ಕರ್ನಾಟಕ

karnataka

ETV Bharat / state

ಪಕ್ಷಾಂತರ ನಿಷೇಧ ನಿಯಮಾವಳಿ:  ತಜ್ಞರಿಂದ ಅಭಿಪ್ರಾಯಕ್ಕೆ ಆಹ್ವಾನ - Invite opinion from experts

ಇತ್ತೀಚಿನ ದಿನಗಳಲ್ಲಿ ಪಕ್ಷಾಂತರ ನಿಷೇಧಕ್ಕೆ ಸಂಬಂಧಿಸಿದಂತೆ ಸಂವಿಧಾನದ ಹತ್ತನೇ ಅನುಸೂಚಿ ಅಡಿ ರಚಿಸಲಾಗಿರುವ ನಿಯಮಾವಳಿಗಳ ಪ್ರಸ್ತುತತೆಯನ್ನ ಪರಿಶೀಲಿಸಲು ಸಮಿತಿ ರಚನೆ ಮಾಡಲಾಗಿದ್ದು, ಆ ಸಮಿತಿ ತನ್ನ ಕೆಲಸ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಆಸಕ್ತಿ ಇರುವ ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಲಾಗಿದೆ.

Invite opinion from experts
ಪಕ್ಷಾಂತರ ನಿಷೇಧ ನಿಯಮಾವಳಿ ಪರಿಶೀಲನ ಸಮಿತಿಯಿಂದ ತಜ್ಞರಿಂದ ಅಭಿಪ್ರಾಯ ಆಹ್ವಾನ

By

Published : May 20, 2020, 11:50 PM IST

ಬೆಂಗಳೂರು: ಪಕ್ಷಾಂತರ ನಿಷೇಧ ಸಂಬಂಧಿ ನಿಯಮವಳಿ ಪರಿಶೀಲನೆಗೆ ರಚನೆಯಾಗಿರುವ ಸಮಿತಿ, ಪರಿಶೀಲನಾ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿದೆ. ಈ ದಿಸೆಯಲ್ಲಿ ಕಾನೂನು ತಜ್ಞರಿಂದ, ಮೇಲಿನ ವಿಷಯದಲ್ಲಿ ಆಸಕ್ತಿಯುಳ್ಳ ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಲಾಗಿದೆ.

ಮಾಧ್ಯಮ ಪ್ರಕಟಣೆ

ರಾಜ್ಯ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ಇತ್ತೀಚಿನ ದಿನಗಳಲ್ಲಿ ಪಕ್ಷಾಂತರ ನಿಷೇಧಕ್ಕೆ ಸಂಬಂಧಿಸಿದಂತೆ ಸಂವಿಧಾನದ ಹತ್ತನೇ ಅನುಸೂಚಿ ಅಡಿಯಲ್ಲಿ ರಚಿಸಲಾಗಿರುವ ನಿಯಮಾವಳಿಗಳಲ್ಲಿ ಇರುವ ಕಾನೂನಿನ ಅಂಶಗಳು ಚರ್ಚೆಯ ವಿಷಯವಾಗಿರುವುದರಿಂದ ಸದರಿ ಅನುಸೂಚಿ ಹಾಗೂ ನಿಯಮಾವಳಿಗಳನ್ನು ಪರಿಶೀಲಿಸಲು ಲೋಕಸಭಾಧ್ಯಕ್ಷರಾದ ಓಂ. ಬಿರ್ಲಾ ಅವರು ರಾಜಸ್ಥಾನ ವಿಧಾನ ಸಭಾಧ್ಯಕ್ಷ ಡಾ. ಸಿ.ಪಿ. ಜೋಷಿ ಅವರ ಅಧ್ಯಕ್ಷತೆಯಲ್ಲಿ, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಒಡಿಶಾ ವಿಧಾನಸಭೆ ಸಭಾಧ್ಯಕ್ಷ ಡಾ. ಸೂರ್ಯ ನಾರಾಯಣ ಪಾತ್ತೊ ಅವರುಗಳನ್ನೊಳಗೊಂಡಂತೆ ಒಂದು ಸಮಿತಿಯನ್ನು ರಚಿಸಿರುತ್ತಾರೆ.

ಸದರಿ ಸಮಿತಿಯು ಪರಿಶೀಲನಾ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ದಿಸೆಯಲ್ಲಿ ಕಾನೂನು ತಜ್ಞರಿಂದ, ಮೇಲಿನ ವಿಷಯದಲ್ಲಿ ಆಸಕ್ತಿಯುಳ್ಳ ಸಾರ್ವಜನಿಕರಿಂದ ಅಭಿಪ್ರಾಯ ಪಡೆಯುವುದು ಸೂಕ್ತವೆಂದು ಭಾವಿಸಲಾಗಿದೆ. ಈ ದಿಸೆಯಲ್ಲಿ ಅಭಿಪ್ರಾಯವನ್ನು ನೀಡಬೇಕೆಂದು ಇಚ್ಚಿಸುವವರು ತಮ್ಮ ಅಭಿಪ್ರಾಯವನ್ನು ಕೆಳಕಂಡ ವಿಳಾಸಕ್ಕೆ ಖುದ್ದಾಗಿ, ಅಂಚೆ ಮೂಲಕ ಅಥವಾ ಇಮೇಲ್ ಮುಖಾಂತರವಾಗಲಿ ಜೂ.10 ರ ಸಂಜೆ 5 ಗಂಟೆ ಒಳಗಾಗಿ ನೀಡಬಹುದೆಂದು ತಿಳಿಸಿದ್ದಾರೆ.

ವಿಳಾಸ: ಎಂ.ಕೆ. ವಿಶಾಲಾಕ್ಷಿ, ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಕೊಠಡಿ ಸಂಖ್ಯೆ-121, ಮೊದಲನೆ ಮಹಡಿ, ವಿಧಾನಸೌಧ, ಬೆಂಗಳೂರು-560001.
P: 08022258301 a-bro:secy-kla-kar@nic.in.

ABOUT THE AUTHOR

...view details