ಬೆಂಗಳೂರು: ಜೀವ ಸ್ಪಂದನ ಸಂಘಟನೆಯೊಂದಿಗೆ ಕೈಜೋಡಿಸಿರುವ ನಟಿ ದೀಪಿಕಾ ದಾಸ್ ಪೌರ ಕಾರ್ಮಿಕರು, ಕೊಳಗೇರಿ ನಿವಾಸಿಗಳು ಹಾಗೂ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ಆಹಾರ ಧಾನ್ಯಗಳನ್ನು ಇಂದು ವಿತರಿಸಿದರು.
ಲಾಕ್ಡೌನ್ ಹೊಡೆತಕ್ಕೊಳಗಾದ ನಿರ್ಗತಿಕರಿಗೆ ನಟಿ ದೀಪಿಕಾ ದಾಸ್ ನೆರವು - ಲಾಕ್ಡೌನ್ ಎಫೆಕ್ಟ್
ಬಿಗ್‌ಬಾಸ್ ಸ್ಪರ್ಧಿ ದೀಪಿಕಾ ದಾಸ್ ಜೀವ ಸ್ಪಂದನ ಸಂಘಟನೆಯೊಂದಿಗೆ ಕೈಜೋಡಿಸಿ ನಿರ್ಗತಿಕರಿಗೆ ಅಗತ್ಯ ವಸ್ತುಗಳನ್ನು ನೀಡಿ ನೆರವಾದರು.
ಲಾಕ್ಡೌನ್ ಹೊಡೆತಕ್ಕೊಳಗಾದ ನಿರ್ಗತಿಕರಿಗೆ ದೀಪಿಕಾ ದಾಸ್ ನೆರವು
ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ದೇಶದಲ್ಲಿ ಲಾಕ್ ಡೌನ್ ಆದೇಶ ಪಾಲಿಸಲಾಗುತ್ತಿದೆ. ಆದರೆ, ಅಂದಿನಿಂದ ಬಡಜನರ ಪಾಡು ಹೇಳ ತೀರದ್ದು, ಒಂದೊತ್ತು ಊಟಕ್ಕೂ ಪರದಾಡುವಂತಾಗಿದೆ. ಲಾಕ್ ಡೌನ್ ಆರಂಭವಾದ ದಿನದಿಂದಲೂ ಅಷ್ಟೋ ಮಂದಿ ಉಳ್ಳವರು ಬಡವರ ಸಹಾಯಕ್ಕೆ ನಿಂತಿದ್ದಾರೆ.
ಸದ್ಯ ಬಿಗ್‌ಬಾಸ್ ಸ್ಪರ್ಧಿ ದೀಪಿಕಾ ದಾಸ್ ಕೂಡ ನಿರ್ಗತಿಕರ ಸಹಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಪೀಣ್ಯದಲ್ಲಿ ಬಡವರಿಗೆ ಆಹಾರ ಧಾನ್ಯಗಳನ್ನು ಹಂಚಿದ್ದ ದೀಪಿಕಾ, ಇದೀಗ ಮತ್ತೆ ಜನಸ್ಪಂದನ ಸಂಘಟನೆಯ ಮೂಲಕ ದೇಣಿಗೆ ಹಾಗೂ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಬಡವರಿಗೆ ಹಂಚಿಕೆಮಾಡಿದರು.