ಕರ್ನಾಟಕ

karnataka

ETV Bharat / state

ಶಿಕ್ಷಣ ಇಲಾಖೆ ಸರ್ವರ್​ ಡೌನ್​: ಶಾಲೆ ಪುನಾರಂಭ ಕುರಿತ ಸಭೆ ಮುಂದೂಡಿಕೆ - Bangalore news

ಶಾಲೆಗಳ ಪುನಾರಂಭದ ಕುರಿತು ನಿರ್ಧಾರಕ್ಕಾಗಿ ನಿಗದಿಯಾಗಿದ್ದ ಅಧಿಕಾರಿಗಳ ಸಭೆಯನ್ನು ತಾಂತ್ರಿಕ ಸಮಸ್ಯೆಯಿಂದಾಗಿ ಮುಂದೂಡಲಾಗಿದೆ. 11 ಗಂಟೆಗೆ ನಿಗದಿಯಾಗಿದ್ದ ಸಭೆಯನ್ನು ನಾಳೆಗೆ ಮರುನಿಗದಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Department of Public Education Commissioner Anbukumar
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್

By

Published : Nov 2, 2020, 12:27 PM IST

ಬೆಂಗಳೂರು:ಶಾಲೆಗಳ ಪುನಾರಂಭದ ಕುರಿತಂತೆ ಇಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ನೇತೃತ್ವದಲ್ಲಿ ಸಭೆ ಕರೆದಿದ್ದರು. ಶಾಲೆ ಆರಂಭದ ಕುರಿತು ಇವತ್ತಿನಿಂದ ಅಧಿಕಾರಿಗಳ ಅಭಿಪ್ರಾಯ ಸಂಗ್ರಹ ಮಾಡಬೇಕಾಗಿತ್ತು. ಆದರೆ ಇಲಾಖೆಯ ಸರ್ವರ್ ಡೌನ್​​ ಆಗಿರುವ ಹಿನ್ನೆಲೆ ಸಭೆ ರದ್ದಾಗಿದೆ.

ಆಯಾ ಜಿಲ್ಲೆಗಳ ಉಪನಿರ್ದೇಶಕರು, ಬಿಇಓಗಳ ಜೊತೆಗೆ ವಿಡಿಯೋ ಸಂವಾದ ಮೂಲಕ ಸಭೆ ನಡೆಸಬೇಕಿತ್ತು. ಬೆಳಗ್ಗೆ 11ಗಂಟೆಗೆ ಸಭೆ ಆರಂಭವಾಗಬೇಕಿತ್ತಾದರೂ ತಾಂತ್ರಿಕ ಸಮಸ್ಯೆಯಿಂದ ಸಭೆಯನ್ನು ಮುಂದೂಡಲಾಗಿದೆ.

ಇಂದು ನಿಗದಿಯಾಗಿದ್ದ ಸಭೆಯನ್ನು ನಾಳೆ ನಡೆಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details