ಬೆಂಗಳೂರು:ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ಸೋಂಕಿತರ ಟ್ರಾವೆಲ್ ಹಿಸ್ಟರಿ ಬಹಿರಂಗವಾದ ಪ್ರಕರಣಗಳಲ್ಲಿ ಸೋಂಕಿತರ ಮೊದಲ ಹಾಗೂ ಎರಡನೇ ಹಂತದ ಸಂಪರ್ಕಿತ ವ್ಯಕ್ತಿಗಳಲ್ಲಿ ಕೆಲವರು ಎಸ್‌ಎಸ್‌ಯು ತಂಡದ ಸಂಪರ್ಕಕ್ಕೆ ಸಿಗದಂತೆ ತಪ್ಪಿಸಿಕೊಳ್ಳುವ ಪ್ರಕರಣಗಳು ವರದಿಯಾಗಿವೆ.
ಮೊಬೈಲ್ ಫೋನ್ ಆಫ್ ಮಾಡಿಕೊಳ್ಳುವುದು ಹಾಗೂ ಮನೆಯಲ್ಲಿ ಕೊರೊನಾ ನಿಗಾ ತಂಡಕ್ಕೆ ಸಿಕ್ಕದ ರೀತಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆದಿವೆ. ಹಾಗಾಗಿ ಸೋಂಕಿತರ ಟ್ರಾವೆಲ್ ಹಿಸ್ಟರಿ ಬಹಿರಂಗಪಡಿಸದೇ ಇರಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ಯಾವ ದಿನಾಂಕದಂದು, ಯಾವ ಸಮಯಕ್ಕೆ ಯಾವ ಸ್ಥಳದಿಂದ ಯಾವ ವಿಮಾನದಲ್ಲಿ ಪ್ರಯಾಣಿಸಿದರು ಎನ್ನುವ ಖಚಿತ ಮಾಹಿತಿ ಮಾಧ್ಯಮದ ಮೂಲಕ ತಿಳಿಯುವ ಸಹ ಪ್ರಯಾಣಿಕರು ತಪ್ಪಿಸಿಕೊಂಡು ಓಡಾಡುವುದು, ರಾಜ್ಯಕ್ಕೆ ಮರಳಿದ ನಂತರ ಯಾವ ದಿನ ಯಾವ ಸ್ಥಳಕ್ಕೆ ಹೋದರು. ಯಾರನ್ನು ಭೇಟಿಯಾದರು ಎನ್ನುವ ಮಾಹಿತಿಯಿಂದ ಪ್ರೈಮರಿ ಕಾಂಟ್ಯಾಕ್ಟ್ಗಳು ನಿಗಾ ತಂಡಕ್ಕೆ ಸಿಗದೇ ತಪ್ಪಿಸಿಕೊಂಡು ತಿರುಗಾಡುತ್ತಾ ಹೊಸ ತಲೆನೋವು ತರಿಸುತ್ತಿವೆ.
ಟ್ರಾವೆಲ್ ಹಿಸ್ಟರಿಯಿಂದ ಈ ಸಮಸ್ಯೆಯಾಗುತ್ತಿರುವ ಹಿನ್ನಲೆಯಲ್ಲಿ ಸೋಂಕಿತರ ಟ್ರಾವೆಲ್ ಹಿಸ್ಟರಿ ಬಹಿರಂಗ ಮಾಡದಿರಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಟ್ರಾವೆಲ್ ಹಿಸ್ಟರಿ ಮಾಹಿತಿ ಪ್ರಕಟಿಸದಂತೆ ಮಾಧ್ಯಮಗಳಿಗೆ ಮೌಖಿಕ ಸೂಚನೆ ಸಹ ನೀಡಲಾಗಿದೆ.