ಬೆಂಗಳೂರು:ಇಸ್ಕಾನ್ ದೇಗುಲದಲ್ಲಿ ದೀಪಾವಳಿಯ ಸಂಭ್ರಮ ಮನೆ ಮಾಡಿತ್ತು. ಕಾರ್ತಿಕ ಮಾಸದ ಶುದ್ಧ ಪ್ರತಿಪದೆ ದಿನವಾದ ಇಂದು ಹರೇಕೃಷ್ಣ ಗಿರಿಯಲ್ಲಿ ಗೋವರ್ಧನ ಪೂಜೆ ವಿಜೃಂಭಣೆಯಿಂದ ಆಚರಿಸಲಾಯಿತು.
ದೇವಸ್ಥಾನದ ಶ್ರೀಕೃಷ್ಣ ಹಾಗೂ ಬಲರಾಮ ಉತ್ಸವ ಮೂರ್ತಿಗಳಿಗೆ ಗಿರಿಧಾರಿ ಅಲಂಕಾರ ಮಾಡಲಾಗಿತ್ತು. ಇದರ ಜೊತೆಗೆ ರಾಧಾಕೃಷ್ಣ ಉತ್ಸವ ಮೂರ್ತಿಗಳಿಗೆ ಶೃಂಗರಿಸಲಾಗಿತ್ತು. ದೇವಸ್ಥಾನವು ತಳಿರು-ತೋರಣ, ಹೂ ಮಾಲೆ ಹಾಗೂ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು.
ಈ ವೇಳೆ ಗೋವರ್ಧನ ಗಿರಿ ಪೂಜೆ ಜೊತೆಗೆ ಅಲಂಕೃತವಾದ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಸಲಾಯಿತು. ಇತ್ತ ಭಕ್ತರು ಶ್ರೀಕೃಷ್ಣನ ಲೀಲೆಗಳ ಸಂಗೀತೋತ್ಸವ ನಡೆಸಿಕೊಟ್ಟರು.