ಬೆಂಗಳೂರು :ಕೊರೊನಾ ಹಾಗೂ ಅದರ ರೂಪಾಂತರಿ ಹಾವಳಿ ಜೊತೆಗೆ ಇದೀಗ ಡೆಂಘೀ ಸೋಂಕಿನ ಕಿರಿಕ್ ಹೆಚ್ಚಾಗಿದೆ. ರಾಜಧಾನಿಯ ಪಾಲಿಕೆ ವ್ಯಾಪ್ತಿಯಲ್ಲಿ ಡೆಂಘೀ ಶಂಕಿತರ ಸಂಖ್ಯೆ ಹೆಚ್ಚಾಗಿರೋದು ಆತಂಕ ಹೆಚ್ಚಿಸಿದೆ. ಕೋವಿಡ್ 2ನೇ ಅಲೆ ಕಡಿಮೆ ಆದ ಬೆನ್ನಲ್ಲೇ ಇತರೆ ಸಾಂಕ್ರಾಮಿಕ ರೋಗದ ಹಾವಳಿ ಶುರುವಾಗಿದೆ. ಕೋವಿಡ್ ಮಧ್ಯೆ ಮರೆಯಾಗಿದ್ದ ಡೆಂಘೀ, ಚಿಕೂನ್ ಗುನ್ಯಾ ಭೀತಿ ಕೂಡ ಹೆಚ್ಚಾಗಿದೆ.
ಡೆಂಘೀ ಸಾಂಕ್ರಾಮಿಕ ರೋಗದಿಂದ ಎಚ್ಚರಿಕೆ ಅಗತ್ಯವಾಗಿದೆ. ಈ ಬದಲಾವಣೆಗೆ ದಿಢೀರ್ ಅಂತಾ ಸುರಿಯುವ ಮಳೆ ಹಾಗೂ ಹವಾಮಾನ ವೈಪರೀತ್ಯ ಡೆಂಘೀ ಹರಡಲು ಕಾರಣವಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ಶಂಕಿತರ ಸಂಖ್ಯೆ ಹೆಚ್ಚಾಗಿದೆ.
ಸೆಪ್ಟೆಂಬರ್ 9ರಂದು ಒಂದೇ ದಿನ 1557 ಜನರಿಗೆ ಡೆಂಘೀ ಇರುವ ಶಂಕೆ ವ್ಯಕ್ತವಾಗಿದೆ. ಇದರಲ್ಲಿ 208 ಮಂದಿಯ ರಕ್ತವನ್ನ ಪರೀಕ್ಷೆಗೊಳಪಡಿಸಲಾಗಿದೆ. ಅದರಲ್ಲಿ 38 ಮಂದಿಗೆ ಡೆಂಘೀ ಜ್ವರ ಇರುವುದು ದೃಢಪಟ್ಟಿದೆ. ಆದರೆ, ಸಮಾಧಾನಕರ ಸಂಗತಿ ಅಂದರೆ ಡೆಂಘೀಯಿಂದ ಸಾವು ಸಂಭವಿಸಿಲ್ಲ.