ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಡೆಂಘೀ ಮತ್ತು ಚಿಕೂನ್​​ ಗುನ್ಯಾ ಹೆಚ್ಚಳ ಭೀತಿ.. ಆತಂಕದಲ್ಲಿ ಜನ - ವಿಶೇಷ ಸಭೆ,

ಬೆಂಗಳೂರಿನ ಜನಕ್ಕೆ (Bengaluru people) ಡೆಂಘೀ ಮತ್ತು ಚಿಕೂನ್ ಗುನ್ಯಾ ಹೆಚ್ಚಳ ಭೀತಿ (Dengue and Chicken Gunya rise) ಕಾಡುತ್ತಿದ್ದು, ಆತಂಕದಲ್ಲಿ ದಿನ ದೂಡುತ್ತಿದ್ದಾರೆ.

Dengue and Chicken Gunya rise, Dengue and Chicken Gunya rise in Bengaluru, Bengaluru news, Heavy rain in Bengaluru, Special meeting, Special Commissioner of Health Trilok Chandra, ಡೆಂಘೀ ಮತ್ತು ಚಿಕನ್ ಗುನ್ಯಾ ಹೆಚ್ಚಳ, ಬೆಂಗಳೂರಿನಲ್ಲಿ ಡೆಂಘೀ ಮತ್ತು ಚಿಕನ್ ಗುನ್ಯಾ ಹೆಚ್ಚಳ, ಬೆಂಗಳೂರು ಸುದ್ದಿ, ಬೆಂಗಳೂರಿನಲ್ಲಿ ಭಾರಿ ಮಳೆ, ವಿಶೇಷ ಸಭೆ, ಆರೋಗ್ಯ ವಿಶೇಷ ಆಯುಕ್ತರು ತ್ರಿಲೋಕ್ ಚಂದ್ರ
ಬೆಂಗಳೂರಿನಲ್ಲಿ ಡೆಂಘೀ ಮತ್ತು ಚಿಕನ್ ಗುನ್ಯಾ ಹೆಚ್ಚಳ ಭೀತಿ

By

Published : Nov 20, 2021, 8:20 AM IST

ಬೆಂಗಳೂರು:ನಗರದಲ್ಲಿ ಕೋವಿಡ್ ಕಡಿಮೆಯಾಗುತ್ತಿದ್ದಂತೆ ಡೆಂಘೀ ಮತ್ತು ಚಿಕೂನ್ ಗುನ್ಯಾ (Dengue and Chicken Gunya rise) ಜ್ವರ ಹೆಚ್ಚಾಗುವ ಭೀತಿ ಕಾಡುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲ ದಿನಗಳಿಂದ ಬಿಡದೇ ಸುರಿಯುತ್ತಿರುವ ಮಳೆಯಿಂದ (Heavy rain in Bengaluru) ಡೆಂಘೀ ಮತ್ತು ಚಿಕೂನ್ ಗುನ್ಯಾ ಹೆಚ್ಚಾಗುವ ಸಂಭವವಿದ್ದು, ಕೂಡಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ವಿಶೇಷ ಸಭೆ (Special meeting) ನಡೆಸಲಾಯಿತು.

ಬೆಂಗಳೂರಿನಲ್ಲಿ ಡೆಂಘೀ ಮತ್ತು ಚಿಕೂನ್ ಗುನ್ಯಾ ಹೆಚ್ಚಳ ಭೀತಿ

ಕಳೆದ ವರ್ಷ 2020 ರಲ್ಲಿ ಡೆಂಘೀ 1912 ಜನರಲ್ಲಿ ದೃಢಪಟ್ಟಿದ್ದರೆ 2021 ರಲ್ಲಿ ಈವರೆಗೆ 1,119 ಜನರಲ್ಲಿ ದೃಢಪಟ್ಟಿದೆ. ಕಳೆದ ವರ್ಷ ಈ ತಿಂಗಳಿಗೆ 139 ಜನರಲ್ಲಿ ಚಿಕೂನ್​ಗುನ್ಯಾ ದೃಢಪಟ್ಟಿದ್ದರೆ, ಈ ವರ್ಷ 55 ಜನರಲ್ಲಿ ದೃಢಪಟ್ಟಿದೆ ಎಂದು ವಿಶೇಷ ಆಯುಕ್ತರು (ಆರೋಗ್ಯ) ಡಾ. ತ್ರಿಲೋಕ್ ಚಂದ್ರ (Special Commissioner (Health) Trilok Chandra) ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಡೆಂಘೀ ಮತ್ತು ಚಿಕನ್ ಗುನ್ಯಾ ಹೆಚ್ಚಳ ಭೀತಿ

ಮಳೆ ಬಂದಾಗ ನೀರು ಸಂಗ್ರಹವಾಗಿ ಸೊಳ್ಳೆಗಳ ಸಂತತಿ ಹೆಚ್ಚಾಗುವುದನ್ನು ತಡೆಯಬೇಕು. ಹೂವಿನ ಕುಂಡ, ಬೀಸಾಕಿದ ಟೈರ್‌, ನೀರು ಸಂಗ್ರಹಿಸುವ ತೊಟ್ಟಿ, ಸಜ್ಜೆ, ನೀರಿನ ಬಾಟಲ್ ಸೇರಿದಂತೆ ಇನ್ನಿತರೆಡೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಈ ಸಂಬಂಧ ಅಂತಹ ಜಾಗದಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಎಂದು ಡಾ. ತ್ರಿಲೋಕ್ ಚಂದ್ರ (Trilok Chandra) ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರಿನಲ್ಲಿ ಡೆಂಘೀ ಮತ್ತು ಚಿಕನ್ ಗುನ್ಯಾ ಹೆಚ್ಚಳ ಭೀತಿ

ಮಳೆಗಾಲದಲ್ಲಿ ಡೆಂಘೀ ಮತ್ತು ಚಿಕೂನ್ ಗುನ್ಯಾ (Dengue and Chicken Gunya cases) ಪ್ರಕರಣಗಳು ಹೆಚ್ಚಾಗಿ ಹರಡಲಿದ್ದು, ನೀರು ಸಂಗ್ರಹವಾಗುವ ಸ್ಥಳಗಳನ್ನು ಶುಚಿಗೊಳಿಸಿ ಸೊಳ್ಳೆ ಮೊಟ್ಟೆ ಇಡಲು ಅವಕಾಶವಿರದಂತೆ ನೋಡಿಕೊಳ್ಳಬೇಕು. ಈ ಸಂಬಂಧ ಸೊಳ್ಳೆ ತಾಣಗಳನ್ನು ಗುರುತಿಸಿ ನಾಶ ಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರಿನಲ್ಲಿ ಡೆಂಘೀ ಮತ್ತು ಚಿಕನ್ ಗುನ್ಯಾ ಹೆಚ್ಚಳ ಭೀತಿ

ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಕಾರ್ಯಕ್ರಮ ನಿರ್ದೇಶನಾಲಯ (NVBDCP) ಹಿರಿಯ ಪ್ರಾದೇಶಿಕ ನಿರ್ದೇಶಕರು ಡಾ. ರವಿಕುಮಾರ್ ಮಾತನಾಡಿ, ನಗರದಲ್ಲಿ ಡೆಂಘೀ ಮತ್ತು ಚಿಕೂನ್ ಗುನ್ಯಾ ಪ್ರಕರಣಗಳು ಹೆಚ್ಚಾಗುವ ಸಂಭವವಿದ್ದು, ಕೂಡಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಏಡಿಸ್ ಈಜಿಪ್ಟಿ ಸೊಳ್ಳೆಯಿಂದ ಡೆಂಘೀ ಹರಡಲಿದ್ದು, ಪಾಲಿಕೆಯಿಂದ ಮನೆ-ಮನೆ ಭೇಟಿ ನೀಡಿ ನೀರು ಸಂಗ್ರಹವಿರುವ ಸ್ಥಳಗಳನ್ನು ಶುಚಿಯಾಗಿಟ್ಟುಕೊಳ್ಳಲು ತಿಳಿಸಬೇಕು ಎಂದರು.

ಹೆಚ್ಚು ದಿನಗಳ ಕಾಲ‌ ಸಂಗ್ರಹವಾದ ನೀರಿನಲ್ಲಿ ಸೊಳ್ಳೆಗಳ ತಾಣಗಳನ್ನು ಗುರುತಿಸಿ ಲಾರ್ವಾ ನಾಶಕ ಔಷಧಗಳಾದ ಲಾರ್ವಿಸೈಡಲ್ ಔಷಧ ಸಿಂಪಡಿಸಿ ಸೊಳ್ಳೆಗಳ ಉತ್ಪತ್ತಿಯನ್ನು ನಾಶಪಡಿಸಲು ಸೂಚಿಸಿದರು.

ಸಭೆಯಲ್ಲಿ ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್, ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಕಾರ್ಯಕ್ರಮ ನಿರ್ದೇಶನಾಲಯ (NVBDCP) ಅಧಿಕಾರಿಗಳು, ಎಲ್ಲಾ ವಲಯ ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು, ಸೋಂಕುಶಾಸ್ತ್ರಜ್ಞನರು ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು‌

ABOUT THE AUTHOR

...view details