ಕರ್ನಾಟಕ

karnataka

ETV Bharat / state

ಸಿಬ್ಬಂದಿ ಕೆಲಸದ ಅವಧಿ 2 ಗಂಟೆ ವಿಸ್ತರಣೆ ಸೇರಿ ಹಲವು ಕ್ರಮ ಕೈಗೊಳ್ಳಲು ಬಿಎಸ್​ವೈಗೆ ಮನವಿ - ಲಾಕ್ ಡೌನ್

ಎಫ್ ಕೆ ಸಿ ಸಿ ಐ ಹಾಗೂ ರಾಜ್ಯದ ಹಲವು ಕೈಗಾರಿಕಾ ಸಂಘ ನಿಯೋಗ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭೇಟಿಯಾಗಿ ಕೈಗಾರಿಕಾ ವಲಯದ ಪುನಶ್ಚೇತನಕ್ಕೆ ಕೆಲ ಬೇಡಿಕೆಗಳನ್ನು ಸಲ್ಲಿಸಿದರು. ಬೇಡಿಕೆಗಳನ್ನು ಸ್ವೀಕರಿಸಿದ ಮುಖ್ಯಮಂತ್ರಿ, ಸರ್ಕಾರ ಕೈಗಾರಿಕೆಗಳ ಜೊತೆ ಇರುವುದಾಗಿ ಆಶ್ವಾಸನೆ ನೀಡಿದರು.

bsy
bsy

By

Published : May 1, 2020, 7:47 AM IST

Updated : May 1, 2020, 8:35 AM IST

ಬೆಂಗಳೂರು:ಮೇ 4 ರಿಂದ ಲಾಕ್ ಡೌನ್ ಸಡಿಲಿಕೆ ಆಗುವ ಹಿನ್ನೆಲೆಯಲ್ಲಿ ಎಫ್ ಕೆ ಸಿ ಸಿ ಐ ಹಾಗೂ ರಾಜ್ಯದ ಹಲವು ಕೈಗಾರಿಕಾ ಸಂಘ ನಿಯೋಗ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜೊತೆಗೆ ಚರ್ಚೆ ನಡೆಸಿ, ಕೈಗಾರಿಕಾ ವಲಯದ ಪುನಶ್ಚೇತನಕ್ಕೆ ಕೆಲ ಬೇಡಿಕೆಗಳನ್ನು ಸಲ್ಲಿಸಿದರು.

ಸರ್ಕಾರಕ್ಕೆ ಬೇಡಿಕೆ ಸಲ್ಲಿಕೆ

ಬೇಡಿಕೆಗಳು:

  • ಫಿಕ್ಸ್ಡ್ /ಡಿಮಾಂಡ್ ಚಾರ್ಜ್ ಮುಂದೂಡಿಕೆ.
  • ಮೀಟರ್ ರೀಡಿಂಗ್ ಆಧಾರದಲ್ಲಿ ಬಿಲ್ಲಿಂಗ್.
  • ಬಿಲ್ ಮೊತ್ತ ಪಾವತಿಸಲು ಕಂತುಗಳು.
  • ವಿದ್ಯುತ್ ದರ ಪರಿಷ್ಕರಣೆ ಮುಂದೂಡುವುದು.
  • ಇಎಸ್​ಐ / ಪಿಎಫ್ ಪಾವತಿ ದಂಡ ಹಾಗೂ ಬಡ್ಡಿ ಇಲ್ಲದಂತೆ ಪಾವತಿಸಲು ಅವಕಾಶ.
  • ಸಿಬ್ಬಂದಿಯ ಕೆಲಸದ ವಿಸ್ತರಣೆ ಕನಿಷ್ಠ 2 ಗಂಟೆ.
  • ಕನಿಷ್ಠ ವೇತನ ಜಾರಿ 1 ವರ್ಷ ಮುಂದಕ್ಕೆ.
  • ರಾಜ್ಯ ಸರ್ಕಾರದ ವಿವಿಧ ನೀತಿಗಳಲ್ಲಿ ಮಂಜೂರಾಗಿ ಬಾಕಿ ಇರುವ ಸಹಾಯಧನ ವಿತರಣೆ.
  • ವೇತನ ಪಾವತಿ, ಕೆಲವು ನಿಯಮಬದ್ಧ ಶುಲ್ಕ, ಫೀ ಪಾವತಿಗಳನ್ನು ಭರಿಸಲು ಪ್ರತಿಯೊಂದು ಉದ್ಯಮಕ್ಕೆ ಬಡ್ಡಿರಹಿತ ಸಾಲ. (ಬಡ್ಡಿ ಸರ್ಕಾರ ಭರಿಸುವುದು)
  • ಲಾಕ್ ಡೌನ್ ವೇತನ ಶೇಕಡಾ 25ರಷ್ಟು ಸರ್ಕಾರ, ಶೇಕಡಾ 25ರಷ್ಟು ಉದ್ಯೋಗಿ ಬಿಟ್ಟುಕೊಡುವುದು, ಶೇಕಡಾ 50ರಷ್ಟು ಉದ್ಯಮಿ ಭರಿಸುವುದು.
  • ಬಿಬಿಎಂಪಿ, ನಗರಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳು ಆಸ್ತಿ ತೆರಿಗೆ ಪಾವತಿಗೆ ಸಮಯಾವಕಾಶ ಬಡ್ಡಿ ದಂಡವಿಲ್ಲದೆ ಹಾಗೂ ಶೇಕಡಾ 25ರಷ್ಟು ಕಡಿತ ಮಾಡುವುದು.
  • ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೈಗಾರಿಕೆಗಳು ಬಾಡಿಗೆ ಪಾವತಿಸಲು ಕಂತುಗಳ ಅವಕಾಶ, ಖಾಸಗಿ ಮಾಲೀಕರಿಗೆ ಸರ್ಕಾರದಿಂದ ನಿರ್ದೇಶನ.
  • ಅತಿ ಸಣ್ಣ, ಸಣ್ಣ ಕೈಗಾರಿಕೆಗಳಿಂದ ರಾಜ್ಯ ಹಾಗೂ ಕೇಂದ್ರ ಸ್ವಾಮ್ಯದ ಸಾರ್ವಜನಿಕ ಹಾಗೂ ಬೃಹತ್ ಮಧ್ಯಮ ಘಟಕಗಳಿಂದ ಬರಬೇಕಾದ ಬಾಕಿ ಪಾವತಿ ಮೇ 30, 2020ರೊಳಗೆ ಪಾವತ ಯಾಗಬೇಕು.
  • ಕೃಷಿ ಸಂಸ್ಕರಣಾ ಕ್ಷೇತ್ರವನ್ನು ಬಲಪಡಿಸಲು ರಾಜ್ಯ ಮತ್ತು ಕೇಂದ್ರದ ಫುಡ್ ಪಾರ್ಕ್​ಗಳ ಸದುಪಯೋಗ.
  • ಕೆ.ಎಸ್.ಎಫ್.ಸಿ. ಸಂಸ್ಥೆಯಲ್ಲಿ ಸಹಾಯಧನ ಬಿಡುಗಡೆ ಮಾಡದಿರುವ ಪ್ರಕರಣಗಳಲ್ಲಿ ಕೂಡಲೇ ಬಿಡುಗಡೆ.
  • ಮುಂದಿನ ಕೈಗಾರಿಕಾ ನೀತಿಯಲ್ಲಿ ಕೋವಿಡ್ ಪರಿಣಾಮ ಎದುರಿಸಲು ಕೈಗಾರಿಕಾ ವಲಯಕ್ಕೆ ರಿಯಾಯಿತಿಗಳು.
  • ರಾಷ್ಟ್ರಗಳಿಂದ ಬಂಡವಾಳ ಆಕರ್ಷಣೆಗೆ ಕೋರ್ ಟೀಮ್ ರಚನೆ.
  • ಎಂಪ್ಲಾಯಿ ಪಾಸ್ ಉದ್ಯಮಿಗಳಿಗೆ ನೀಡುವ ಸೌಲಭ್ಯ, ಪೊಲೀಸ್ ವ್ಯಾಪ್ತಿಯಿಂದ ಹೊರತರುವುದು.
  • ಉದ್ಯಮಿಗಳು ಜಿಲ್ಲೆಯಿಂದ ಜಿಲ್ಲೆಗಳಿಗೆ ಪ್ರಯಾಣಿಸಲು ಅನುಮತಿ.
  • ನಗರಪಾಲಿಕೆ, ನಗರಸಭೆ ವ್ಯಾಪ್ತಿಯಲ್ಲಿನ ಕೈಗಾರಿಕೆಗಳ ಪ್ರಾರಂಭ.
  • ಉದ್ಯಮಿಗಳು ಕೈಗಾರಿಕೆ ಪ್ರಾರಂಭಿಸುವ ಮುನ್ನ ಘಟಕಕ್ಕೆ ಭೇಟಿ ನೀಡಿ ಯಂತ್ರೋಪಕರಣಗಳ ನಿರ್ವಹಣೆ ಮಾಡಲು ಅವಕಾಶ/ ಅನುಮತಿ.
  • ಕೋವಿಡ್ ಅಸ್ಸಿಸ್ಟೆನ್ಸ್ ಫಂಡ್ ಸೃಷ್ಟಿಸಿ, ಪ್ರತಿಯೊಂದು ಘಟಕಕ್ಕೂ ಜಿ.ಎಸ್. ಟಿ. ಪಾವತಿ ಆಧಾರದಲ್ಲಿ ಬಡ್ಡಿರಹಿತ ಸಾಲ ಮಂಜೂರು. ಬ್ಯಾಂಕುಗಳ ಮುಖಾಂತರ ಸರ್ಕಾರ ಗ್ಯಾರಂಟಿ ನೀಡಿ ಬಡ್ಡಿ ಬ್ಯಾಂಕುಗಳಿಗೆ ಪರಿಷ್ಕೃತ ಆಯವ್ಯಯದಲ್ಲಿ ಪಾವತಿ ಮಾಡುವುದು ಸೂಕ್ತ (CAF)
  • ಇನ್ಸ್ಪೆಕ್ಟರ್ ರಾಜ್ ಒಂದು ವರ್ಷ ಸ್ಥಗಿತಗೊಳಿಸುವುದು (ಅನಿವಾರ್ಯ ಪ್ರಕರಣಗಳನ್ನು ಹೊರತು ಪಡಿಸಿ)

ಬೇಡಿಕೆಗಳನ್ನು ಸ್ವೀಕರಿಸಿದ ಮುಖ್ಯಮಂತ್ರಿ ಸರ್ಕಾರ ಕೈಗಾರಿಕೆಗಳ ಜೊತೆ ಇರುವುದಾಗಿ ಆಶ್ವಾಸನೆ ನೀಡಿದರು.

Last Updated : May 1, 2020, 8:35 AM IST

ABOUT THE AUTHOR

...view details