ಬೆಂಗಳೂರು:ರಾಜ್ಯದಲ್ಲಿ ಕೋವಿಡ್ -19ನ ರೂಪಾಂತರಿ ಓಮಿಕ್ರಾನ್ 3ನೇ ಅಲೆ ವೇಗವಾಗಿ ಹರಡುತ್ತಿರುವುದರಿಂದ, ಪ್ರಕರಣಗಳ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಕಂಟೈನ್ಮೆಂಟ್ ವಲಯಗಳ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಐದು ಅಥವಾ ಅದಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾದಲ್ಲಿ ಕ್ಲಸ್ಟರ್ ಘೋಷಿಸಬಹುದಾಗಿದೆ.
ಪ್ರಮುಖವಾಗಿ ನಗರ ಪ್ರದೇಶಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಮನೆಗಳಲ್ಲಿ ಪ್ರಕರಣಗಳು ವರದಿಯಾದಲ್ಲಿ, ಆ ಸಾಲಿನಲ್ಲಿರುವ ಎಲ್ಲಾ ಮನೆಗಳು ಅಥವಾ 50 ಮೀಟರ್ ರೇಡಿಯಸ್‌ನಲ್ಲಿರುವ ಮನೆಗಳು, ಕಾರ್ಯಾಚರಣೆ ಸಾಧ್ಯವಾಗುವಂತೆ ಸ್ಥಳೀಯ ಆರೋಗ್ಯ ಪ್ರಾಧಿಕಾರದ ನಿರ್ಧಾರದ ಅನ್ವಯ ಘೋಷಿಸಬೇಕು.
ವಸತಿ ಸಮುಚ್ಚಯಗಳಲ್ಲಿ ಪ್ರಕರಣಗಳು ವರದಿಯಾದಲ್ಲಿ ಆಯಾ ಮಹಡಿಗಳು (Floors) ಅಥವಾ ಕಾರ್ಯಾಚರಣೆ ಸಾಧ್ಯವಾಗುವಂತೆ ಸ್ಥಳೀಯ ಆರೋಗ್ಯ ಪ್ರಾಧಿಕಾರದ ನಿರ್ಧಾರದ ಅನ್ವಯ ಇಂತಹ ಪ್ರದೇಶಗಳನ್ನು ಮೈಕ್ರೋ ಕಂಟೈನ್ಮೆಂಟ್ ವಲಯವೆಂದು ಘೋಷಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಮನೆಗಳಲ್ಲಿ ಪ್ರಕರಣಗಳು ವರದಿಯಾದಲ್ಲಿ, ಆ ಸಾಲಿನಲ್ಲಿರುವ ಎಲ್ಲಾ ಮನೆಗಳ ವ್ಯಾಪ್ತಿಯನ್ನು ಮೈಕ್ರೋ ಕಂಟೈನ್ಮೆಂಟ್ ವಲಯವೆಂದು ಘೋಷಿಸಬೇಕು.
15 ಅಥವಾ ಅದಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾದ್ರೆ ದೊಡ್ಡ ಕ್ಲಸ್ಟರ್:
15 ಅಥವಾ ಅಥವಾ ಅದಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾದಲ್ಲಿ ಅದನ್ನು"ದೊಡ್ಡ ಕ್ಲಸ್ಟರ್" ಎಂದು ಪರಿಗಣಿಸಬೇಕು. ನಗರ ಪ್ರದೇಶಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಮನೆಗಳಲ್ಲಿ ಪ್ರಕರಣಗಳು ವರದಿಯಾದಲ್ಲಿ - ಸದರಿ ಸಾಲಿನಲ್ಲಿರುವ ಎಲ್ಲಾ ಮನೆಗಳು ಅಥವಾ 100 ಮೀಟರ್ ರೇಡಿಯಸ್‌ನಲ್ಲಿರುವ ಮನೆಗಳು ಕಂಟೈನ್ಮೆಂಟ್ ವಲಯವೆಂದು ಘೋಷಿಸಬೇಕು. ವಸತಿ ಸಮುಚ್ಚಯಗಳಲ್ಲಿ ಪ್ರಕರಣಗಳು ವರದಿಯಾದಲ್ಲಿ ಆಯಾ ಮಹಡಿಗಳು (Floors) ಅಥವಾ ಕಾರ್ಯಾಚರಣೆ ಸಾಧ್ಯವಾಗುವಂತೆ ಸ್ಥಳೀಯ ಆರೋಗ್ಯ ಪ್ರಾಧಿಕಾರದ ನಿರ್ಧಾರದ ಅನ್ವಯ ಇಂತಹ ಪ್ರದೇಶಗಳನ್ನು ಕಂಟೈನ್ಮೆಂಟ್ ವಲಯವೆಂದು ಘೋಷಿಸಬೇಕು.
ಇದನ್ನೂ ಓದಿ: ರಾಜ್ಯದಲ್ಲಿಂದು 40,499 ಜನರಿಗೆ ಕೊರೊನಾ ಪಾಸಿಟಿವ್.. 23,209 ಮಂದಿ ಚೇತರಿಕೆ
ಮೈಕ್ರೋ ಕಂಟೈನ್ಮೆಂಟ್ ಅಥವಾ ಕಂಟೈನ್ಮೆಂಟ್ ವಲಯಗಳನ್ನು ಜಾರಿ ಮಾಡುವಾಗ ಅಡಚಣೆಗಳಿದ್ದ ಸಂದರ್ಭದಲ್ಲಿ, ಜಿಲ್ಲಾಡಳಿತ/ ಬಿಬಿಎಂಪಿ ಮುಖ್ಯ ಆಯುಕ್ತರೊಂದಿಗೆ ಸಮಾಲೋಚಿಸಿ, ಸ್ಥಳೀಯ ಆರೋಗ್ಯ ಪ್ರಾಧಿಕಾರವು ಪರ್ಯಾಯ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.
ಕಂಟೈನ್ಮೆಂಟ್ ವಲಯಗಳನ್ನು ಮುಕ್ತಗೊಳಿಸುವುದು (De-notification) :
ಮೈಕ್ರೋ ಕಂಟೈನ್ಮೆಂಟ್ / ಕಂಟೈನ್ಮೆಂಟ್ ವಲಯಗಳಲ್ಲಿ ಖಚಿತ ಕೋವಿಡ್-19 ಪ್ರಕರಣವು ವರದಿಯಾದ 7 ದಿನಗಳ ನಂತರ, ಯಾವುದೇ ಖಚಿತ ಪ್ರಕರಣಗಳು ವರದಿಯಾಗದಿದ್ದಲ್ಲಿ ಆಯಾ ಮೈಕ್ರೋ ಕಂಟೈನ್ಮೆಂಟ್ ವಲಯವನ್ನು ಮುಕ್ತಗೊಳಿಸಬಹುದಾಗಿದೆ.