ಬೆಂಗಳೂರು: ಗಣರಾಜ್ಯೋತ್ಸವದಂದು ಕೆಂಪುಕೋಟೆ ಬಳಿ ನಡೆದ ಗಲಾಟೆ ಪೂರ್ವನಿಯೋಜಿತ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ದೆಹಲಿ ಗಲಾಟೆ ಪೂರ್ವ ನಿಯೋಜಿತ: ಸಚಿವ ಸುರೇಶ್ ಕುಮಾರ್
ದೆಹಲಿ ಗಲಾಟೆ ಪೂರ್ವ ನಿಯೋಜಿತವಾಗಿದ್ದು, ಇದರ ನೇತೃತ್ವ ವಹಿಸಿಕೊಂಡವರು ಇದರ ಹೊಣೆ ಹೊರಬೇಕು ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಅಧಿಕೃತವಾಗಿ ಗಣರಾಜ್ಯೋತ್ಸವ ಆದ ನಂತರ ರೈತರ ಪ್ರತಿಭಟನೆಗೆ ಅವಕಾಶ ಕೊಡಲಾಗಿತ್ತು. ಟ್ರ್ಯಾಕ್ಟರ್ಗಳನ್ನು ತಂದು ಬ್ಯಾರಿಕೇಡ್ ತಳ್ಳಿ ಖಡ್ಗ ಹಿಡಿದು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಉದ್ದೇಶಕ್ಕಿಂತ ದುರುದ್ದೇಶ ಹೆಚ್ಚಾಗಿತ್ತು. ಯಾರು ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೋ ಅವರು ನೈತಿಕ ಹೊಣೆ ಹೊರಬೇಕು ಎಂದರು.
ರಾಮ ಮಂದಿರ ವಿಚಾರವಾಗಿ ಮಾತಾನಾಡಿದ ಅವರು, ರಾಮ ಮಂದಿರ ನಿರ್ಮಾಣದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಪಂಥ ಭೇದವಿಲ್ಲದೇ, ಭಾಷೆ ಭೇದವಿಲ್ಲದೆ ಸ್ವಾಗತಿಸಿದ್ದಾರೆ. ಗುಡ್ಡದಹಳ್ಳಿಯಲ್ಲಿ ನಿಧಿ ಸಂಗ್ರಹ ಮಾಡುವವರ ಮೇಲೆ ಹಲ್ಲೆ ಮಾಡಿರುವುದನ್ನು ನಾನು ಖಂಡಿಸುತ್ತೇನೆ. ಈ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಗೃಹ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.