ಬೆಂಗಳೂರು:ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಪೂರ್ಣ ಸ್ವದೇಶಿ ನಿರ್ಮಿತ ಲಘು ಯುದ್ದ ವಿಮಾನ ತೇಜಸ್ನಲ್ಲಿ ಹಾರಾಟ ನಡೆಸಿದರು. ಹಾರಾಟ ನಡೆಸಿ ಬಂದ ಬಳಿಕ ವಿಮಾನದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.
ತೇಜಸ್ ಹೊಗಳಿದ ರಕ್ಷಣಾ ಸಚಿವ.. ಹೆಚ್ಎಲ್, ಡಿಆರ್ಡಿಒಗೆ ಶಹಬ್ಬಾಸ್ ಹೇಳಿದ ರಾಜನಾಥ್ - ತೇಜಸ್ ಯುದ್ದ ವಿಮಾನ
ಬೆಂಗಳೂರಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸಿದ್ದು, ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಎಲ್ಸಿಎ ತೇಜಸ್ನಲ್ಲಿ ಹಾರಾಟ ನಡೆಸಿ ಸಾಮರ್ಥ್ಯ ಪರೀಕ್ಷೆ ನಡೆಸಿ, ತೇಜಸ್ ಗುಣಗಾನ ಮಾಡಿದ್ದಾರೆ.
ತೇಜಸ್ನಲ್ಲಿನ ಸುತ್ತಾಟ ಉತ್ತಮವಾಗಿತ್ತು ಎಂದ ಸಚಿವ ರಾಜನಾಥ್ ಸಿಂಗ್, ಹೆಚ್ಎಲ್, ಡಿಆರ್ಡಿಒ ಮತ್ತು ತೇಜಸ್ ಸಿದ್ಧಪಡಿಸುವಲ್ಲಿ ಕಾರ್ಯನಿರ್ವಹಿಸಿದ ಇತರ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದರು.
ಇದೊಂದು ಅತ್ಯಂತ ಸುಂದರ ಕ್ಷಣ, ಮೊದಲ ಬಾರಿಗೆ ಸಚಿವರೊಬ್ಬರು ಎಲ್‌ಸಿಎನಲ್ಲಿ ಹಾರಾಟ ನಡೆಸಿದ್ದಾರೆ ಎಂದು ಹೆಚ್ಎಎಲ್ ಅಧ್ಯಕ್ಷ ಸತೀಶ್ ರೆಡ್ಡಿ ಹೇಳಿದ್ದಾರೆ. ಇಂದು ರಕ್ಷಣಾ ಸಚಿವರು ಈ ತೇಜಸ್ ಹಗುರ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. ಈ ನಡುವೆ ಎಫ್‌ಒಸಿ ಏರ್ ಕ್ರಾಫ್ಟ್ ಹಾಗೂ ಮಾರ್ಕ್ 1ನ್ನು ತಯಾರು ಮಾಡುತ್ತಿದ್ದೇವೆ. ಎಲ್ಲ ಚಟುವಟಿಕೆಗಳ ಡಿಸೈನ್ ಸೇರಿದಂತೆ ಹಲವು ಕಾರ್ಯಗಳನ್ನು ಹೆಚ್ಎಎಲ್ ಮಾಡುತ್ತಿದೆ. ಇಂದು ಬೆಂಗಳೂರಿಗೆ ಬಂದು ಹಾರಾಟ ನಡೆಸಿದ ರಕ್ಷಣಾ ಸಚಿವರಿಗೆ ಧನ್ಯವಾದ ಹೇಳುತ್ತೇನೆ ಎಂದು ಸತೀಶ್ ರೆಡ್ಡಿ ಹೇಳಿದ್ದಾರೆ.