ಕರ್ನಾಟಕ

karnataka

ETV Bharat / state

ಬಜೆಟ್​ನಲ್ಲಿ ಜಲಸಂಪನ್ಮೂಲ ಇಲಾಖೆಗೆ‌ ಸಿಗುತ್ತಾ ಭರಪೂರ ಕೊಡುಗೆ? - Waterresource deapartment Budget

ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡನೆ ಮಾಡಲಿದ್ದು, ಈ ಬಾರಿ ನೀರಾವರಿ ಕ್ಷೇತ್ರದ ನಿರೀಕ್ಷೆ ದೊಡ್ಡದಾಗಿದೆ.

department-of-water-resources-expectation-in-budget
ಬಜೆಟ್​ನಲ್ಲಿ ಜಲಸಂಪನ್ಮೂಲ ಇಲಾಖೆಗೆ‌ ಸಿಗುತ್ತಾ ಭರಪೂರ ಕೊಡುಗೆ?

By

Published : Mar 4, 2020, 11:40 AM IST

ಬೆಂಗಳೂರು: ನಾಳೆ ಸಿಎಂ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡನೆ ಮಾಡಲಿದ್ದು, ಈ ಬಾರಿ ನೀರಾವರಿ ಕ್ಷೇತ್ರದ ನಿರೀಕ್ಷೆ ದೊಡ್ಡದಾಗಿದೆ.

ಮಹಾದಾಯಿ ಗೆಜೆಟ್​ ನೋಟಿಫಿಕೇಶನ್ ಹೊರಡಿಸಿರುವುದರಿಂದ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನದ ನಿರೀಕ್ಷೆ ಇದೆ. ಕೃಷ್ಣ, ಕಾವೇರಿ ಕೊಳ್ಳದ ಯೋಜನೆಗಳಿಗೆ ಹೆಚ್ಚಿನ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ. ಮಹದಾಯಿ ಅನುಷ್ಠಾನ, ಆಲಮಟ್ಟಿ ಜಲಾಶಯದಲ್ಲಿ ಹೆಚ್ಚುವರಿ ನೀರು‌ ಸಂಗ್ರಹಕ್ಕೆ ಕ್ರಮ, ಕೃಷ್ಣ ಮೇಲ್ದಂಡೆ ಯೋಜನೆಯ 3 ನೇ ಹಂತದ ಪುನರ್ವಸತಿ ಪುನರ್ ನಿರ್ಮಾಣ ಕಾರ್ಯ, ಮೇಕೆದಾಟು ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಹಣವನ್ನು ಮೀಸಲಿರಿಸಬೇಕಿದೆ.

ನೀರಾವರಿ ಯೋಜನೆಗಳಿಗೆ ಒಂದು ಲಕ್ಷ ಕೋಟಿಯಷ್ಟು ಹಣ ಬೇಕು ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ ನೀಡುವ ಜೊತೆಗೆ ಬಾಕಿ ಇರುವ ಎಲ್ಲ ಯೋಜನೆ ಬದಿಗೊತ್ತಿ ನೀರಾವರಿ ಕ್ಷೇತ್ರಕ್ಕೆ ಆದ್ಯತೆ ನೀಡುತ್ತೇನೆ ಎಂದು ಹುಟ್ಟುಹಬ್ಬದ ದಿನ ನಾಡಿನ ಜನತೆಗೆ ಭರವಸೆ ನೀಡಿದ್ದಾರೆ. ಈ ಬಾರಿ ನೀರಾವರಿ ಇಲಾಖೆಗೆ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇದೆ.15,998 ಕೋಟಿಯಷ್ಟು ಹಣವನ್ನು ಸಿದ್ದರಾಮಯ್ಯ ಸರ್ಕಾರ ನೀರಾವರಿ ಕ್ಷೇತ್ರಕ್ಕೆ ನೀಡಿತ್ತು. ನಂತರ ಬಂದ ಕುಮಾರಸ್ವಾಮಿ ಸರ್ಕಾರ ನೀರಾವರಿ ಯೋಜನೆಗಳಿಗೆ ಹಿಂದಿನ‌ ಸರ್ಕಾರಕ್ಕಿಂತ ಹೆಚ್ಚಿನ‌ ಆದ್ಯತೆ ನೀಡಲಿಲ್ಲ. ಇದೀಗ ಯಡಿಯೂರಪ್ಪ ನೇತೃತ್ವದ ಸರ್ಕಾರದಿಂದ ಹೆಚ್ಚಿನ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

ನಿರೀಕ್ಷಿತ ಯೋಜನೆಗಳ ವಿವರ ಇಂತಿದೆ :

  1. ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಅನುದಾನ
  2. ತುಪ್ಪರಿಹಳ್ಳ ನೀರಾವರಿ ಯೋಜನೆ
  3. ಸಿಂಗಟಾಲೂರು, ಇಟಗಿ, ಮಲಪ್ರಭಾ ನೀರಾವರಿ ಯೋಜನೆ
  4. ಎತ್ತಿನಹೊಳೆ ಭೂ ಸ್ವಾಧೀನಕ್ಕೆ ಬಾಕಿ ಇರುವ ಹಣ ಬಿಡುಗಡೆ
  5. ಮೇಕೆದಾಟು ಯೋಜನೆಗೆ ಹಸಿರು ನಿಶಾನೆ
  6. ಕೆಸಿ ವ್ಯಾಲಿ ನೀರನ್ನು 400 ಎಂಎಲ್‌ಡಿಗೆ ಹೆಚ್ಚಿಸಬೇಕು
  7. ಯರಗೋಳ್‌ ಡ್ಯೂಂ ಪೂರ್ಣ.
  8. ಆಲಮಟ್ಟಿ ಡ್ಯಾಂ ಎತ್ತರಕ್ಕೆ ಕ್ರಮ
  9. ತುಂಗಭದ್ರಾ ಜಲಾಶಯದ ಹೂಳು ತೆರವು
  10. ಹಗರಿ ಕೃಷಿ ವಿವಿ, ಸಿಂಗಟಾಲೂರು ನೀರಾವರಿ ಯೋಜನೆ
  11. ಕೃಷ್ಣಾ ಮೇಲ್ದಂಡೆ 3ನೇ ಹಂತ ಪೂರ್ಣ
  12. ಬೆಣ್ಣೆತೊರಾ, ಚಂದ್ರಪಂಳ್ಳಿ ಸೇರಿದಂತೆ ಯೋಜನೆಗಳು ಪೂರ್ಣ
  13. ಗೋದಾವರಿ ಬೇಸನ್‌ನಡಿ ಹಂಚಿಕೆಯಾದ 21 ಟಿಎಂಸಿ ನೀರಿನ ಸದ್ಬಳಕೆ
  14. ಗೊಂದಿಹಳ್ಳ, ಕರಗಡ, ಮಳಲೂರು ಏತ ನೀರಾವರಿ ಯೋಜನೆ ಜಾರಿ
  15. ಕೃಷ್ಣಾ ಬಿ ಸ್ಕೀಂ ಯೋಜನೆಗೆ ಹೆಚ್ಚು ಅನುದಾನ
  16. ನವಲಿ ಬಳಿ ಸಮಾನಾಂತರ ಜಲಾಶಯ

ABOUT THE AUTHOR

...view details