ಕರ್ನಾಟಕ

karnataka

ETV Bharat / state

ಶುರುವಾಯ್ತು ಸಚಿವ ಸ್ಥಾನಕ್ಕೆ ಲಾಬಿ: ಸಿಎಂ ಬಿಎಸ್​​ವೈ ನಿವಾಸಕ್ಕೆ ಆಕಾಂಕ್ಷಿಗಳ ಬೆಂಬಲಿಗರ ದೌಡು - demand for minister post

ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ಭಾರಿ ಲಾಬಿ ಶರುವಾಗಿದೆ. ಅಪ್ಪಚ್ಚು ರಂಜನ್​​ಗೆ ಸಚಿವ ಸ್ಥಾನ ನೀಡುವಂತೆ ಕೊಡವ ಸಮಾಜದ ಮುಂಖಡರು ಮನವಿ ಮಾಡಲು ಬೆಳ್ಳಂಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಮನೆ ಬಳಿ ಬಂದಿದ್ದಾರೆ.

ಶುರುವಾಯ್ತು ಸಚಿವ ಸ್ಥಾನಕ್ಕೆ ಆಗ್ರಹ

By

Published : Jul 30, 2019, 10:01 AM IST

ಬೆಂಗಳೂರು:ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ಭಾರಿ ಲಾಬಿ ಶರುವಾಗಿದೆ. ಅಪ್ಪಚ್ಚು ರಂಜನ್​​ಗೆ ಸಚಿವ ಸ್ಥಾನ ನೀಡುವಂತೆ ಕೊಡವ ಸಮಾಜದ ಮುಂಖಡರು ಮನವಿ ಮಾಡಲು ಬೆಳ್ಳಂಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಮನೆ ಬಳಿ ಬಂದಿದ್ದಾರೆ.

ಸಿಎಂ ಯಡಿಯೂರಪ್ಪ ನಿವಾಸಕ್ಕೆ ಆಕಾಂಕ್ಷಿಗಳ ಬೆಂಬಲಿಗರು

ಅಪಚ್ಚು ರಂಜನ್ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಕೊಡವ ಸಮಾಜದ ಅಧ್ಯಕ್ಷ ಎಂ.ಟಿ.ನಾಣಯ್ಯ ನೇತೃತ್ವದಲ್ಲಿ ಯಡಿಯೂರಪ್ಪ ನಿವಾಸಕ್ಕೆ ಬಂದಿದ್ದಾರೆ. ಕೊಡಗಿನಲ್ಲಿ ಮಳೆ ಬರೋ ಮುನ್ಸೂಚನೆ ಇದೆ. ಕಳೆದ ಸರ್ಕಾರ ಕೊಡಗಿನಲ್ಲಿ ಪುನರ್ವಸತಿ ಕೊಡಿಸೋ ಕೆಲಸ ಮಾಡಿಲ್ಲ. ಈಗ ಬಿಜೆಪಿ ಸರ್ಕಾರ ಮಾಡಬೇಕು. ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈಗ ಮಳೆ ಬಂದಾಗ ಅಗತ್ಯ ಕ್ರಮ ಕೈಗೊಳ್ಳಲು ನಮಗೆ ಉಸ್ತುವಾರಿ ಸಚಿವರು ಬೇಕು. ಹೀಗಾಗಿ ಅಪ್ಪಚ್ಚು ರಂಜನ್​​ಗೆ ಸಚಿವ ಸ್ಥಾನ ಕೊಟ್ಟು, ಕೊಡಗಿನ ಉಸ್ತುವಾರಿ ಸಚಿವರಾಗಿ ಮಾಡಬೇಕು ಎಂದು ಕೊಡವ ಸಮಾಜದ ಮುಖಂಡರು ಮನವಿ ಮಾಡಿದರು.

ಇನ್ನೊಂದೆಡೆ ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ನೆಹರು ಓಲೆಕಾರ್​ಗೆ ಸಚಿವ ಸ್ಥಾನ ನೀಡುವಂತ ಛಲವಾದಿ ಮಹಾಸಭಾದಿಂದ ಬೆಂಬಲಿಗರು ಸಿಎಂ ಮನೆ ಮುಂದೆ ಸೇರಿದ್ದಾರೆ. ಅಲ್ಲದೆ ಸಂಪುಟದಲ್ಲಿ ಬಲಗೈ ಸಮುದಾಯಕ್ಕೆ ಎರಡು ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ.

ABOUT THE AUTHOR

...view details