ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಹೊಸ ಪ್ರಕರಣಗಳು ತುಸು ಇಳಿಕೆಯಾಗಿವೆ. ಗುರುವಾರ 153 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 175 ಜನ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಸದ್ಯ 1,777 ಸೋಂಕಿತರು ಆಸ್ಪತ್ರೆ ಅಥವಾ ಮನೆಯ ಆರೈಕೆಯಲ್ಲಿದ್ದಾರೆ. ಪಾಸಿಟಿವ್ ದರ ಶೇ.0.8ರಷ್ಟಿದೆ.
ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಂದು ನಿನ್ನೆಗೆ ಹೋಲಿಸಿದರೆ, ಕಡಿಮೆಯಾಗಿದೆ. (ಬುಧವಾರ 208 ಪ್ರಕರಣಗಳು, ಸಾವು ಶೂನ್ಯ) ಬೆಂಗಳೂರು 142, ದಕ್ಷಿಣ ಕನ್ನಡ 6, ಶಿವಮೊಗ್ಗ 2, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಹಾಗೂ ಉಡುಪಿಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.