ಬೆಂಗಳೂರು:ಮುಂಬರುವ ಕೆ.ಆರ್.ಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಇಲ್ಲವೇ ನನಗೆ ಟಿಕೆಟ್ ನೀಡಬೇಕು. ಪಕ್ಷಾಂತರಿಗಳಿಗೆ ಅಥವಾ ಅನರ್ಹಗೊಂಡವರಿಗೆ ಆದ್ಯತೆ ನೀಡಬಾರದು ಎಂದು ಮಾಜಿ ಶಾಸಕ ನಂದೀಶ್ ರೆಡ್ಡಿ ಪಕ್ಷದ ನಾಯಕರನ್ನು ಒತ್ತಾಯಿಸಿದ್ದಾರೆ. ಈ ಮೂಲಕ ಅನರ್ಹ ಶಾಸಕ ಬೈರತಿ ಬಸವರಾಜ್ಗೆ ಪರೋಕ್ಷವಾಗಿ ಅವರು ಟಾಂಗ್ ನೀಡಿದ್ದಾರೆ.
ಪಕ್ಷಾಂತರಿಗಳಿಗೆ ಉಪಚುನಾವಣೆ ಟಿಕೆಟ್ ನೀಡಬಾರದು: ನಂದೀಶ್ ರೆಡ್ಡಿ ಆಗ್ರಹ - ಶಾಸಕ ನಂದೀಶ್ ರೆಡ್ಡಿ
ಮುಂಬರುವ ಕೆ.ಆರ್.ಪುರ ಕ್ಷೇತ್ರದ ಉಪಚುನಾವಣೆಯಲ್ಲಿ ನನಗೆ ಅಥವಾ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು. ಪಕ್ಷಾಂತರಿಗಳಿಗೆ ಮಣೆ ಹಾಕಬಾರದು ಎಂದು ಮಾಜಿ ಶಾಸಕ ನಂದೀಶ್ ರೆಡ್ಡಿ ಆಗ್ರಹಿಸಿದ್ದಾರೆ.
ಕೆ.ಆರ್.ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಪಕ್ಷದ ಒಳಗಿನವರಿಗೆ ಮೊದಲ ಆದ್ಯತೆ ನೀಡಬೇಕು. ಪಕ್ಷ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿದ್ದಾಗ ನಾವು ಬಿಟ್ಟುಕೊಟ್ಟಿಲ್ಲ. ಒಂದ್ವೇಳೆ ನನಗೆ ಟಿಕೆಟ್ ಕೊಡದೇ, ನಮ್ಮ ಪಕ್ಷದ ಬೇರೆಯವರಿಗೆ ಟಿಕೆಟ್ ಕೊಟ್ಟರೂ ನಾನು ಅವರಿಗಾಗಿ ಕಾರ್ಯಕರ್ತರ ಜೊತೆ ಸೇರಿ ಕೆಲಸ ಮಾಡುತ್ತೇನೆ ಎಂದರು.
ಬೇರೆಯವರಿಗೆ ಟಿಕೆಟ್ ಕೊಟ್ಟರೆ ಅವರ ಪರ ಮತಕೇಳಲು ಯೋಚಿಸಬೇಕಾಗುತ್ತದೆ. ಬಿಜೆಪಿ ನಮ್ಮನ್ನು ಕೈ ಬಿಡಲ್ಲ, ನನಗೆ ಟಿಕೆಟ್ ಸಿಗುತ್ತೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.