ಕರ್ನಾಟಕ

karnataka

ETV Bharat / state

ಬ್ಯಾಗ್​ನಲ್ಲಿ ಗಾಂಜಾ ಇಟ್ಟು ಹಣಕ್ಕೆ ಬೇಡಿಕೆ ಆರೋಪ: ಇಬ್ಬರು ಕಾನ್ಸ್​ಟೇಬಲ್​​ಗಳ ಅಮಾನತು - ಅಮಾನತು

ಹಣಕ್ಕೆ ಬೇಡಿಕೆ ಆರೋಪ. ಬಂಡೇಪಾಳ್ಯ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಮಲ್ಲೇಶ್ ಹಾಗೂ ಕೀರ್ತಿ ಕುಮಾರ್ ಅವರನ್ನು ಅಮಾನತುಗೊಳಿಸಿ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಆದೇಶಿಸಿದ್ದಾರೆ.

Representative image
ಪ್ರಾತಿನಿಧಿಕ ಚಿತ್ರ

By

Published : Jan 16, 2023, 3:02 PM IST

ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ಸಿ.ಕೆ.ಬಾಬಾ

ಬೆಂಗಳೂರು:ನೈಟ್ ಶಿಫ್ಟ್ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವ್ಯಕ್ತಿಯೊಬ್ಬನನ್ನು ಅಡ್ಡಗಟ್ಟಿ ಹಣಕ್ಕೆ ಬೇಡಿಯಿಟ್ಟಿದ್ದ ಆರೋಪದಡಿ ಇಬ್ಬರು ಕಾನ್ಸ್​​‌ಟೇಬಲ್​​ಗಳನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಬಂಡೇಪಾಳ್ಯ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಮಲ್ಲೇಶ್ ಹಾಗೂ ಕೀರ್ತಿ ಕುಮಾರ್ ಅವರನ್ನು ಅಮಾನತುಗೊಳಿಸಿ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಆದೇಶಿಸಿದ್ದಾರೆ‌. ಹಿಮಾಚಲ ಪ್ರದೇಶ ಮೂಲದ ಪಾಟೀಲ್ ಎಂಬಾತ ಟ್ವಿಟರ್ ಮೂಲಕ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಡಿಸಿಪಿ ಸಿ.ಕೆ ಬಾಬಾ ಪ್ರಕರಣದ ಕುರಿತು ತನಿಖೆ ನಡೆಸಿ ಈ ಆದೇಶ ಹೊರಡಿಸಿದ್ದಾರೆ‌.

ಘಟನೆಯ ವಿವರ:ಜನವರಿ 11ರಂದು ಬೆಳಗ್ಗಿನ ಜಾವ 3:50ರ ಸುಮಾರಿಗೆ ರಾತ್ರಿ ಪಾಳಿ ಮುಗಿಸಿ ಬರುತ್ತಿದ್ದಾಗ ಹೆಚ್ಎಸ್ಆರ್ ಲೇಔಟ್ ಬಳಿ ತನ್ನನ್ನ ಅಡ್ಡಗಟ್ಟಿದ ಇಬ್ಬರು ಕಾನ್ಸ್​​‌ಟೇಬಲ್​ಗಳು ಪರಿಶೀಲನೆ ಮಾಡುವ ನೆಪದಲ್ಲಿ 5 ಸಾವಿರ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದರು. ಹಣ ನೀಡದ ಕಾರಣ ಬಲವಂತವಾಗಿ ನನ್ನ ಬ್ಯಾಗ್​​ನಲ್ಲಿ ಗಾಂಜಾ ಇಟ್ಟು ಬೆದರಿಸಿದ್ದರು. ಕೊನೆಗೆ 2 ಸಾವಿರ ರೂ., ಹಣ ತೆಗೆದುಕೊಂಡು ಬಿಟ್ಟು ಕಳುಹಿಸಿದ್ದಾರೆ ಎಂದು ವೈಭವ್ ಪಾಟೀಲ್ ಟ್ವಿಟರ್ ಮೂಲಕ ದೂರು ನೀಡಿದ್ದರು.

ಟ್ವಿಟರ್ ಮೂಲಕ ಬಂದ ದೂರನ್ನು ಗಂಭೀರವಾಗಿ ಪರಿಗಣಿಸಿ ಆಂತರಿಕ ತನಿಖೆ ಕೈಗೊಂಡಾಗ ಇಬ್ಬರೂ ಕಾನ್ಸ್‌ಟೇಬಲ್​​ಗಳು ಬಾಡಿ ವೋರ್ನ್ ಕ್ಯಾಮರಾ ಕಡ್ಡಾಯ ನಿಯಮವನ್ನ ಉಲ್ಲಂಘಿಸಿರುವುದಲ್ಲದೇ ಹಣಕ್ಕೆ ಬೇಡಿಕೆ ಇಟ್ಟಿರುವುದು ಸಾಬೀತಾಗಿದೆ. ಈ ಹಿನ್ನೆಲೆ ಅಮಾನತುಗೊಳಿಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ಮಾಹಿತಿ ನೀಡಿದ್ಧಾರೆ.

ಪಿಎಸ್‌ಐ, ಎಎಸ್‌ಐ ಅಮಾನತು:ಕಳೆದ ತಿಂಗಳುಚಿನ್ನದ ವ್ಯಾಪಾರಿಯಿಂದ ಸುಲಿಗೆ ಮಾಡಿದ ಆರೋಪದಲ್ಲಿ ನಗರದ ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆ ಪಿಎಸ್‌ಐ ಹಾಗೂ ಎಎಸ್‌ಐ ಅವರನ್ನು ಅಮಾನತುಗೊಳಿಸಿ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ಆದೇಶ ಹೊರಡಿಸಿದರು. ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆಯ ಪಿಎಸ್‌ಐ ಅಶೋಕ್ ಠಾಕೂರ್, ಎಎಸ್‌ಐ ರಮೇಶ್ ಅಮಾನತುಗೊಂಡವರು.

ನಗರದ ಚಿನ್ನದ ವ್ಯಾಪಾರಿಯೊಬ್ಬರು ಡಿಸೆಂಬರ್ 3ರಂದು ಬೆಳಗ್ಗೆ ಚಿನ್ನ ತುಂಬಿದ್ದ ಬ್ಯಾಗ್ ತೆಗೆದುಕೊಂಡು ತಮ್ಮ ಅಂಗಡಿಗೆ ಹೋಗುತ್ತಿದ್ದರು. ಟೌನ್‌ಹಾಲ್ ಬಳಿ ಹೋಗುತ್ತಿದ್ದಾಗ ಅಶೋಕ್ ಠಾಕೂರ್ ಹಾಗೂ ರಮೇಶ್ ಇವರನ್ನು ತಡೆದು ಠಾಣೆಗೆ ಕರೆತಂದಿದ್ದರು. ಬಳಿಕ ಚಿನ್ನಕ್ಕೆ ಸೂಕ್ತ ದಾಖಲೆ ಒದಗಿಸುವಂತೆ ಹೇಳಿದ್ದರು. ಇದಕ್ಕೆ ವ್ಯಾಪಾರಿಯು ತಮ್ಮ ಬಳಿಯಿದ್ದ ಎಲ್ಲ ದಾಖಲೆಗಳನ್ನೂ ನೀಡಿದ್ದರು.

ಠಾಣೆ ದಾಖಲಾತಿ ಬುಕ್‌ನಲ್ಲಿ ಈ ವಿಚಾರವನ್ನು ನಮೂದಿಸದೇ ವ್ಯಾಪಾರಿಗೆ ಹಣ ಕೊಡುವಂತೆ ಬೇಡಿಕೆಯಿಟ್ಟಿದ್ದರು. ನಂತರ ಹಣ ಪಡೆದು ಚಿನ್ನವಿದ್ದ ಬ್ಯಾಗ್​​ ಅನ್ನು ಕೊಟ್ಟು ಕಳುಹಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು

ಇದನ್ನೂ ಓದಿ:ಸುಲಿಗೆ ಆರೋಪ : ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆ ಪಿಎಸ್‌ಐ, ಎಎಸ್‌ಐ ಅಮಾನತು

ಕಾನ್ಸ್​ಟೇಬಲ್ ಅಮಾನತು:ಇತ್ತೀಚೆಗೆಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ವಿಚಾರ ಸಂಬಂಧ ವಿಜಯಪುರ ಗ್ರಾಮಾಂತರ ಠಾಣೆ ಕಾನ್ಸ್​​ಟೇಬಲ್ ರಾಜಶೇಖರ ಖಾನಾಪುರ ಅವರನ್ನು ಅಮಾನತುಗೊಳಿಸಿ ಎಸ್​​ಪಿ ಆನಂದಕುಮಾರ ಆದೇಶಿಸಿದ್ದರು. 'ಪೊಲೀಸರನ್ನು ಬೈಯುವ ನೀನು ಪೊಲೀಸ್ ಎಸ್ಕಾರ್ಟ್ ಇಲ್ಲದೇ ಮನೆಗೆ ಹೋಗು' ಎಂದು ಕಾನ್ಸ್​ಟೇಬಲ್ ಪೋಸ್ಟ್ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಾನ್ಸಟೇಬಲ್ ರಾಜಶೇಖರ ಖಾನಾಪುರ ಅಮಾನತುಗೊಳಿಸಲಾಗಿದೆ.

ABOUT THE AUTHOR

...view details