ಕರ್ನಾಟಕ

karnataka

ETV Bharat / state

ಡಿ.ಕೆ ಶಿವಕುಮಾರ್​​ ಭೇಟಿಯಾದ ಸಾರಿಗೆ ನೌಕರರ ನಿಯೋಗ - ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ

ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ನೌಕರರ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಈ ಸಂದರ್ಭ ಪ್ರತಿಪಕ್ಷ ನಾಯಕರಾಗಿ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಮೂಲಕ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಸಾರಿಗೆ ಇಲಾಖೆ ಮುಖ್ಯಸ್ಥರು ಮುಂದಾಗಿದ್ದು, ಮಾತುಕತೆ ನಡೆಸಿ ಸಮಸ್ಯೆ ವಿವರಿಸಲು ಆಗಮಿಸಿದ್ದರು.

DK Sivakumar
ಡಿ.ಕೆ ಶಿವಕುಮಾರ್​​

By

Published : Apr 12, 2021, 10:49 PM IST

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ ಪ್ರತಿನಿಧಿಗಳ ನಿಯೋಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಸೋಮವಾರ ಸಂಜೆ ಭೇಟಿ ಮಾಡಿ, ತಮ್ಮ ಸಮಸ್ಯೆಗಳ ಪಟ್ಟಿಯ ಅಹವಾಲು ಸಲ್ಲಿಸಿದೆ.

ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ್, ಜಂಟಿ ಕಾರ್ಯದರ್ಶಿ ಆನಂದ್, ಖಜಾಂಚಿ ಜಗದೀಶ್, ಹರೀಶ್ ಗೌಡ, ಶೌಕತ್ ಆಲಿ ನಿಯೋಗದಲ್ಲಿದ್ದರು. ಕಳೆದ 6 ದಿನಗಳಿಂದ ಸಾರಿಗೆ ನೌಕರರ ನಡೆಸುತ್ತಿರುವ ಪ್ರತಿಭಟನೆಗೆ ರಾಜ್ಯ ಸರ್ಕಾರ ಯಾವುದೇ ಬೆಲೆ ಕೊಟ್ಟಿಲ್ಲ. ಮಾತುಕತೆಗೆ ಆಹ್ವಾನಿಸಿಲ್ಲ. ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ನೌಕರರ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಈ ಸಂದರ್ಭ ಪ್ರತಿಪಕ್ಷದ ಪ್ರಮುಖ ನಾಯಕರಾಗಿ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಮೂಲಕ ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಸಾರಿಗೆ ಇಲಾಖೆ ಮುಖ್ಯಸ್ಥರು ಮುಂದಾಗಿದ್ದು, ಮಾತುಕತೆ ನಡೆಸಿ ಸಮಸ್ಯೆ ವಿವರಿಸಲು ಆಗಮಿಸಿದ್ದರು.

ಡಿಕೆಶಿ ಭೇಟಿ ಸಂದರ್ಭ ತಮ್ಮ ಸಮಸ್ಯೆಯನ್ನು ಸವಿಸ್ತಾರವಾಗಿ ನಿಯೋಗದ ಸದಸ್ಯರು ವಿವರಿಸಿದ್ದಾರೆ . ತಮ್ಮ ವ್ಯಾಪ್ತಿಯಲ್ಲಿ ಸಾರಿಗೆ ನೌಕರರ ಪರವಾಗಿ ಗಂಭೀರ ಹೋರಾಟ ನಡೆಸುವುದಾಗಿ ಡಿಕೆಶಿ ಇದೇ ಸಂದರ್ಭ ಭರವಸೆ ನೀಡಿದ್ದಾರೆ.

ಇದನ್ನೂ ಓದಿ:ಖಾಸಗಿ ವಾಹನಗಳ ತೆರಿಗೆ ಪಾವತಿ ದಿನಾಂಕ ಮುಂದೂಡಿದ ಸರ್ಕಾರ

ABOUT THE AUTHOR

...view details