ಯಲಹಂಕ : ಆಹಾರ ಅರಸುತ್ತಾ ಬಂದ ಜಿಂಕೆಯ ಮೇಲೆ ನಾಯಿಗಳು ದಾಳಿ ನಡೆಸಿದ್ದು, ಜಿಂಕೆ ಸಾವನ್ನಪ್ಪಿರುವ ಘಟನೆ ಯಲಹಂಕ ಬಳಿಯ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಯಲಹಂಕದಲ್ಲಿ ನಾಯಿಗಳ ದಾಳಿಗೆ ಜಿಂಕೆ ಬಲಿ - ಯಲಹಂಕದಲ್ಲಿ ಜಿಂಕೆ ಮೇಲೆ ನಾಯಿಗಳ ದಾಳಿ
ಆಹಾರ ಅರಸುತ್ತಾ ಗ್ರಾಮಕ್ಕೆ ಆಗಾಗ ಕಾಡು ಪ್ರಾಣಿಗಳು ಬರುತ್ತವೆ. ಮೊನ್ನೆ ಕೂಡ ಜಿಂಕೆ ಬಂದಾಗ ನಾಯಿಗಳು ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
![ಯಲಹಂಕದಲ್ಲಿ ನಾಯಿಗಳ ದಾಳಿಗೆ ಜಿಂಕೆ ಬಲಿ ಜಿಂಕೆ ಬಲಿ](https://etvbharatimages.akamaized.net/etvbharat/prod-images/768-512-10824467-thumbnail-3x2-dghj.jpg)
ಜಿಂಕೆ ಬಲಿ
ಮೃತ ಜಿಂಕೆ ಹೊಸಹಳ್ಳಿ ಗ್ರಾಮದ ಖಾಸಗಿ ಬಡಾವಣೆಯಲ್ಲಿ ಪತ್ತೆಯಾಗಿದ್ದು, ಎರಡು ದಿನಗಳ ಹಿಂದೆ ಘಟನೆ ನಡೆದಿದೆ ಎನ್ನಲಾಗಿದೆ.
ಗ್ರಾಮದ ಕೂಗಳತೆಯ ದೂರದಲ್ಲಿ ಅರಣ್ಯ ಪ್ರದೇಶವಿದೆ. ಹೀಗಾಗಿ ಆಹಾರ ಅರಸುತ್ತಾ ಗ್ರಾಮಕ್ಕೆ ಆಗಾಗ ಕಾಡು ಪ್ರಾಣಿಗಳು ಬರುತ್ತವೆ. ಮೊನ್ನೆ ಕೂಡ ಜಿಂಕೆ ಬಂದಾಗ ನಾಯಿಗಳು ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.