ಆನೇಕಲ್ (ಬೆಂ.ನ): ಬೆಂಗಳೂರು - ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ನಾರಾಯಣ ಹೆಲ್ತ್ ಸಿಟಿ ಕ್ಯಾಂಪಸ್ನಲ್ಲಿರುವ ಕಿರಣ್ ಮಜುಮ್ದಾರ್-ಷಾ ಶಾ ಮೆಡಿಕಲ್ ಸೆಂಟರ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಹೊಗೆ ಕಾಣಿಸಿಕೊಂಡಿದೆ.
ಕಿರಣ್ ಮಜುಮ್ದಾರ್-ಷಾ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್: ಕೆಳ ಮಹಡಿಗೆ ರೋಗಿಗಳು ಶಿಫ್ಟ್ - ಮಜುಂದಾರ್ ಶಾ ಮೆಡಿಕಲ್.
8ನೇ ಮಹಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ತುಂಬಿಕೊಂಡಿದೆ. ಗಾಬರಿಗೊಂಡ ಸಿಬ್ಬಂದಿ ತಕ್ಷಣ ಎಚ್ಚೆತ್ತು ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ಸೋಂಕಿತರನ್ನು ಕೆಳಗಿನ ಮಹಡಿಗೆ ಸ್ಥಳಾಂತರ ಮಾಡಿದ್ದಾರೆ.
![ಕಿರಣ್ ಮಜುಮ್ದಾರ್-ಷಾ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್: ಕೆಳ ಮಹಡಿಗೆ ರೋಗಿಗಳು ಶಿಫ್ಟ್ dense-of-smoke-from-short-circuit-at-majumdar-shah-hospital](https://etvbharatimages.akamaized.net/etvbharat/prod-images/768-512-11608121-thumbnail-3x2-bng.jpg)
ಮಜುಂದಾರ್ ಶಾ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ದಟ್ಟ ಹೊಗೆ
8ನೇ ಮಹಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ತುಂಬಿಕೊಂಡಿತ್ತು. ಗಾಬರಿಗೊಂಡ ಸಿಬ್ಬಂದಿ ಕೂಡಲೇ ಕೋವಿಡ್ ಸೋಂಕಿತರನ್ನು ಕೆಳಗಿನ ಮಹಡಿಗೆ ಸ್ಥಳಾಂತರಿಸಿದ್ದಾರೆ . ಕಟ್ಟಡದಲ್ಲಿ ಸ್ವಯಂಚಾಲಿತ ಅಗ್ನಿ ನಂದಿಸುವ ಸಾಧನ ಇದ್ದ ಕಾರಣ ಹೆಚ್ಚಿನ ಅವಘಡ ಸಂಭವಿಸಲಿಲ್ಲ ಎಂದು ತಿಳಿದುಬಂದಿದೆ.