ಕರ್ನಾಟಕ

karnataka

ETV Bharat / state

ಜಗಳ ಬೇಡ ಅಂತಾ ಬುದ್ಧಿವಾದ ಹೇಳಿದ್ದಕ್ಕೆ ಸ್ನೇಹಿತನಿಂದಲೇ ಮಾರಣಾಂತಿಕ ಹಲ್ಲೆ! - Deadly attack on man in New Year

ಹೊಸ ವರ್ಷದ ಸಂಭ್ರಮಾಚರಣೆ ಉದ್ದೇಶದಿಂದ ವಿನಾಯಕ‌‌ ನಗರದಲ್ಲಿರುವ ಶ್ರೀನಿವಾಸ ಬಾರ್​ಗೆ ಗಿರೀಶ್​ ಹಾಗೂ ಮಂಜು ಸೇರಿದಂತೆ ಇತರರು ಹೋಗಿದ್ದರು. ಆ ವೇಳೆ ಪಾನಮತ್ತನಾಗಿದ್ದ ಮಂಜು ಯಾವುದೋ ಸಣ್ಣ ವಿಚಾರಕ್ಕೆ ಜಗಳ ಮಾಡಿದ್ದಾನೆ. ಆ ವೇಳೆ ಈ ಎಲ್ಲಾ ಘಟನೆ ನಡೆದಿದೆ.

ಬೆಂಗಳೂರಲ್ಲಿ ಸ್ನೇಹಿತನ ಮೇಲೆ ಹಲ್ಲೆ , Dedly Attack on friend in Bangalore
ಬೆಂಗಳೂರಲ್ಲಿ ಸ್ನೇಹಿತನ ಮೇಲೆ ಹಲ್ಲೆ

By

Published : Jan 6, 2020, 4:03 PM IST

ಬೆಂಗಳೂರು: ಹೊಸ ವರ್ಷಾಚರಣೆ ದಿನ ಕುಡಿದ ಆಮಲಿನಲ್ಲಿ ಜಗಳ‌ ನಡೆಸುತ್ತಿದ್ದ ವ್ಯಕ್ತಿಗೆ ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡು ಹಲ್ಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ವಿನಾಯಕ ನಗರದ ಗಿರೀಶ್ ಹಲ್ಲೆಗೊಳಗಾದ ವ್ಯಕ್ತಿ. ಹೊಸ ವರ್ಷವನ್ನು ಸಂಭ್ರಮಾಚರಣೆ ಮಾಡುವ ಉದ್ದೇಶದಿಂದ ವಿನಾಯಕ‌‌ ನಗರದಲ್ಲಿರುವ ಶ್ರೀನಿವಾಸ ಬಾರ್​ಗೆ ಗಿರೀಶ್​ ಹಾಗೂ ಮಂಜು ಸೇರಿದಂತೆ ಇತರರು ಹೋಗಿದ್ದರು. ಆ ವೇಳೆ ಪಾನಮತ್ತನಾಗಿದ್ದ ಮಂಜು ಯಾವುದೋ ಸಣ್ಣ ವಿಚಾರಕ್ಕೆ ಜಗಳ ಮಾಡಿದ್ದ. ಸನಿಹದಲ್ಲೇ ಇದ್ದ ಗಿರೀಶ್​ ಜಗಳ ಬಿಡಿಸಲು ಹೋದದ್ದಕ್ಕೆ ಗಿರೀಶ್​ ಮೇಲೆ ಕೋಪಗೊಂಡ ಮಂಜು ತನ್ನ ಸಹಚರರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಹಲ್ಲೆ ನಡೆಸಿದ್ದ ಎನ್ನಲಾಗ್ತಿದೆ.

ಬೆಂಗಳೂರಲ್ಲಿ ಸ್ನೇಹಿತನ ಮೇಲೆ ಹಲ್ಲೆ

ಬಿಯರ್ ಬಾಟಲ್​ನಲ್ಲಿ ತಲೆಗೆ ಹೊಡೆದಿದ್ದಲ್ಲದೆ, ಡ್ರ್ಯಾಗರ್​ನಿಂದ ಮುಖ, ಮೈಗೆ ಚುಚ್ಚಿ ತೀವ್ರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details