ಕರ್ನಾಟಕ

karnataka

ETV Bharat / state

ಮಾಸ್ಕ್​​ ಧರಿಸದವರಿಗೆ ಹಾಕಲಾಗುತ್ತಿದ್ದ ದಂಡದ ಮೊತ್ತ ಇಳಿಕೆ: ಬಿಬಿಎಂಪಿ ಆಯುಕ್ತರಿಂದ ಆದೇಶ - ಬಿಬಿಎಂಪಿ ಆಯುಕ್ತರಿಂದ ಆದೇಶ

ಕೋವಿಡ್-19 ಹರಡದಂತೆ ಹಾಕಲಾಗುತ್ತಿದ್ದ ದಂಡದ ಮೊತ್ತವನ್ನು ಇಳಿಕೆ ಮಾಡಿ ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

Decrease in fines: Order from BBMP Commissioner
ಸಂಗ್ರಹ ಚಿತ್ರ

By

Published : May 5, 2020, 9:05 PM IST

ಬೆಂಗಳೂರು:ಮಾಸ್ಕ್ ಧರಿಸುವ ನಿಯಮ ಪಾಲಿಸದಿದ್ದರೆ ಈವರೆಗೆ 1 ಸಾವಿರ ರೂ. ದಂಡ ವಿಧಿಸಲಾಗುತ್ತಿತ್ತು. ಈಗ ದಂಡದ ಮೊತ್ತವನ್ನು ಇಳಿಕೆ ಮಾಡಲಾಗಿದೆ. ಸಾವಿರ ರೂಪಾಯಿಯಿಂದ ಇನ್ನೂರು ರೂಪಾಯಿಗೆ ಇಳಿಸಲಾಗಿದೆ.

ದಂಡದ ಮೊತ್ತ ಇಳಿಕೆ: ಬಿಬಿಎಂಪಿ ಆಯುಕ್ತರಿಂದ ಆದೇಶ

ರಾಜ್ಯ ಸರ್ಕಾರ ಇತರ ಮುನ್ಸಿಪಲ್ ಕಾರ್ಪೋರೇಷನ್​​ಗಳಿಗೆ ದಂಡದ ಮೊತ್ತವನ್ನು 200 ರೂ. ನಿಗದಿಪಡಿಸಿದೆ. ಆದರೆ, ಬಿಬಿಎಂಪಿ ವಲಯದಲ್ಲಿ ಮೊದಲ ತಪ್ಪಿಗೆ 1000 ರೂ., ಎರಡನೇ ಬಾರಿ ಮಾಸ್ಕ್ ಹಾಕದೆ ಓಡಾಡಿದರೆ 2000 ರೂ. ದಂಡ ಎಂದು ಆಯುಕ್ತರು ಆದೇಶಿಸಿದ್ದರು‌. ಈ ಆದೇಶವನ್ನು ಮರುಪರಿಶೀಲಿಸಿ ದಂಡದ ಮೊತ್ತವನ್ನು 200 ರೂ. ಎಂದು ಮರು ನಿಗದಿಪಡಿಸಲಾಗಿದೆ ಎಂದು ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details