ಬೆಂಗಳೂರು: ನಗರ ಸೇರಿದಂತೆ ರಾಜ್ಯದಲ್ಲಿ ಉಂಟಾದ ಮಳೆಹಾನಿ ಕುರಿತು ಕೇಂದ್ರ ಅಧ್ಯಯನ ತಂಡಕ್ಕೆ ವಿಸ್ತೃತ ಮಾಹಿತಿ ನೀಡಿದ್ದು, ಈ ತಂಡಗಳು ಅಧ್ಯಯನ ನಡೆಸಿದ ನಂತರ ಮತ್ತೊಮ್ಮೆ ಸಭೆ ನಡೆಸಿ ನಷ್ಟ ಪರಿಹಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ನಾನು ಸಚಿವರೆಲ್ಲ ಬೆಳಗಾವಿಗೆ ಹೋಗುತ್ತಿದ್ದೇವೆ. ಮಳೆ ಹಾನಿ ಬಗ್ಗೆ ಕೇಂದ್ರ ಅಧ್ಯಯನ ತಂಡದೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದೇನೆ. ಕಳೆದ ಮೂರು ತಿಂಗಳುಗಳಲ್ಲಿ ಉಂಟಾದ ಮಳೆ ಹಾನಿ ಬಗ್ಗೆ, ಪ್ರಾಣ ಹಾನಿ, ಬೆಳೆ ಹಾನಿ, ಜಾನುವಾರು ಹಾನಿ, ಮನೆ ಹಾನಿಗಳ ಬಗ್ಗೆ ವಿವರ ನೀಡಿದ್ದೇನೆ. ವಿಶೇಷವಾಗಿ ಬೆಂಗಳೂರಿನ ಮಳೆಯ ಹಾನಿಯ ಬಗ್ಗೆ ವಿವರ ನೀಡಿದ್ದೇನೆ ಎಂದರು.
ಮಳೆಹಾನಿ ಪರಿಶೀಲನೆಗೆ ಕೇಂದ್ರ ಅಧ್ಯಯನ ತಂಡ:ಬೆಂಗಳೂರಿನಲ್ಲಿ ಅಂಗಡಿಗಳಿಗೆ ನೀರು ನುಗ್ಗಿ ಹಾನಿಯಾಗಿರುವ ಬಗ್ಗೆ ಪರಿಹಾರ ನೀಡಲು ಮನವಿ ಮಾಡಿದ್ದೇವೆ. ಬೋಟ್ಗೆ ನೀರು ನುಗ್ಗಿ ಹಾನಿಯಾದರೆ ಪರಿಹಾರ ನೀಡಲಾಗುವುದಿಲ್ಲ. ಆದರೆ, ಈ ಬಗ್ಗೆಯೂ ಮನವಿ ಮಾಡಿದ್ದೇವೆ. ಈಗ ವಿವರಣೆ ನೀಡಿದ್ದೇವೆ, ಅವರು ಸಂಪೂರ್ಣ ಪರಿಶೀಲನೆ ನಡೆಸಿ ಬಂದ ಬಳಿಕ ಮತ್ತೊಮ್ಮೆ ನಷ್ಟ ಅಂದಾಜು ಪರಿಹಾರಕ್ಕೆ ಮನವಿ ಮಾಡುತ್ತೇನೆ ಎಂದರು.