ಕರ್ನಾಟಕ

karnataka

ರಾಜ್ಯದಲ್ಲಿ ಇಳಿಕೆ ಕಂಡ ಸಕ್ರಿಯ ಹಾಗೂ ಹೊಸ ಪ್ರಕರಣಗಳು

By

Published : Oct 30, 2020, 9:52 PM IST

ರಾಜ್ಯದಲ್ಲಿ ಸಕ್ರಿಯ ಮತ್ತು ಹೊಸ ಪ್ರಕರಣಗಳು ಇಳಿಕೆಯ ಹಾದಿ ಹಿಡಿದಿವೆ. ಇಂದು 3,589 ಹೊಸ ಪ್ರಕರಣಗಳು ರಾಜ್ಯದಲ್ಲಿ ದೃಢಪಟ್ಟಿವೆ.

Decreasing corona cases, Decreasing corona cases in Karnataka state, 3589 New corona cases registered in Karnataka state,  Karnataka Covid 19 Tracker, Karnataka Coronavirus News, Karnataka Coronavirus latest News, ಕರ್ನಾಟಕ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕಡಿಮೆ, ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕಡಿಮೆ, ಕರ್ನಾಟಕ ಕೋವಿಡ್​ 19 ಟ್ರ್ಯಾಕರ್​, ಕರ್ನಾಟಕ ಕೊರೊನಾ ವೈರಸ್​ ಸುದ್ದಿ, ಕರ್ನಾಟದಲ್ಲಿ ಹೊಸದಾಗಿ ಕೊರೊನಾ ಪ್ರಕರಣಗಳು ಪತ್ತೆ,
ರಾಜ್ಯದಲ್ಲಿ ಇಳಿಕೆ ಕಂಡ ಸಕ್ರಿಯ ಹಾಗೂ ಹೊಸ ಪ್ರಕರಣಗಳು

ಬೆಂಗಳೂರು: ರಾಜ್ಯದಲ್ಲಿ ಹೊಸ ಪ್ರಕರಣಗಳು ಒಂದು ಮಟ್ಟಿಗೆ ಇದ್ದರೂ ಇತ್ತ ಸಕ್ರಿಯ ಪ್ರಕರಣಗಳು ಕಡಿಮೆಯಾಗುತ್ತಿದೆ. ದಿನವೊಂದಕ್ಕೆ 3 ಸಾವಿರದಷ್ಟು ಸೋಂಕಿತರ ಸಂಖ್ಯೆ ಬಂದರೆ ಡಿಸ್ಜಾರ್ಜ್ ಸಂಖ್ಯೆ 8000ಕ್ಕೂ ಹೆಚ್ಚು ಬರುತ್ತಿದೆ.

ನಿತ್ಯಾ ಸಕ್ರಿಯ ಪ್ರಕರಣಗಳು ಇಳಿಕೆ ಆಗ್ತಿರೋದು ಸದ್ಯ ಜನರಿಗೆ ನೆಮ್ಮದಿ ವಿಚಾರ. ಅಂದಹಾಗೇ ರಾಜ್ಯದಲ್ಲಿಂದು 3,589 ಮಂದಿಗೆ ಕೊರೊನಾ‌ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,20,398ಕ್ಕೆ ಏರಿಕೆ ಆಗಿದೆ.‌ ಇತ್ತ ಸೋಂಕಿಗೆ 49 ಮಂದಿ ಮೃತರಾಗಿದ್ದು, ಸಾವಿನ ಸಂಖ್ಯೆ 11,140 ಕ್ಕೆ ಏರಿಕೆ ಆಗಿದೆ. ಇಂದು 8,521 ಸೋಂಕಿತರು ಗುಣಮುಖ ರಾಗಿದ್ದು, 7,49,740 ಜನರು ಡಿಸ್ಜಾರ್ಜ್ ಆಗಿದ್ದಾರೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ.‌

ಇನ್ನು ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು ದಿನದಿಂದ‌ ಇಳಿಕೆಯಾಗುತ್ತಿದ್ದು, ಸದ್ಯ, 59,499 ಇದ್ದು 935 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಇದ್ದಾರೆ. ಕಳೆದ 7 ದಿನಗಳಿಂದ 54,464 ಮಂದಿ ಹೋಂ ಐಸೋಲೇಷನ್​ನಲ್ಲಿ ಇದ್ದಾರೆ. ಇತ್ತ ಸೋಂಕಿತರ ಸಂಪರ್ಕದಲ್ಲಿ ಇದ್ದವರ ಸಂಖ್ಯೆಯು ಇಳಿಕೆಯಾಗಿದೆ. ಪ್ರಾಥಮಿಕವಾಗಿ 3,32,938 ದ್ವಿತೀಯವಾಗಿ 3,23,051 ಜನರು ಸೋಂಕಿತರ ಸಂಪರ್ಕದಲ್ಲಿ ಇದ್ದಾರೆ. ವಿಮಾನ ನಿಲ್ದಾಣದಲ್ಲಿ 596 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ.

ನವೆಂಬರ್ 30ರವರೆಗೆ ಕಂಟೇನ್​​​ಮೆಂಟ್ ವಲಯದಲ್ಲಿ ಚಟುವಟಿಕೆ ಇಲ್ಲ

ಇನ್ನು ಕೇಂದ್ರ ಗೃಹ ಮಂತ್ರಾಲಯದ ಆದೇಶದಂತೆ ಕಂಟೇನ್ಮೆಂಟ್ ವಲಯಗಳಲ್ಲಿ ಲಾಕ್​ಡೌನ್​ ಅವಧಿಯನ್ನು ಅಕ್ಟೋಬರ್ 31ರ ವರೆಗೆ ವಿಸ್ತರಿಸಿ ಹಾಗೂ ಕಂಟೇನ್ಮೆಂಟ್ ವಲಯದ ಹೊರಗಿನ ಪ್ರದೇಶಗಳಲ್ಲಿ ಹೆಚ್ಚಿನ ಕಾರ್ಯಚಟುವಟಿಕೆಗಳನ್ನು ಆರಂಭಿಸಲು ಮತ್ತು ಮರು ತೆರವು ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು. ಅದರನ್ವಯ ರಾಜ್ಯ ಸರ್ಕಾರವು ಕಂಟೇನ್ಮೆಂಟ್​ ವಲಯಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಹೆಚ್ಚಿನ ಚಟುವಟಿಕೆಗಳನ್ನು ಪುನಾರಂಭಿಸಲು ಮತ್ತು ಮರು ತೆರವು ಮಾರ್ಗಸೂಚಿಯನ್ನ ಹಾಗೂ ಕಂಟೇನ್​​​ಮೆಂಟ್ ವಲಯಗಳಲ್ಲಿ ಲಾಕ್​​​​​​ಡೌನ್ ಅವಧಿಯನ್ನು ಇದೀಗ ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ.

ABOUT THE AUTHOR

...view details