ಕರ್ನಾಟಕ

karnataka

ETV Bharat / state

ಗುತ್ತಿಗೆ-ಹೊರಗುತ್ತಿಗೆ ನೌಕರರ ಅವಧಿ ವಿಸ್ತರಿಸಿದ ಆರೋಗ್ಯ ಇಲಾಖೆ

ಕೋವಿಡ್​​ ಸಮಯದಲ್ಲಿ ಆರೋಗ್ಯ ಇಲಾಖೆಯೂ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಆರು ತಿಂಗಳಿಗೆ ಸಿಬ್ಬಂದಿಯನ್ನು ನೇಮಿಸಿಕೊಂಡಿತ್ತು. ಇದೀಗ ಅವರ ಅವಧಿ ಮುಗಿದಿದ್ದು, ಸದ್ಯ ಎರಡು ತಿಂಗಳ ಅವಧಿ ಮಾತ್ರ ವಿಸ್ತರಣೆಯಾಗಿದೆ.

Health Minister Sudhakar
ಆರೋಗ್ಯ ಸಚಿವ ಸುಧಾಕರ್

By

Published : Feb 10, 2021, 9:03 PM IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಆವರಿಸಿದ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಎದುರಾಗಿತ್ತು. ಈ ಸಮಯದಲ್ಲಿ 6 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಗುತ್ತಿಗೆ ಹಾಗೂ‌ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವಂತೆ ಆದೇಶಿಸಲಾಗಿತ್ತು.

ಆರೋಗ್ಯ ಸಚಿವ ಸುಧಾಕರ್

ಆದರೆ ಆ ಅವಧಿಯು ಜನವರಿಗೆ ಮುಗಿದ ಕಾರಣ ಆ ಎಲ್ಲಾ ಗುತ್ತಿಗೆ ನೌಕರರು ಪ್ರಸ್ತುತ ನಿರ್ವಹಿಸುತ್ತಿರುವ ಹುದ್ದೆಯಲ್ಲಿಯೇ ಮುಂದುವರೆಸಲು ಮನವಿ ಮಾಡಿದರು. ಶೂಶ್ರೂಷಕರು, ಲ್ಯಾಬ್ ಟೆಕ್ನಿಷಿಯನ್, ಅನಸ್ತೇಶಿಯಾ ಟೆಕ್ನಿಷಿಯನ್, ಫಾರ್ಮಾಸಿಸ್ಟ್ ಮತ್ತು ಗ್ರೂಪ್ ಡಿ ನೌಕರರು ಮಾನವೀಯ ದೃಷ್ಟಿಯಿಂದ ಮುಂದುವರೆಸುವಂತೆ ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೊಸ ಆದೇಶ ಮಾಡಿದೆ. ಕೋವಿಡ್ ನಿರ್ವಹಣೆಗಾಗಿ ತಾತ್ಕಾಲಿಕವಾಗಿ ಗುತ್ತಿಗೆ-ಹೊರಗುತ್ತಿಗೆ ಅಡಿಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಅವರನ್ನು ಅವಶ್ಯಕತೆಗನುಗುಣವಾಗಿ ಮಾರ್ಚ್ 2021ರ ತನಕ ಮುಂದುವರೆಸಲು ಆದೇಶಿಸಿದೆ.

ಓದಿ: ಮಕ್ಕಳ ಹಿತಕ್ಕಾಗಿ ಶುಲ್ಕ ಪಾವತಿ ಆದೇಶವನ್ನ ಎಲ್ರೂ ಪಾಲಿಸುವುದು ಒಳಿತು : ಸುರೇಶ್ ಕುಮಾರ್

ಇದಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಸುಧಾಕರ್ ಕೂಡ ಪ್ರತಿಕ್ರಿಯಿಸಿದ್ದು, ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದಾಗ ಹೊರ ಗುತ್ತಿಗೆ ಆಧಾರದ ಮೇಲೆ 6 ತಿಂಗಳವರೆಗೆ ಸಿಬ್ಬಂದಿಯನ್ನು ತೆಗೆದುಕೊಂಡಿದ್ದೀವಿ.‌ ಇದೀಗ ಅವಧಿ ಮುಗಿದಿದ್ದು, ಕೋವಿಡ್ ಪ್ರಮಾಣ ಕಡಿಮೆ ಆಗಿದೆ. ಹಾಗಾಗಿ ಆರ್ಥಿಕ‌ ಇಲಾಖೆ ನೇಮಕಾತಿಗೆ ಒಪ್ಪುತ್ತಿಲ್ಲ. ಹೀಗಾಗಿ ಇನ್ನೊಮ್ಮೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು. ಸದ್ಯ ಎರಡು ತಿಂಗಳ ಅವಧಿ ವಿಸ್ತರಣೆಯಾಗಿದ್ದು, ಗುತ್ತಿಗೆ-ಹೊರಗುತ್ತಿಗೆ ನೌಕಕರು ನಿಟ್ಟುಸಿರು ಬಿಡುವಂತಾಗಿದೆ.

ABOUT THE AUTHOR

...view details