ಕರ್ನಾಟಕ

karnataka

ETV Bharat / state

ನಮ್ಮ ದೇಶದ ರಕ್ಷಣೆಗೆ ಇತರೆ ರಾಷ್ಟ್ರಗಳ ಮೇಲೆ ಅವಲಂಬನೆ ಆಗಲು ಸಾಧ್ಯವಿಲ್ಲ: ರಾಜನಾಥ್‌ ಸಿಂಗ್‌ - ರಕ್ಷಣಾ ಸಚಿವ ರಾಜನಾಥ್‌ ಸಿಂಗ್

ಮುಂದಿನ 3-4 ವರ್ಷಗಳಲ್ಲಿ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ 1.75 ಲಕ್ಷ ಕೋಟಿ ರೂ.ಗಳ ಗುರಿ ಸಾಧಿಸುತ್ತೇವೆಂಬ ವಿಶ್ವಾಸ ನನಗಿದೆ. ತೇಜಸ್ ಯುದ್ಧ ವಿಮಾನ ಸ್ಥಳೀಯ ವಿಮಾನವಷ್ಟೇ ಅಲ್ಲ, ಎಂಜಿನ್ ಸಾಮರ್ಥ್ಯ, ರೇಡಾರ್ ವ್ಯವಸ್ಥೆ, ದೃಶ್ಯ ವ್ಯಾಪ್ತಿಯನ್ನೂ ಮೀರಿ ಹಲವಾರು ನಿಯತಾಂಕಗಳಲ್ಲಿ ವಿದೇಶಿ ವಿಮಾನಗಳಿಗಿಂತ ಉತ್ತಮವಾಗಿದೆ ಮತ್ತು ಅಗ್ಗದ ದರವನ್ನು ಹೊಂದಿದೆ ಎಂದು ರಾಜನಾಥ್​ ಸಿಂಗ್​ ಹೇಳಿದರು.

Defense Minister Rajnath Singh talk
ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

By

Published : Feb 2, 2021, 6:29 PM IST

ಬೆಂಗಳೂರು:ಹಿಂದೂಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್‌ನ ಲಘು ಯುದ್ಧ ವಿಮಾನ ಎರಡನೇ ಉತ್ಪಾದನಾ ಘಟಕವನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಉದ್ಘಾಟಿಸಿದರು.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

ಓದಿ: 'ಮೇಕ್​ ಇನ್ ಇಂಡಿಯಾ'ಗೆ ಮತ್ತಷ್ಟು ಬಲ: HALನಿಂದ 83 ತೇಜಸ್​ ಯುದ್ಧ ವಿಮಾನ ಖರೀದಿಗೆ ಕೇಂದ್ರ ಒಪ್ಪಿಗೆ!

ಬೆಂಗಳೂರಿನ ಹಿಂದೂಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್‌ನ (ಎಚ್‌ಎಎಲ್‌) ಹಗುರ ಯುದ್ಧ ವಿಮಾನ ಎಲ್‌ಸಿಎ ತಯಾರಿಕಾ ಎರಡನೇ ಕಾರ್ಯ ಕ್ಷೇತ್ರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ರಾಜನಾಥ್ ಸಿಂಗ್, ನಮ್ಮ ದೇಶದ ರಕ್ಷಣೆಗೆ ನಾವು ಇತರೆ ರಾಷ್ಟ್ರಗಳ ಮೇಲೆ ಅವಲಂಬನೆಯಾಗುವುದನ್ನು ಮುಂದುವರೆಸಲು ಸಾಧ್ಯವಿಲ್ಲ. ತೇಜಸ್ ಎಂ1ಎ ಖರೀದಿಗೆ ಸಾಕಷ್ಟು ರಾಷ್ಟ್ರಗಳು ಆಸಕ್ತಿ ತೋರಿಸುತ್ತಿವೆ ಎಂಬುದಾಗಿ ತಿಳಿದು ಬಂದಿದೆ. ಶೀಘ್ರದಲ್ಲಿಯೇ ಇತರೆ ರಾಷ್ಟ್ರಗಳಿಂದ ಆರ್ಡರ್​​ಗಳನ್ನು ಪಡೆಯಲಿದ್ದೀರಿ ಎಂದು ಹೆಚ್‌ಎಎಲ್ ‌ಸಿಬ್ಬಂದಿಗೆ ತಿಳಿಸಿದರು.

ಹೆಚ್‌ಎಎಲ್​​ಗೆ ಹೆಚ್ಚೆಚ್ಚು ಆರ್ಡರ್ ಬರುವಂತೆ ಮಾಡಲು ಸಾಕಷ್ಟು ಕೆಲಸಗಳನ್ನು ಮಾಡಲಾಗುತ್ತದೆ. ಕೊರೊನಾ ಸಾಂಕ್ರಾಮಿಕ ರೋಗದ ನಡುವೆ ಹೆಚ್‌ಎಎಲ್ ರೂ. 48,000 ಕೋಟಿ ಆರ್ಡರ್​​ಗಳನ್ನು ಪಡೆದುಕೊಂಡಿದೆ. ಸ್ಥಳೀಯ ರಕ್ಷಣಾ ಸಂಗ್ರಹದ ದೃಷ್ಟಿಯಲ್ಲಿ ನೋಡುವುದಾದರೆ, ಇದೊಂಡು ಅತಿದೊಡ್ಡ ಗಳಿಕೆಯೆಂದೇ ಹೇಳಬಹುದು. ಈ ಬೆಳವಣಿಗೆಯು ಭಾರತೀಯ ಏರೋಸ್ಪೇಸ್ ಕ್ಷೇತ್ರವನ್ನು ಬಹಳ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಹೇಳಿದರು.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

ಮುಂದಿನ 3-4 ವರ್ಷಗಳಲ್ಲಿ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ 1.75 ಲಕ್ಷ ಕೋಟಿ ರೂ.ಗಳ ಗುರಿ ಸಾಧಿಸುತ್ತೇವೆಂಬ ವಿಶ್ವಾಸ ನನಗಿದೆ. ತೇಜಸ್ ಯುದ್ಧ ವಿಮಾನ ಸ್ಥಳೀಯ ವಿಮಾನವಷ್ಟೇ ಅಲ್ಲ, ಎಂಜಿನ್ ಸಾಮರ್ಥ್ಯ, ರೇಡಾರ್ ವ್ಯವಸ್ಥೆ, ದೃಶ್ಯ ವ್ಯಾಪ್ತಿಯನ್ನೂ ಮೀರಿ ಹಲವಾರು ನಿಯತಾಂಕಗಳಲ್ಲಿ ವಿದೇಶಿ ವಿಮಾನಗಳಿಗಿಂತ ಉತ್ತಮವಾಗಿದೆ ಮತ್ತು ಅಗ್ಗದ ದರವನ್ನು ಹೊಂದಿದೆ ಎಂದು ತಿಳಿಸಿದರು.

ಕೊರೊನಾ ಸಮಯದಲ್ಲೂ ಕೆಲಸ ನಿರ್ವಹಿಸಿದ ಹೆಚ್​​ಎಎಲ್ ಸಿಬ್ಬಂದಿಗೆ ಶಹಬ್ಬಾಸ್​ಗಿರಿ ನೀಡಿದರು. ತೇಜಸ್​​ನಲ್ಲಿ ಗುಣಮಟ್ಟದ ಪರಿಕರ ಉತ್ಪಾದಿಸಲಾಗುತ್ತೆ. ಜೊತೆಗೆ ವಿಶ್ವದ ಇತರ ದೇಶಗಳಿಗಿಂತ ಕಡಿಮೆ ವೆಚ್ಚದಲ್ಲಿ ಉತ್ಪಾದಿಸಲಾಗುತ್ತದೆ. ಇದು ದೇಶಕ್ಕೆ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್​​ನ‌ ಕೊಡುಗೆ ಎಂದರು.

ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತುಂಬಾ ಉದ್ಯೋಗ ಸೃಷ್ಟಿಮಾಡುತ್ತೆ. ದೇಶದ ವಿವಿಧ ಪ್ರೋಡಕ್ಷನ್ ಏಜೆನ್ಸಿಗಳು ಒಂದುಗೂಡುತ್ತವೆ. ಕೋವಿಡ್ ನಂತರ ಆರ್ಥಿಕತೆಯಲ್ಲಿ ಏಳಿಗೆ ಕಾಣಲಿದೆ ಎಂದರು.

ABOUT THE AUTHOR

...view details