ಕರ್ನಾಟಕ

karnataka

ETV Bharat / state

ಮತ್ತೆ ರಾಜಸ್ವ ಕೊರತೆಯ ಬಜೆಟ್ ಮಂಡನೆ; ಆದಾಯ ಸಂಗ್ರಹದ ಬೊಮ್ಮಾಯಿ ಲೆಕ್ಕಾಚಾರ ಹೇಗಿದೆ? - ಆದಾಯ ಸಂಗ್ರಹಣೆಗೆ ಸರ್ಕಾರದ ಲೆಕ್ಕಾಚಾರ ಏನು

2,04,587 ಕೋಟಿ ರೂ‌. ರಾಜಸ್ವ ವೆಚ್ಚದ ಅಂದಾಜು ಮಾಡಲಾಗಿದೆ. ರಾಜಸ್ವ ಸಂಗ್ರಹದ ಅಂದಾಜು 1,89,888 ಕೋಟಿ ರೂ. ಆಗಿದ್ದು. ಹೀಗಾಗಿ ಈ ಬಾರಿಯೂ ರಾಜಸ್ವ ಕೊರತೆಯ ಬಜೆಟ್ ಮಂಡಿಸಲಾಗಿದೆ.

budget deficit budget
ಈ ಬಾರಿಯೂ ರಾಜಸ್ವ ಕೊರತೆಯ ಬಜೆಟ್​

By

Published : Mar 4, 2022, 5:07 PM IST

ಬೆಂಗಳೂರು: 2022-23ನೇ ಸಾಲಿನಲ್ಲಿ ಸಿಎಂ ಬೊಮ್ಮಾಯಿ 72,000 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದ್ದಾರೆ. ಆ ಮೂಲಕ ರಾಜ್ಯದ ಒಟ್ಟು ಹೊಣೆಗಾರಿಕೆ 5,18,366 ಕೋಟಿ ರೂ. ತಲುಪಲಿದೆ. ತಮ್ಮ ಬಜೆಟ್​ನಲ್ಲಿ ಆರ್ಥಿಕ ಸಂಕಷ್ಟವನ್ನು ಮನಗಂಡಿರುವ ಸಿಎಂ ಬೊಮ್ಮಾಯಿ ಹಿತಮಿತವಾದ ಬಜೆಟ್ ಮಂಡನೆ ಮಾಡಿದ್ದಾರೆ.

ರಾಜ್ಯ ಸರ್ಕಾರ 2022-23ರಲ್ಲಿ 72,000 ಕೋಟಿ ಸಾಲ ಮಾಡಲು ನಿರ್ಧರಿಸಿದೆ. ಕೇಂದ್ರ ಸರ್ಕಾರದಿಂದ 3,089.36 ಕೋಟಿ ಸಾಲ ಮಾಡಲು ನಿರ್ಧರಿಸಿದರೆ, ಮುಕ್ತ ಮಾರುಕಟ್ಟೆಯಲ್ಲಿ 67,911 ಕೋಟಿ ರೂ. ಸಾಲ ಮಾಡಲು ಯೋಜಿಸಿದೆ. ಆ ಮೂಲಕ 2022-23 ಅಂತ್ಯಕ್ಕೆ ರಾಜ್ಯದ ಒಟ್ಟು ಹೊಣೆಗಾರಿಕೆ 5,18,366 ಕೋಟಿ ರೂ. ಮುಟ್ಟಲಿದೆ. ಆರ್ಥಿಕ ಸಂಕಷ್ಟದ ಮಧ್ಯೆ ಸಾಲದ ಮೊರೆ ಹೋಗುವುದು ಸಿಎಂ ಬೊಮ್ಮಾಯಿಗೆ ಅನಿವಾರ್ಯವಾಗಿತ್ತು. ಇತ್ತ ಜಿಎಸ್​ಟಿ ನಷ್ಟ ಪರಿಹಾರ ಮುಕ್ತಾಯವಾಗುವುದರಿಂದ ರಾಜ್ಯ ಸರ್ಕಾರ ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ಅನಿವಾರ್ಯತೆಯಲ್ಲಿದೆ.

ಈ ಬಾರಿನೂ ರಾಜಸ್ವ ಕೊರತೆಯ ಬಜೆಟ್:ತೆರಿಗೆ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಇತ್ತ ಬದ್ಧ ವೆಚ್ಚನ್ನೊಳಗೊಂಡ ರಾಜಸ್ವ ವೆಚ್ಚ ಹೆಚ್ಚಳವಾಗಿದೆ. ಸುಮಾರು 2,04,587 ಕೋಟಿ ರೂ‌. ರಾಜಸ್ವ ವೆಚ್ಚದ ಅಂದಾಜು ಮಾಡಲಾಗಿದೆ. ರಾಜಸ್ವ ಸಂಗ್ರಹದ ಅಂದಾಜು 1,89,888 ಕೋಟಿ ರೂ. ಆಗಿದೆ. ಹೀಗಾಗಿ ಈ ಬಾರಿಯೂ ರಾಜಸ್ವ ಕೊರತೆಯ ಬಜೆಟ್ ಮಂಡಿಸಲಾಗಿದೆ.

14,699 ಕೋಟಿ ರೂ.ನ ರಾಜಸ್ವ ಕೊರತೆಯ ಬಜೆಟ್ ಮಂಡಿಸಲಾಗಿದೆ. ಇತ್ತ 61,564 ಕೋಟಿ ರೂ.ನ ವಿತ್ತೀಯ ಕೊರತೆ ಎದುರಾಗಿದೆ. 2022-23ಸಾಲಿನಲ್ಲಿ 2,61,977 ಕೋಟಿ ರೂ. ಒಟ್ಟು ಜಮೆಯ ಅಂದಾಜು ಮಾಡಲಾಗಿದೆ. ಬಂಡವಾಳ ವೆಚ್ಚ 43,572 ಕೋಟಿ ರೂ. ಆಗಿದ್ದು, ಸಾಲ ಮರುಪಾವತಿ ಮೊತ್ತ 14,179 ಕೋಟಿ ರೂ. ಆಗಿದೆ.

ತೆರಿಗೆ ಸಂಗ್ರಹದ ಲೆಕ್ಕಾಚಾರ ಏನು?:2022-23ನೇ ಸಾಲಿನಲ್ಲಿ ಜಿಎಸ್​ಟಿ ನಷ್ಟ ಪರಿಹಾರ ಸೇರಿ ರಾಜ್ಯದ ಒಟ್ಟು ಸ್ವಂತ ತೆರಿಗೆ ಸಂಗ್ರಹ 1,31,883 ಕೋಟಿ ರೂ. ಅಂದಾಜು ಮಾಡಲಾಗಿದೆ. ತರಿಗೆಯೇತರ ರಾಜಸ್ವಗಳಿಂದ 10,941 ಕೋಟಿ ರೂ. ಸಂಗ್ರಹದ ನಿರೀಕ್ಷೆ ಮಾಡಲಾಗಿದೆ.

ಕೇಂದ್ರ ತೆರಿಗೆ ಪಾಲಿನ ರೂಪದಲ್ಲಿ 29,783 ಕೋಟಿ ರೂ. ಸಂಗ್ರಹದ ನಿರೀಕ್ಷೆ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಸಹಾಯಾನುದಾನ ರೂಪದಲ್ಲಿ 17,281 ಕೋಟಿ ರೂ. ಸಂಗ್ರಹ ನಿರೀಕ್ಷಿಸಲಾಗಿದೆ.

2021-22 ಸಾಲಿನಲ್ಲಿ 76,473 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹದ ಗುರಿಯನ್ನು ಹೊಂದಿತ್ತು. ಆದರೆ ಫೆಬ್ರವರಿ ಅಂತ್ಯಕ್ಕೆ 70,757 ಕೋಟಿ ರೂ. ಸಂಗ್ರಹ ಮಾಡಲಾಗಿದೆ. 2022-23 ಸಾಲಿನಲ್ಲಿ 77,010 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹ ಗುರಿ ಇರಿಸಲಾಗಿದೆ.

2021-22 ಸಾಲಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 12,655 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ನಿಗದಿಯಾಗಿದ್ದು, ಫೆಬ್ರವರಿ ಅಂತ್ಯಕ್ಕೆ 12,105 ಕೋಟಿ ರೂ. ರಾಜಸ್ವ ಸಂಗ್ರಹ ಮಾಡಲಾಗಿದೆ. 2022-23 ಸಾಲಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ 15,000 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ಇಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಗುರಿ‌ ಮುಟ್ಟುವ ನಿರೀಕ್ಷೆ ಇದೆ.

2021-22 ಸಾಲಿಗೆ ಅಬಕಾರಿ ಇಲಾಖೆಗೆ 24,580 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ನಿಗದಿ ಪಡಿಸಲಾಗಿದ್ದು, ಫೆಬ್ರವರಿ ಅಂತ್ಯಕ್ಕೆ 23,726 ಕೋಟಿ ರೂ. ಸಂಗ್ರಹಿಸಲಾಗಿದೆ. 2022-23ಸಾಲಿನಲ್ಲಿ ನಿರೀಕ್ಷಿತ ಗುರಿ ತಲುಪುವ ವಿಶ್ವಾಸ ಸರ್ಕಾರಕ್ಕಿದ್ದು 29,000 ಕೋಟಿ ರೂ. ಅಬಕಾರಿ ರಾಜಸ್ವ ಸಂಗ್ರಹದ ಗುರಿ ಹೊಂದಲಾಗಿದೆ.

2021-22 ಸಾಲಿನಲ್ಲಿ ಸಾರಿಗೆ ಇಲಾಖೆಗೆ 7,515 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ಹೊಂದಿತ್ತು. ಆದರೆ ಫೆಬ್ರವರಿವರೆಗೆ ಕೇವಲ 5960 ಕೋಟಿ ರೂ. ಸಂಗ್ರಹ ಮಾಡಲಾಗಿದೆ. 2022-23ನೇ ಸಾಲಿನಲ್ಲಿ 8,007 ಕೋಟಿ ರೂ. ಸಂಗ್ರಹದ ಗುರಿ ಹೊಂದಲಾಗಿದೆ. ನಿರೀಕ್ಷಿತ ಗುರಿ ಮುಟ್ಟುವುದು ಕಷ್ಟಕರವಾಗಿದೆ.

ಇದನ್ನೂ ಓದಿ:ಎಲ್ಲಾ ತಾಲ್ಲೂಕುಗಳಲ್ಲಿ ನೀಟ್ ಪರೀಕ್ಷೆಗೆ ತರಬೇತಿ; ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ₹500 ಕೋಟಿ

ABOUT THE AUTHOR

...view details