ಕರ್ನಾಟಕ

karnataka

By

Published : Apr 25, 2020, 2:57 PM IST

ETV Bharat / state

ತಬ್ಲಿಘಿಗಳನ್ನು ಬೇರೆಡೆ ಶಿಫ್ಟ್​ ಮಾಡುವಂತೆ ಆಗ್ರಹ: ಬಾಣಸವಾಡಿಯಲ್ಲಿ ಸ್ಥಳೀಯರಿಂದ ಪ್ರತಿಭಟನೆ

ತಬ್ಲಿಘಿ ಕಾರ್ಯಕ್ರಮದಲ್ಲಿ ಭಾಗಿಯಾದ 37 ಜನರನ್ನು ಯಲಹಂಕ ಹಜ್ ಭವನದಿಂದ ರಾಮಮೂರ್ತಿ ನಗರ ಹಾಗೂ ಬಾಣಸವಾಡಿಗೆ ಸ್ಥಳಾಂತರಿಸಿರುವುದನ್ನು ವಿರೋಧಿಸಿ ಬಾಣಸವಾಡಿ ಪೊಲೀಸ್​ ಠಾಣೆ ಮುಂದೆ ಪ್ರತಿಭಟನೆ ನಡೆಸಲಾಗಿದೆ.

fweff
ತಬ್ಲಿಘಿಗಳನ್ನು ಬೇರೆಡೆ ಶಿಫ್ಟ್​ ಮಾಡುವಂತೆ ಆಗ್ರಹ

ಬೆಂಗಳೂರು: ತಬ್ಲಿಘಿ ಕಾರ್ಯಕ್ರಮದಲ್ಲಿ ಭಾಗಿಯಾದ 37 ಜನರನ್ನು ಯಲಹಂಕ ಹಜ್ ಭವನದಿಂದ ರಾಮಮೂರ್ತಿ ನಗರ ಹಾಗೂ ಬಾಣಸವಾಡಿಗೆ ಸ್ಥಳಾಂತರಿಸಿರುವುದನ್ನು ವಿರೋಧಿಸಿ ಕಾರ್ಪೊರೇಟರ್ ಪದ್ಮನಾಭ ರೆಡ್ಡಿ ನೇತೃತ್ವದಲ್ಲಿ ಬಾಣಸವಾಡಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಲಾಗಿದೆ.

ತಬ್ಲಿಘಿಗಳನ್ನು ಬೇರೆಡೆ ಶಿಫ್ಟ್​ ಮಾಡುವಂತೆ ಆಗ್ರಹ

ಈವರೆಗೆ ಬಾಣಸವಾಡಿಯಲ್ಲಿ ಒಂದೂ ಕೊರೊನಾ ಪ್ರಕರಣಗಳು ಇಲ್ಲ. ಇವರಿಂದಾಗಿ ಕೊರೊನಾ ಹಬ್ಬುವುದು ಬೇಡ. ಇಲ್ಲಿನ ಪೊಲೀಸ್ ಅಧಿಕಾರಿಗಳು, ಈ ಭಾಗದ ಜನರ ಆರೋಗ್ಯ ಮುಖ್ಯ. ಕ್ವಾರಂಟೈನ್ ಮಾಡಿರುವ ಜನರನ್ನು ಇಲ್ಲಿಂದ ಜನವಸತಿ ಇಲ್ಲದ ಜಾಗಕ್ಕೆ ಕರೆದುಕೊಂಡು ಹೋಗಿ. ಬಾಣಸವಾಡಿ, ಕಾಚರಕನಹಳ್ಳಿ, ಕಮ್ಮನಹಳ್ಳಿ ವಾರ್ಡ್​ಗೆ ಸಮಸ್ಯೆ ಮಾಡಬಾರದೆಂದು ಒತ್ತಾಯಿಸಿದರು. ಆದರೆ ಸ್ಥಳದಲ್ಲಿ ಸಾಮಾಜಿಕ ಅಂತರ ಪಾಲಿಸದೆ ಪ್ರತಿಭಟಿಸಿ ಸ್ಥಳೀಯ ಕಾರ್ಪೊರೇಟರ್ ನಿರ್ಲಕ್ಷ್ಯ ತೋರಿಸಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿ ಪ್ರತಿಭಟನಾಕಾರರಿಗೆ ಮನವರಿಕೆ ಮಾಡಲು ಯತ್ನಿಸಿದರು.

ಬಿಬಿಎಂಪಿ ಅಧಿಕಾರಿಗಳು 22 ಜನರನ್ನು ರಾಮಮೂರ್ತಿನಗರ, 15 ಜನರನ್ನು ಬಾಣಸವಾಡಿಯಲ್ಲಿ ಕ್ವಾರಂಟೈನ್ ಮಾಡಿದ್ದಾರೆ. ಕೆಲವರಲ್ಲಿ ತಪ್ಪು ಮಾಹಿತಿ ಇದೆ. ಇವರು ಪಾದರಾಯನಪುರ ಗಲಭೆಯಲ್ಲಿ ಭಾಗಿಯಾದವರು ಅಲ್ಲ. ಇವರು ಕ್ವಾರಂಟೈನ್ ಆಗಿ ಮೂವತ್ತು ದಿನ ಆಗಿದೆ. ತಬ್ಲಿಘಿ ಕಾರ್ಯಕ್ರಮದಲ್ಲಿ ಭಾಗಿಯಾದವರನ್ನು ಹಜ್ ಭವನದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಎರಡೆರಡು ಟೆಸ್ಟ್ ಆಗಿದೆ. ಅವರು ಕೊರೊನಾ ಸೋಂಕಿತರಲ್ಲ. ಮೇ 3ರ ನಂತರ ಕೋರ್ಟ್ ಆರಂಭವಾದ ಮೇಲೆ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details