ಬೆಂಗಳೂರು: ಏರೋ ಇಂಡಿಯಾ-21 ಯೋಜನೆಗಳನ್ನು ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೆಹಲಿಯಲ್ಲಿ ಪರಿಶೀಲಿಸಿದರು.
ಕಾರ್ಯಕ್ರಮ ಪ್ರಸ್ತುತ ಅಂತಾರಾಷ್ಟ್ರೀಯ ಪ್ರದರ್ಶನಗಳ ಮಾರ್ಗಸೂಚಿಗಳನ್ನು ಅನುಸರಿಸುತ್ತಿದೆ ಮತ್ತು ಈ ಕಾರ್ಯಕ್ರಮವನ್ನು ವ್ಯಾಪಾರ ಉದ್ದೇಶಿತ ಪ್ರದರ್ಶನದ ರೂಪದಲ್ಲಿ ಆಯೋಜಿಸಲಾಗಿದೆ ಎಂದು ರಕ್ಷಣಾ ಇಲಾಖೆ ಮತ್ತು ರಕ್ಷಣಾ ಸಚಿವಾಲಯ ತಿಳಿಸಿದೆ. ಸಾಮಾನ್ಯವಾಗಿ, ಪ್ರತ್ಯಕ್ಷವಾಗಿ ಈ ವೈಮಾನಿಕ ಕಾರ್ಯಕ್ರಮವನ್ನು ವೀಕ್ಷಿಸಿ ಹರ್ಷಿಸುತ್ತಿದ್ದ ಸಾರ್ವಜನಿಕರು, ಹೊಸ ವರ್ಷಕ್ಕೆ ಪಾಲುದಾರಿಕೆಗಳನ್ನು ಹೆಚ್ಚಿಸಲು, ಜಾಗತಿಕ ಎ&ಡಿ ವ್ಯಾಪಾರಗಳ ನಡುವೆ ಸುರಕ್ಷಿತ ಸಂವಾದಗಳನ್ನು ಕಲ್ಪಿಸುವ ನಿಟ್ಟಿನಿಂದ ಈ ವರ್ಷದ ಕಾರ್ಯಕ್ರಮವನ್ನು ವರ್ಚುಯಲ್ ಆಗಿ ವೀಕ್ಷಿಸಲಿದ್ದಾರೆ.
500 ಕ್ಕೂ ಹೆಚ್ಚು ನೋಂದಾಯಿತ ಪ್ರದರ್ಶಕರು ಮತ್ತು ಸಂಪೂರ್ಣ ಮಾರಾಟವಾಗಿರುವ ಸ್ಥಳದೊಂದಿಗೆ ಈ ಕಾರ್ಯಕ್ರಮ ಅದ್ಭುತ ಆಸಕ್ತಿಯನ್ನು ಹುಟ್ಟಿಸಿದೆ. ಕೋವಿಡ್-19 ರಿಂದ ಎದುರಾಗಬಹುದಾದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಕೇವಲ ವ್ಯವಹಾರಿಕ ದಿನಗಳಾದ ಅಂದರೆ 03-05 ಫೆಬ್ರವರಿ 2021 ರವರೆಗೆ ಈ ಕಾರ್ಯಕ್ರಮವನ್ನು ಆಯೋಜಿಸುವಂತೆ ರಕ್ಷಣಾ ಸಚಿವರು ನಿರ್ದೇಶಿಸಿದ್ದಾರೆ.
ಏರೋ ಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಯಶಸ್ವಿ ಸಂವಾದಗಳನ್ನು ಸಾಧಿಸುವ ನಿಟ್ಟಿನಲ್ಲಿ ಈ ನಿರ್ಣಯವನ್ನು ಕೈಗೊಳ್ಳಬೇಕಾಯಿತು. ಏಕೆಂದರೆ ಲಾಕ್ ಡೌನ್ ಮತ್ತು ಪ್ರಯಾಣದ ಮೇಲೆ ಹಲವಾರು ನಿರ್ಬಂಧಗಳಿಂದಾಗಿ 2020ರ ವರ್ಷ ಹಲವಾರು ಸವಾಲುಗಳನ್ನು ಎದುರಿಸಿದೆ. ಏರೋ ಇಂಡಿಯಾ-21ರ ಕುರಿತು ಅಕ್ಟೋಬರ್ 2020ರ ಆರಂಭದಲ್ಲೇ ವಿದೇಶಿ ಸಂಸ್ಥೆಗಳ ಹಿರಿಯ ಪ್ರತಿನಿಧಿಗಳಿಗೆ ದೆಹಲಿಯಲ್ಲಿ ಈ ಕುರಿತು ವಿವರಿಸಲಾಗಿತ್ತು. ತದನಂತರ ಅವರ ಸಂಸ್ಥೆ ನಾಯಕರು ಮತ್ತು ನಿರ್ಧಾರ ಕೈಗೊಳ್ಳುವ ಹಿರಿಯರ ಪ್ರಸ್ತುತತೆಯನ್ನು ಪ್ರೋತ್ಸಾಹಿಸಲು ಔಪಚಾರಿಕ ಆಹ್ವಾನ ಪತ್ರಿಕೆ ನೀಡಲಾಗಿತ್ತು.