ಬೆಂಗಳೂರು :ಇಂದು ಹೆಚ್‌ಟಿಟಿ-40 ಟ್ರೈನಿಂಗ್ ವಿಮಾನದ ಬೆಲೆಯ ಬಗ್ಗೆ ಪತ್ರ (RFP) ಸಲ್ಲಿಸಲು ವಾಯುಪಡೆ ಹೆಚ್‌ಎಎಲ್‌ಗೆ ಕೇಳಿದೆ.
ಆರ್‌ಎಫ್‌ಪಿ ಪ್ರಕಾರ ಮೊದಲ ಹಂತದಲ್ಲಿ 70 ವಿಮಾನಗಳ ನಂತರ 38 ವಿಮಾನಗಳ ಬಗ್ಗೆ ಮಾತುಕತೆ ನಡೆದಿದೆ. ಈ ಸಂಬಂಧ ಯಲಹಂಕ ವಾಯುನೆಲೆ ಏರೋ ಇಂಡಿಯಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್‌ಎಎಲ್ ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್, ರಕ್ಷಣಾ ಇಲಾಖೆ ಹೆಚ್‌ಟಿಟಿ-40 ಕುರಿತ ಆರ್‌ಎಫ್‌ಪಿ ಕೇಳಿದೆ. ಈ ವಿಷಯವಾಗಿ ಹೆಚ್‌ಎಎಲ್ ಸಂತಸ ವ್ಯಕ್ತ ಪಡಿಸಿದೆ. ಹೆಚ್‌ಟಿಟಿ-40 ವಿಮಾನ ವಾಯು ಪಡೆಯ ಪೈಲೆಟ್‌ಗಳ ಪ್ರಾಥಮಿಕ ಹಂತದ ಟ್ರೈನಿಂಗ್‌ಗೆ ಬಳಸಲಾಗುತ್ತದೆ. ನಂತರ ಎರಡನೇ ಹಂತದ ಟ್ರೈನಿಂಗ್‌ಗೆ ಹಾಕ್ ವಿಮಾನ ನೀಡಲಾಗುತ್ತದೆ ಎಂದು ವಿವರಣೆ ನೀಡಿದರು.