ಕರ್ನಾಟಕ

karnataka

ETV Bharat / state

ಸೈಕ್ಲೊಥಾನ್‌ನಲ್ಲಿ ಭಾಗಿಯಾದ ಮಹಿಳೆಯರಿಗೆ ಕಾಟ ನೀಡಿದ್ದ ಕಾಮುಕ ಡೆಲಿವರಿ ಬಾಯ್ ಅರೆಸ್ಟ್​ - Misbehavior with women in Cyclothon

ಸೈಕ್ಲೊಥಾನ್‌ನಲ್ಲಿ ಸಾಗುತ್ತಿದ್ದ ಮಹಿಳೆಯರ ಜೊತೆ ಅನುಚಿತ ವರ್ತನೆ- ವಾಕಿಂಗ್​ ಮಾಡುತ್ತಿದ್ದ ಮಹಿಳೆಗೆ ಕಿರುಕುಳ- ಕಾಮುಕ ಡೆಲಿವರಿ ಬಾಯ್ ಬಂಧನ

ಡೆಲಿವರಿ ಬಾಯ್ ಬಂಧನ
ಡೆಲಿವರಿ ಬಾಯ್ ಬಂಧನ

By

Published : Jul 9, 2022, 12:34 PM IST

ಬೆಂಗಳೂರು: ಸೈಕ್ಲೊಥಾನ್‌ನಲ್ಲಿ ಭಾಗಿಯಾಗಿದ್ದ ಮಹಿಳೆಯರಿಗೆ ಕಾಟ ನೀಡಿದ್ದ ಕಾಮುಕನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಂಗಾಧರ್ ಬಂಧಿತ ಆರೋಪಿ.

ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ಗಂಗಾಧರ್, ಜುಲೈ 3ರಂದು ನಗರದ ಪ್ಯಾಲೇಸ್ ರಸ್ತೆಯ ಕಾವೇರಿ ಜಂಕ್ಷನ್ ಬಳಿ ಸೈಕ್ಲೊಥಾನ್‌ನಲ್ಲಿ ಸಾಗುತ್ತಿದ್ದ ಮಹಿಳೆಯರ ಹಿಂಭಾಗ ಸ್ಪರ್ಶಿಸಿ ಅನುಚಿತವಾಗಿ ವರ್ತಿಸಿದ್ದ. ಸಾಲದೆಂಬಂತೆ ವೈಯಾಲಿಕಾವಲ್ ಸಮೀಪದಲ್ಲಿ ವಾಕಿಂಗ್​ ಮಾಡುತ್ತಿದ್ದ ಮಹಿಳೆಯೊಬ್ಬರಿಗೂ ಇದೇ ರೀತಿ ಕಿರುಕುಳ ನೀಡಿದ್ದ ಎನ್ನಲಾಗ್ತಿದೆ.

ಆರೋಪಿಯ ವಿಕೃತ ಕೃತ್ಯಕ್ಕೆ ಬೇಸತ್ತ ಇಬ್ಬರು ಮಹಿಳೆಯರು ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಕೃತ್ಯ ನಡೆದ ಸಮಯವನ್ನ ಆಧರಿಸಿ ಅಕ್ಕಪಕ್ಕದ ಸಿಸಿಟಿವಿ ಕ್ಯಾಮರಾಗಳನ್ನ ಪರಿಶೀಲಿಸಿ ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.

ಇದನ್ನೂ ಓದಿ:ಚಾಲಕನ ವರ್ಗಾವಣೆಗೊಳಿಸಿದ್ದಕ್ಕೆ ಐಎಎಸ್ ಅಧಿಕಾರಿಗೇ ಅವಾಜ್​.. ಸಚಿವರ ಆಪ್ತನೆಂದು ಬೆದರಿಕೆ ಹಾಕಿದವ ಅಂದರ್​

ABOUT THE AUTHOR

...view details