ಕರ್ನಾಟಕ

karnataka

ETV Bharat / state

ಇಎಸ್​ಐ ಆಸ್ಪತ್ರೆಯಲ್ಲಿ ಕೊಳೆತ 2 ಶವ ಪತ್ತೆ ಪ್ರಕರಣ : ಕ್ರಮಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಆಗ್ರಹ - bangalore ESI hospital

ಬೇಜವಾಬ್ದಾರಿತನ ಮತ್ತು ಆಮಾನವೀಯ ವರ್ತನೆಯ ಪರಾಕಾಷ್ಠೆ. ಈ ಕುರಿತು ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ..

ಇಎಸ್​ಐ ಆಸ್ಪತ್ರೆಯಲ್ಲಿ ಕೊಳೆತ 2 ಶವ ಪತ್ತೆ ಪ್ರಕರಣ
ಇಎಸ್​ಐ ಆಸ್ಪತ್ರೆಯಲ್ಲಿ ಕೊಳೆತ 2 ಶವ ಪತ್ತೆ ಪ್ರಕರಣ

By

Published : Nov 29, 2021, 4:25 PM IST

Updated : Nov 29, 2021, 4:42 PM IST

ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಇಎಸ್​ಐ ಆಸ್ಪತ್ರೆಯಲ್ಲಿ 15 ತಿಂಗಳ ನಂತರ ಮೃತದೇಹಗಳಿರುವುದು ಬೆಳಕಿಗೆ ಬಂದಿದೆ. ಈ ನಿರ್ಲಕ್ಷ್ಯದಲ್ಲಿ ಬಿಬಿಎಂಪಿ ಮತ್ತು ಇಎಸ್​​ಐ ಆಸ್ಪತ್ರೆ ಎರಡರ ಪಾತ್ರವೂ ಬಹಳ ಗಂಭೀರವಾಗಿದೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ಆದೇಶ ನೀಡಿ ಅಂತಾ ಮಾಜಿ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.

ಕೋವಿಡ್-19ರ ಮೊದಲನೇ ಅಲೆಯಲ್ಲಿ ಸೋಂಕಿನಿಂದ ಮೃತಪಟ್ಟಿದ್ದ ಇಬ್ಬರ ಮೃತ ದೇಹಗಳು ಅಂತ್ಯಸಂಸ್ಕಾರವನ್ನು ಕಾಣದೆ ಶವಾಗಾರದಲ್ಲೇ ಕೊಳೆತ ಸ್ಥಿತಿಯಲ್ಲಿದ್ದ ಘಟನೆ 15 ತಿಂಗಳ ನಂತರ ಬೆಳಕಿಗೆ ಬಂದಿದೆ.

ಕ್ರಮಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಆಗ್ರಹ

ಈ ನಿರ್ಲಕ್ಷ್ಯದಲ್ಲಿ ಬಿಬಿಎಂಪಿ ಮತ್ತು ಇಎಸ್ಐ ಆಸ್ಪತ್ರೆ ಎರಡರ ಪಾತ್ರವೂ ಬಹಳ ಗಂಭೀರವಾಗಿದೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ಆದೇಶ ನೀಡಿ ನಿರ್ದಿಷ್ಟವಾದ ವರದಿಯನ್ನು ತರಿಸಿಕೊಂಡು, ಈ ಅಮಾನವೀಯ ಕೃತ್ಯ ಜರುಗುವಲ್ಲಿ ಯಾರು ಕಾರಣರು ಎಂಬುದರ ಮೇಲೆ ಅತ್ಯಂತ ಕಠಿಣ ಕ್ರಮಕೈಗೊಳ್ಳಬೇಕೆಂದು ಕಾರ್ಮಿಕ ಸಚಿವರಿಗೆ ಕೋರಿದ್ದಾರೆ.

ಈ ರೀತಿಯ ಪ್ರಸಂಗ ಎಲ್ಲಿಯೂ ಜರುಗಬಾರದು. ಕೋವಿಡ್-19 ಪರಿಸ್ಥಿತಿಯಲ್ಲಿ ಬೇರೆ ಬೇರೆ ರೀತಿಯ ಕರುಳು ಹಿಂಡುವ ಘಟನೆಗಳನ್ನು ನಾವು ಕೇಳಿದ್ದೆವು.

ಆದರೆ, ಐಎಸ್​​ಐ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿರುವ ಈ ಘಟನೆ ಅತ್ಯಂತ ದುರ್ದೈವ. ಬೇಜವಾಬ್ದಾರಿತನ ಮತ್ತು ಆಮಾನವೀಯ ವರ್ತನೆಯ ಪರಾಕಾಷ್ಠೆ. ಈ ಕುರಿತು ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.

Last Updated : Nov 29, 2021, 4:42 PM IST

ABOUT THE AUTHOR

...view details