ಕರ್ನಾಟಕ

karnataka

ETV Bharat / state

ಕಬ್ಬಿನ ಎಫ್​ಆರ್​ಪಿ ದರ ಪರಿಷ್ಕರಣೆ: ಸಿಎಂ ಭೇಟಿ ಮಾಡಿದ ಕಬ್ಬು ಬೆಳೆಗಾರರ ನಿಯೋಗ - ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿದ ಕಬ್ಬು ಬೆಳೆಗಾರರ ನಿಯೋಗ, ಪ್ರತಿ ಟನ್ ಕಬ್ಬಿಗೆ 3200 ರೂ. ಎಫ್​ಆರ್​ಪಿ ದರ ನಿಗದಿ ಮಾಡಬೇಕು ಹಾಗೂ ರೈತರ ಬಾಕಿ ವಿಚಾರದಲ್ಲಿ ತಪ್ಪು ಮಾಹಿತಿ ನೀಡುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಮನವಿ ಮಾಡಿತು.

delegation-of-sugarcane-growers-met-cm-basavaraj-bommayi
ಕುರುಬೂರು ಶಾಂತ ಕುಮಾರ್

By

Published : Oct 5, 2021, 11:01 PM IST

ಬೆಂಗಳೂರು: ಪ್ರತಿ ಟನ್ ಕಬ್ಬಿಗೆ 3200 ರೂ. ಎಫ್​ಆರ್​ಪಿ ದರ ನಿಗದಿ ಮಾಡಬೇಕು ಹಾಗು ರೈತರ ಬಾಕಿ ವಿಚಾರದಲ್ಲಿ ತಪ್ಪು ಮಾಹಿತಿ ನೀಡುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇವೆ. ಮುಂದಿನ ಹೋರಾಟದ ಕುರಿತು ನಮ್ಮ ರೈತರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ತಿಳಿಸಿದ್ದಾರೆ.

ಸಿಎಂ ಭೇಟಿ ಮಾಡಿದ ಕಬ್ಬು ಬೆಳೆಗಾರರ ನಿಯೋಗ

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಮತ್ತು‌ ಸಕ್ಕರೆ ಸಚಿವರ ಬಳಿ‌ ನಮ್ಮ ಬೇಡಿಕೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಸಕ್ಕರೆ ಕಾರ್ಖಾನೆ ಮಾಲೀಕರು, ಕಬ್ಬು ಬೆಳೆಗಾರರ ಸಭೆ ಕರೆಯಲು ಸಿಎಂ ಸಮ್ಮತಿಸಿ, ಮುಂದಿನ ವಾರ ಸಭೆ ಕರೆಯುವ ಭರವಸೆ ಕೊಟ್ಟಿದ್ದಾರೆ. ಸಭೆಯಲ್ಲಿ ಎಫ್​ಆರ್​ಪಿ ದರ ಪರಿಷ್ಕರಣೆ ಬಗ್ಗೆ ಚರ್ಚೆ ಮಾಡುವ ಭರವಸೆಯನ್ನೂ ಸಹ ನೀಡಿದ್ದಾರೆ ಎಂದರು.

ತಪ್ಪು ಮಾಹಿತಿ ನೀಡುವ ಕಾರ್ಖಾನೆ ಮಾಲೀಕರ ಮೇಲೆ ಕ್ರಮ: ಬಾಕಿ ಹಣ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿದ ಸಕ್ಕರೆ ಕಾರ್ಖಾನೆಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಮನವಿ ಮಾಡಿದ್ದೇವೆ. ಕಬ್ಬು ಬೆಳೆಯನ್ನ ಫಸಲ್ ಭೀಮಾ ಯೋಜನೆಯಡಿ ಸೇರಿಸುವಂತೆ ಮನವಿ ಮಾಡಿದ್ದೇವೆ. ಸಿಎಂ ಈ ಬಗ್ಗೆ ಕೃಷಿ ಸಚಿವರಿಗೆ ನಿರ್ದೇಶನ ಕೊಟ್ಟಿದ್ದಾರೆ, ಸಮಸ್ಯೆಗಳನ್ನ ಈಡೇರಿಸುವ ಭರವಸೆ ನೀಡಿದ್ದಾರೆ, ಹೀಗಾಗಿ ರೈತರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುತ್ತೇವೆ ಎಂದರು.

ಎಫ್ಆರ್​ಪಿ ದರ ಸಧ್ಯಕ್ಕೆ 2900 ರೂ. ನಿಗದಿ ಮಾಡಿದ್ದಾರೆ. ಉತ್ಪಾದನಾ ವೆಚ್ಚಕ್ಕೆ 3200 ಖರ್ಚು ಆಗುತ್ತದೆ ಎಂದು ಕೃಷಿ ಇಲಾಖೆಯವರೇ ಹೇಳುತ್ತಿದ್ದಾರೆ. ಇದಕ್ಕೆ ಲಾಭವನ್ನ ಸೇರಿಸಿ ಬೆಲೆಯನ್ನ ನಿಗದಿ ಮಾಡಿ ಅಂತಾ ಸಿಎಂಗೆ ಮನವಿ ಮಾಡಿದ್ದೇವೆ. ನಮ್ಮ ಬೇಡಿಕೆಗಳನ್ನ ಪರಿಗಣಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದರು.

ABOUT THE AUTHOR

...view details