ಕರ್ನಾಟಕ

karnataka

ETV Bharat / state

ಲಿಂಗಾಯತ ಪಂಚಮಸಾಲಿ 2ಎ ಸೇರ್ಪಡೆಗೆ ಆಗ್ರಹ: ಮತ್ತೆ ಜಯಮೃತ್ಯುಂಜಯ ಶ್ರೀಗಳಿಂದ ಧರಣಿ ಸತ್ಯಾಗ್ರಹ..

ಬೆಂಗಳೂರಿನಲ್ಲಿ ಮತ್ತೆ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿಯಿಂದ ಧರಣಿ ಸತ್ಯಾಗ್ರಹ. ಲಿಂಗಾಯತ ಪಂಚಮಸಾಲಿ ಸಮುದಾಯ 2ಎಗೆ ಸೇರ್ಪಡೆಗೊಳಿಸುವಂತೆ ಆಗ್ರಹ.

By

Published : Jan 14, 2023, 5:26 PM IST

Jaya Mruthyunjaya Swamiji
ಜಯಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು:ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಕೂಡಲಸಂಗಮ ಪಂಚಮಸಾಲಿ ಪೀಠದ ಮಠಾಧೀಶ ಜಯಮೃತ್ಯುಂಜಯ ಸ್ವಾಮೀಜಿ ಅವರು ನಗರದ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು. ಬೆಂಗಳೂರು ಫ್ರೀಡಂ ಪಾರ್ಕ್​ದಲ್ಲಿ ಹಮ್ಮಿಕೊಂಡಿದ್ದ ಧರಣಿಯ ವೇಳೆ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ನೀಡುವ ಕುರಿತಾಗಿ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

’’ಲಿಂಗಾಯತ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡುವುದಾಗಿ ಸಿಎಂ ಬೊಮ್ಮಾಯಿ ತಾಯಿಯ ಮೇಲೆ ಆಣೆ ಮಾಡಿದ್ದರು. ಆದರೆ, ಈಗ ಮೀಸಲಾತಿ ನೀಡಿಲ್ಲ. ಗಾಯದ- ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಪಂಚಮಸಾಲಿ ಮೀಸಲಾತಿ 2 ಎಗೆ ಹೋರಾಟ ಮಾಡಿದ್ದಕ್ಕೆ ಮುಖ್ಯಮಂತ್ರಿಗಳು ನಮ್ಮ ಬೇಡಿಕೆ ಈಡೇರಿಸುತ್ತಾರೆ. ನಮ್ಮ ಕನಸು ನನಸು ಆಗುತ್ತದೆ ಎಂಬ ನಂಬಿಕೆ ಇಟ್ಟುಕೊಂಡಿದ್ದೆವು. ಆದರೆ, ಹಿಂದಿನ ತಿಂಗಳು ಡಿಸೆಂಬರ್ 29 ರಂದು ಸರ್ಕಾರ ಬೆಳಗಾವಿಯ ಸಚಿವ ಸಂಪುಟದಲ್ಲಿ 2 ಎ ಬದಲಾಗಿ 2 ಡಿ ನೀಡಲೂ ಒಪ್ಪಿಕೊಂಡಿತು. ಎಲ್ಲ ಲಿಂಗಾಯಿತ ಸಮುದಾಯಕ್ಕೆ ನೀಡುತ್ತೇವೆ ಎಂದರೂ,ಅದಕ್ಕೂ ಒಪ್ಪಿಕೊಂಡಿದ್ದೇವು. ಆದರೆ 2 ಡಿ ನಮಗೆ ಬೇಡ. ಹಿಂದುಳಿದ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆಗೊಳಿಸಬೇಕು’’ ಎಂದು ಒತ್ತಾಯಿಸಿದರು.

ಪ್ರತಿದಿನ 2 ತಾಲೂಕುಗಳಿಂದ ಜನ: ಏಕಾಂಗಿಯಾಗಿ ಹೋರಾಟ ಮಾಡುವ ನಿರ್ಧಾರ ಮಾಡಿದ್ದೆ. ಆದರೆ, ಸಮುದಾಯದ ಜನ ತಾವೂ ಪಾಲ್ಗೊಳ್ಳುತ್ತೇವೆ ಎಂದು ಮುಂದೆ ಬಂದಿದ್ದಾರೆ. ಸೋಮವಾರದಿಂದ ಪ್ರತಿದಿನ 2 ತಾಲೂಕುಗಳಿಂದ ಜನ ಬರುತ್ತಿದ್ದಾರೆ. ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಹುಲಿ:ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿಸ್ವಾರ್ಥದಿಂದ ಮೀಸಲಾತಿ ಹೋರಾಟ ಮಾಡುತ್ತಿದ್ದಾರೆ. ಸಚಿವ ನಿರಾಣಿ ಹುಲಿ ಜತೆ ಮಾತನಾಡಲಿ. ಯಾರೇ ಆಗಲಿ ವೈಯಕ್ತಿಕ ನಿಂದನೆ ಮಾಡುವುದು ಬೇಡ, ಎಲ್ಲರೂ ಒಂದೇ ತಾಯಿಯ ಮಕ್ಕಳು ಎಂದು ಸಲಹೆ ನೀಡಿದರು.

27 ವರ್ಷಗಳ ಹೋರಾಟ: ಮಾಜಿ ಸಚಿವ ವಿನಯ್ ಕುಲಕರ್ಣಿ ಮಾತನಾಡಿ, ಇದು 27 ವರ್ಷಗಳ ನಿರಂತರ ಹೋರಾಟ. 3 ಬಿ ಮೀಸಲಾತಿ ಕೊಟ್ಟು ಸುಮ್ಮನಾಗಿಸಿದ್ದಾರೆ. ಆರ್ಥಿಕವಾಗಿ ನಮ್ಮ ಜನಾಂಗದವರು ಹಿಂದುಳಿದಿದ್ದಾರೆ. ಬಡ ರೈತರಿದ್ದಾರೆ, ಕೂಲಿ ಕಾರ್ಮಿಕರಿದ್ದಾರೆ. ಮತ್ತೆ ಆ ರೈತರು ಸಂಕಷ್ಟದಲ್ಲಿದ್ದಾರೆ. ಶೇಕಡಾ 99 ರಷ್ಟು ನಮ್ಮ‌ ಮಂದಿ ಕೃಷಿಯಲ್ಲಿದ್ದಾರೆ. ಅವರಿಗೆ ಸಹಾಯವಾಗಲಿ ಎಂಬುದು ನಮ್ಮ ಆಶಯ.

ಈ ಹೋರಾಟಕ್ಕೆ ರಾಜಕೀಯ ತರಬಾರದು. ನಮ್ಮ ಹೋರಾಟ ಇದು. ನ್ಯಾಯಯುತ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಸ್ವಾಮೀಜಿ ಅವರು ಅವತ್ತು ಬಂದು‌ ಧರಣಿಗೆ ಕುಳಿತಿದ್ದಾರೆ. ಅವರ ಬೆಂಬಲಕ್ಕೆ ನಾವಿದ್ದೇವೆ. ರಾಜ್ಯದಲ್ಲಿ ಹೆಚ್ಚು ಜನಸಂಖ್ಯೆ ಇರುವ ಲಿಂಗಾಯತ ಪಂಚಮಸಾಲಿಗಳು ಶಿಕ್ಷಣ, ಉದ್ಯೋಗದ ಸಲುವಾಗಿ ನಾವು ಈ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ವರ್ಷದಿಂದ ನಿರಂತರ ಹೋರಾಟ: ಪಂಚಮಸಾಲಿ ಮೀಸಲಾತಿ ಬೇಡಿಕೆ ಇಟ್ಟುಕೊಂಡು ಕಳೆದ 1 ವರ್ಷದಿಂದ ನಿರಂತರ ಹೋರಾಟ ನಡೆಸಿರುವ ಸ್ವಾಮೀಜಿಗಳು ರಾಜ್ಯಾದ್ಯಂತ ಪಾದಯಾತ್ರೆ ಕೈಗೊಂಡಿದ್ದರು. ರಾಜ್ಯ ಸರ್ಕಾರ ಪಂಚಮಸಾಲಿ ಮೀಸಲಾತಿ ಬೇಡಿಕೆ ಹೋರಾಟಕ್ಕೆ ಸ್ಪಂದಿಸಿ ಲಿಂಗಾಯತರಿಗೆ 2 ಡಿ ಪ್ರವರ್ಗ ಸೃಷ್ಟಿಸಿ ಮೀಸಲಾತಿ ಒದಗಿಸುವ ತೀರ್ಮಾನ ಮಾಡಿತು. ಆದರೆ, ಸರ್ಕಾರದ ತೀರ್ಮಾನವನ್ನು ಒಪ್ಪದ ಮೃತ್ಯುಂಜಯ ಸ್ವಾಮೀಜಿ 2 ಎ ಸೇರ್ಪಡೆಯ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದರು. ಇದರ ಮುಂದುವರಿದ ಭಾಗವಾಗಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪಂಚಮಸಾಲಿ ಸಮುದಾಯದ ಮುಖಂಡರೊಂದಿಗೆ ಧರಣಿ ನಡೆಸಿದ್ದಾರೆ.

ಇದನ್ನೂಓದಿ:ಕರ್ನಾಟಕದಲ್ಲಿ ಸಂಕ್ರಾಂತಿ ಸಂಭ್ರಮ: ಇಲ್ಲಿನ ಆಚರಣೆ ಮತ್ತು ಹಬ್ಬದ ವಿಶೇಷತೆ

ABOUT THE AUTHOR

...view details