ಬೆಂಗಳೂರು: ನೆರೆ ಹಾವಳಿಗೆ ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗದ ಹಿನ್ನೆಲೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ದೆಹಲಿಗೆ ನಿಯೋಗ ತೆರಳಲಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.
ನೆರೆ ಹಾವಳಿ ಪರಿಹಾರಕ್ಕೆ ಶೀಘ್ರವೇ ದೆಹಲಿಗೆ ನಿಯೋಗ: ದೇವೇಗೌಡ
ರಾಜ್ಯದ ನೆರೆ ಹಾವಳಿಗೆ ಕೇಂದ್ರದಿಂದ ಯಾವುದೇ ಅನುದಾನ ಬಿಡುಗಡೆಯಾಗದ ಹಿನ್ನೆಲೆ ಕೂಡಲೇ ದೆಹಲಿಗೆ ನಿಯೋಗ ತೆರಳುತ್ತೇನೆ. ಪ್ರಧಾನಿ ಮೋದಿ ಜತೆ ಮಾತನಾಡಿ ಅನುದಾನಕ್ಕೆ ಒತ್ತು ನೀಡುವಂತೆ ಆಗ್ರಹಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ
ನೆರೆ ಅನುದಾನ ಬಿಡುಗಡೆಗೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಕೈಗೊಳ್ಳಲು ಯಾವುದೇ ದಾಕ್ಷಿಣ್ಯ ತೋರುವುದಿಲ್ಲ. ಮೊಟ್ಟಮೊದಲಿಗೆ 5 ಸಾವಿರ ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ಇದುವರೆಗೂ ಉತ್ತರ ಬಂದಿಲ್ಲ ಎಂದು ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಂಡ ಜಿಲ್ಲಾವಾರು ಮುಖಂಡರ ಸಭೆಗೂ ಮುನ್ನ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಕಾಶ್ಮೀರ, ಹಿಂದಿ ಭಾಷೆ ಸೇರಿದಂತೆ ಇನ್ನಿತರ ವಿಚಾರದಲ್ಲಿ ಮುಳುಗಿರುವ ಕೇಂದ್ರಕ್ಕೆ ನಮ್ಮ ಪತ್ರಕ್ಕೆ ಉತ್ತರಿಸುವಷ್ಟು ಸಮಯವು ಇಲ್ಲವಾಗಿದೆ ಎಂದು ಪ್ರಧಾನಿ ವಿರುದ್ಧ ವ್ಯಂಗ್ಯವಾಡಿದರು.