ ಕಡಿಮೆ ಆರ್ಥಿಕ ಪ್ರಗತಿ ಕಂಡಿವೆ.

ಮೀನುಗಾರಿಕೆ ಇಲಾಖೆ, ಯುವ ಸಬಲೀಕರಣ, ಕೃಷಿ, ಪ.ಪಂಗಡ ಕಲ್ಯಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅರಣ್ಯ ಮತ್ತು ಪರಿಸರ, ಸಾರಿಗೆ, ಕೌಶಲ್ಯಾಭಿವೃದ್ಧಿ, ಜಲಸಂಪನ್ಮೂಲ, ಸಣ್ಣ ನೀರಾವರಿ, ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆಗಳು 50% ಮೇಲ್ಪಟ್ಟು ಆರ್ಥಿಕ ಪ್ರಗತಿ ಆಗಿವೆ.

ತೋಟಗಾರಿಕೆ ಇಲಾಖೆ:

  • ಅನುದಾನ ಹಂಚಿಕೆ- 1,196 ಕೋಟಿ ರೂ‌.
  • ಬಿಡುಗಡೆ- 756 ಕೋಟಿ ರೂ.
  • ವೆಚ್ಚ- 477 ಕೋಟಿ ರೂ.
  • ಪ್ರಗತಿ- 39.92%

ಸಹಕಾರ ಇಲಾಖೆ:

  • ಅನುದಾನ ಹಂಚಿಕೆ- 2,276 ಕೋಟಿ
  • ಬಿಡುಗಡೆ- 924 ಕೋಟಿ
  • ವೆಚ್ಚ- 864 ಕೋಟಿ
  • ಪ್ರಗತಿ- 37.95%

ಕೃಷಿ ಇಲಾಖೆ:

  • ಅನುದಾನ ಹಂಚಿಕೆ- 4,120 ಕೋಟಿ
  • ಬಿಡುಗಡೆ- 2,678 ಕೋಟಿ
  • ವೆಚ್ಚ- 2,169 ಕೋಟಿ
  • ಪ್ರಗತಿ- 52.63%

ಗ್ರಾಮೀಣಾಭಿವೃದ್ಧಿ ಇಲಾಖೆ:

  • ಅನುದಾನ ಹಂಚಿಕೆ- 24,050 ಕೋಟಿ
  • ಬಿಡುಗಡೆ- 8,052 ಕೋಟಿ
  • ವೆಚ್ಚ- 9,502 ಕೋಟಿ
  • ಪ್ರಗತಿ- 39.51%

ವಸತಿ ಇಲಾಖೆ:

  • ಅನುದಾನ ಹಂಚಿಕೆ- 5,850 ಕೋಟಿ
  • ಬಿಡುಗಡೆ- 1,351 ಕೋಟಿ
  • ವೆಚ್ಚ- 2,310 ಕೋಟಿ
  • ಪ್ರಗತಿ- 39.50%

ಲೋಕೋಪಯೋಗಿ ಇಲಾಖೆ:

  • ಅನುದಾನ ಹಂಚಿಕೆ- 9,645 ಕೋಟಿ
  • ಬಿಡುಗಡೆ- 6,132 ಕೋಟಿ
  • ವೆಚ್ಚ- 5,602 ಕೋಟಿ
  • ಪ್ರಗತಿ- 58.08%

ಇಂಧನ ಇಲಾಖೆ:

  • ಅನುದಾನ ಹಂಚಿಕೆ- 22772 ಕೋಟಿ
  • ಬಿಡುಗಡೆ- 13,900 ಕೋಟಿ
  • ವೆಚ್ಚ- 13,888 ಕೋಟಿ
  • ಪ್ರಗತಿ- 61%

ಸಣ್ಣ ನೀರಾವರಿ ಇಲಾಖೆ:

  • ಅನುದಾನ ಹಂಚಿಕೆ- 2,332 ಕೋಟಿ
  • ಬಿಡುಗಡೆ- 1,436 ಕೋಟಿ
  • ವೆಚ್ಚ- 1,353 ಕೋಟಿ
  • ಪ್ರಗತಿ- 58.03%

ಆರೋಗ್ಯ ಇಲಾಖೆ:

  • ಅನುದಾನ ಹಂಚಿಕೆ- 11,803 ಕೋಟಿ
  • ಬಿಡುಗಡೆ- 6,618 ಕೋಟಿ
  • ವೆಚ್ಚ- 6,309 ಕೋಟಿ
  • ಪ್ರಗತಿ- 53.45%

ಶಿಕ್ಷಣ ಇಲಾಖೆ:

  • ಅನುದಾನ ಹಂಚಿಕೆ- 32,374 ಕೋಟಿ
  • ಬಿಡುಗಡೆ- 26,003 ಕೋಟಿ
  • ವೆಚ್ಚ- 19,348 ಕೋಟಿ
  • ಪ್ರಗತಿ- 59.76%

ಸಮಾಜ ಕಲ್ಯಾಣ ಇಲಾಖೆ:

  • ಅನುದಾನ ಹಂಚಿಕೆ- 4,433 ಕೋಟಿ
  • ಬಿಡುಗಡೆ- 3,113 ಕೋಟಿ
  • ವೆಚ್ಚ- 2,592 ಕೋಟಿ
  • ಪ್ರಗತಿ- 58.47%

ಜಲಸಂಪನ್ಮೂಲ ಇಲಾಖೆ:

  • ಅನುದಾನ ಹಂಚಿಕೆ- 17,188 ಕೋಟಿ
  • ಬಿಡುಗಡೆ- 7,699 ಕೋಟಿ
  • ವೆಚ್ಚ- 9,672 ಕೋಟಿ
  • ಪ್ರಗತಿ- 56.27%

ಸಾರಿಗೆ ಇಲಾಖೆ:

  • ಅನುದಾನ ಹಂಚಿಕೆ- 4,961 ಕೋಟಿ
  • ಬಿಡುಗಡೆ- 2,813 ಕೋಟಿ
  • ವೆಚ್ಚ- 2,168 ಕೋಟಿ
  • ಪ್ರಗತಿ- 52.63%

ಕಂದಾಯ ಇಲಾಖೆ:

  • ಅನುದಾನ ಹಂಚಿಕೆ- 2,717 ಕೋಟಿ
  • ಬಿಡುಗಡೆ- 2,132 ಕೋಟಿ
  • ವೆಚ್ಚ- 1,638 ಕೋಟಿ
  • ಪ್ರಗತಿ- 60.27%

ABOUT THE AUTHOR

...view details