ಕರ್ನಾಟಕ

karnataka

ಪಿಯು ಕಾಲೇಜು ಆರಂಭವಾದರೂ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಇಳಿಕೆ

By

Published : Sep 3, 2021, 12:37 PM IST

ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಅದರಲ್ಲೂ ಮುಖ್ಯವಾಗಿ ಅತಿ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜುಗಳಲ್ಲಿ ಹಾಜರಾತಿ ದಾಖಲಿಸಲು ವಿಳಂಬವಾಗುತ್ತಿದೆ.

decrease-in-student-attendance-at-pu-college
ಪಿಯು ಕಾಲೇಜು ಆರಂಭವಾದ್ರು ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಇಳಿಕೆ

ಬೆಂಗಳೂರು:ರಾಜ್ಯದಲ್ಲಿ ಪಿಯು ಕಾಲೇಜು ಆರಂಭವಾದರೂ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಇಳಿಕೆ ಕಂಡು ಬರುತ್ತಿದೆ. ಆ. 23ರಿಂದ ರಾಜ್ಯದಲ್ಲಿ ಮೊದಲ ಹಂತವಾಗಿ ಪಿಯುಸಿ ಭೌತಿಕ ತರಗತಿಗಳು ಆರಂಭಗೊಂಡಿವೆ.

2021-22ನೇ ಶೈಕ್ಷಣಿಕ ಸಾಲಿಗೆ ಪದವಿ ಪೂರ್ವ ಶಿಕ್ಷಣ ಹಂತದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮತ್ತು ಆಫ್‌ಲೈನ್ ತರಗತಿಗಳನ್ನು ನಡೆಸಿ ವಿದ್ಯಾರ್ಥಿಗಳ ಹಾಜರಾತಿಯನ್ನು SATSನಲ್ಲಿ (ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ) ದಾಖಲಿಸಲು ಈ ಹಿಂದೆ ಸೂಚಿಸಲಾಗಿತ್ತು. ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಅದರಲ್ಲೂ ಮುಖ್ಯವಾಗಿ ಅತಿ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜುಗಳಲ್ಲಿ ಹಾಜರಾತಿ ದಾಖಲಿಸಲು ವಿಳಂಬವಾಗುತ್ತಿದೆ. ಹೀಗಾಗಿ ಹಾಜರಾತಿ ಇಳಿಕೆ ಅಂತ SATSನಲ್ಲಿ ತೋರಿಸುತ್ತಿದೆ.

ಇದರಿಂದ ಪಿಯು ಬೋರ್ಡ್ ಕೆಲ ನಿಯಮಗಳನ್ನು ಸರಳೀಕರಿಸಿದೆ. ಆ ಪ್ರಕಾರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸಲು ಬೆಳಗಿನ ಒಂದು ಅವಧಿಯ ಹಾಜರಾತಿ ಪರಿಗಣಿಸಬೇಕು.‌ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ತರಗತಿಗಳ ಹಾಜರಾತಿಯನ್ನು SATSನಲ್ಲಿ (student achievement tracking system) ಸದ್ಯ ಲಭ್ಯವಿರುವ ಮಾದರಿಯಲ್ಲಿಯೇ ದಾಖಲಿಸುವಂತೆ ಸೂಚಿಸಲಾಗಿದೆ. ಎರಡು ತರಗತಿಗಳ ವಿದ್ಯಾರ್ಥಿಗಳ ಹಾಜರಾತಿಯನ್ನು ಪ್ರತಿ ದಿನ 12.30ರೊಳಗೆ ಕಡ್ಡಾಯವಾಗಿ SATSನಲ್ಲಿ ದಾಖಲಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.

ಇದನ್ನೂ ಓದಿ:ಚಿರು - ಮೇಘನಾ ಮುದ್ದು ಮಗನ ಹೆಸರು ರಿವೀಲ್ ..! ಏನದು ಗೊತ್ತಾ?

ABOUT THE AUTHOR

...view details