ಕರ್ನಾಟಕ

karnataka

2 ತಿಂಗಳ ಹಿಂದಿನ ಸ್ಯಾಂಪಲ್​ನಲ್ಲಿ ಡೆಲ್ಟಾ ಪ್ಲಸ್ ಪತ್ತೆ; ರಾಜ್ಯದಲ್ಲಿ 3ಕ್ಕೇರಿದ ರೂಪಾಂತರಿ ಸಂಖ್ಯೆ

By

Published : Jul 12, 2021, 9:01 PM IST

ಬೆಂಗಳೂರಿನ ನಂದಿನಿ ಲೇಔಟ್ ನ 60 ವರ್ಷದ ವೃದ್ದೆಯಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ಪತ್ತೆಯಾಗಿದ್ದು, ಹೋಮ್ ಐಸೋಲೇಷನ್‌ನಲ್ಲೇ ಇದ್ದು ಗುಣಮುಖ ಆಗಿದ್ದಾರೆ.

corona warriors
ಕೊರೊನಾ ವಾರಿಯರ್ಸ್​

ಬೆಂಗಳೂರು: ರಾಜ್ಯದಲ್ಲಿ ವಂಶವಾಹಿ ಪರೀಕ್ಷೆ ನಡೆಸಿದಷ್ಟು ರೂಪಾಂತರಿ ಸೋಂಕು ಪತ್ತೆಯಾಗ್ತಿದೆ. ಸದ್ಯ ಕೋವಿಡ್ ರೂಪಾಂತರಿಗಳೇ ಹೆಚ್ಚು ಆತಂಕ ಮೂಡಿಸಿದ್ದು ಮೂವರಲ್ಲಿ ಡೆಲ್ಟಾ ಪ್ಲಸ್ ಸೋಂಕು ಪತ್ತೆಯಾಗಿದೆ.

ಡೆಲ್ಟಾ ಪ್ಲಸ್ ಸೋಂಕು ಪತ್ತೆ

ಬೆಂಗಳೂರಿನ ನಂದಿನಿ ಲೇಔಟ್‌ನ 60 ವರ್ಷದ ವೃದ್ದೆಯಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ಪತ್ತೆಯಾಗಿದ್ದು, ಹೋಮ್ ಐಸೋಲೇಷನ್‌ನಲ್ಲೇ ಇದ್ದು ಗುಣಮುಖ ಆಗಿದ್ದಾರೆ. ಅಂದಹಾಗೇ, ಎರಡು‌ ತಿಂಗಳ ಹಿಂದಿನ ಸ್ಯಾಂಪಲ್​ನ ಫಲಿತಾಂಶ ಈಗ‌ ಲಭ್ಯವಾಗಿದ್ದು, ಆತಂಕಪಡುವ ಅಗತ್ಯ ಇಲ್ಲ. ಆದರೆ ಎಚ್ಚರಿಕೆ ದೃಷ್ಟಿಯಿಂದ ವೃದ್ದೆಯ ಮನೆಯ 100 ಮೀಟರ್ ವ್ಯಾಪ್ತಿಯಲ್ಲಿ 50 ಮಂದಿಯ ಸ್ಯಾಂಪಲ್ ಟೆಸ್ಟ್​ಗೆ ಕಳುಹಿಸಲಾಗಿದೆ.

ನಾಳೆ ಎಲ್ಲರ ಪರೀಕ್ಷಾ ವರದಿ ಲಭ್ಯವಾಗಲಿದೆ. ವೃದ್ಧೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಮೂವರು ಕೂಡ ಎಸಿಮ್ಟಮ್ಯಾಟಿಕ್ ಆಗಿದ್ದಾರೆ. ಅವರ ಸ್ಯಾಂಪಲ್‌ಗಳನ್ನು ಜೀನೋಮ್ ಸೀಕ್ವೆನ್ಸಿಂಗ್​ಗೆ ಕಳುಹಿಸಲಾಗಿದೆ.

ರೂಪಾಂತರಿ ಅಂಕಿ-ಅಂಶ

ಆಲ್ಪಾ 140
ಬೀಟಾ 06
ಡೆಲ್ಟಾ 725
ಡೆಲ್ಟಾ ಪ್ಲಸ್ 3
ಕಪ್ಪಾ 145

ಇದನ್ನೂ ಓದಿ:ವಾಟ್ಸ್‌ಆ್ಯಪ್ ಕರೆಗಳಲ್ಲಿ ಡೇಟಾ ಬಳಕೆ ಕಡಿಮೆ ಮಾಡುವುದು ಹೇಗೆ!?

ABOUT THE AUTHOR

...view details