ಬೆಂಗಳೂರು :ಅತಿವೃಷ್ಟಿಯಿಂದಾಗಿ ಬೆಳೆ, ಮೂಲ ಸೌಕರ್ಯ ಹಾಗೂ ಜೀವ ಹಾನಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ 15 ಜಿಲ್ಲೆಗಳ 55 ತಾಲ್ಲೂಕುಗಳನ್ನು 'ಅತಿವೃಷ್ಟಿ-ಪ್ರವಾಹ ಪೀಡಿತ ಪ್ರದೇಶಗಳು' ಎಂದು ಸರ್ಕಾರ ಘೋಷಿಸಿದೆ.
ರಾಜ್ಯದ 55 ತಾಲ್ಲೂಕುಗಳು 'ಅತಿವೃಷ್ಟಿ-ಪ್ರವಾಹ ಪೀಡಿತ': ಸರ್ಕಾರ ಘೋಷಣೆ - Government Declaration of 55 taluks as over-flooded areas
ಅತಿವೃಷ್ಟಿಯಿಂದಾಗಿ ಬೆಳೆ, ಮೂಲ ಸೌಕರ್ಯ ಹಾಗೂ ಜೀವ ಹಾನಿಯಾಗಿರುವ ಹಿನ್ನೆಲೆ ರಾಜ್ಯದ 15 ಜಿಲ್ಲೆಗಳ 55 ತಾಲೂಕುಗಳನ್ನು 'ಅತಿವೃಷ್ಟಿ-ಪ್ರವಾಹ ಪೀಡಿತ ಪ್ರದೇಶಗಳು' ಎಂದು ಸರ್ಕಾರ ಘೋಷಿಸಿದೆ.

ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ, ತುಮಕೂರಿನ ಚಿಕ್ಕನಾಯಕನಹಳ್ಳಿ ಮತ್ತು ಗುಬ್ಬಿ, ಚಿತ್ರದುರ್ಗದ ಚಳ್ಳಕೆರೆ, ಹೊಳಲ್ಕೆರೆ ಮತ್ತು ಹೊಸದುರ್ಗ, ದಾವಣಗೆರೆಯ ಚನ್ನಗಿರಿ, ದಾವಣಗೆರೆ ಮತ್ತು ಹೊನ್ನಾಳಿ, ಬಳ್ಳಾರಿಯ ಹಡಗಲಿ, ಹಗರಿಬೊಮ್ಮನಹಳ್ಳಿ ಮತ್ತು ಹರಪ್ಪನಹಳ್ಳಿ, ಬೆಳಗಾವಿಯ ಬೈಲಹೊಂಗಲ, ಗೋಕಾಕ್ ಮತ್ತು ಖಾನಾಪುರ, ಬಾಗಲಕೋಟೆಯ ಮುಧೋಳ, ಹಾವೇರಿಯ ಬ್ಯಾಡಗಿ, ಹಾವೇರಿ, ಹಿರೇಕೆರೂರು, ರಾಣೆಬೆನ್ನೂರು ಮತ್ತು ಶಿಗ್ಗಾಂವ, ಧಾರವಾಡದ ಧಾರವಾಡ, ಹುಬ್ಬಳ್ಳಿ, ಕಲಘಟಗಿ ಮತ್ತು ಕುಂದಗೋಳ,ಶಿವಮೊಗ್ಗದ ಭದ್ರಾವತಿ, ಹೊಸನಗರ, ಸಾಗರ, ಶಿಕಾರಿಪುರ, ಶಿವಮೊಗ್ಗ ಮತ್ತು ಸೊರಬ, ಹಾಸನದ ಆಲೂರು ಮತ್ತು ಸಕಲೇಶಪುರ, ಚಿಕ್ಕಮಗಳೂರಿನ ಕಡೂರು, ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ಶೃಂಗೇರಿ ಮತ್ತು ತರೀಕೆರೆ, ಕೊಡಗಿನ ಮಡಿಕೇರಿ ಮತ್ತು ಸೋಮವಾರಪೇಟೆ, ದಕ್ಷಿಣ ಕನ್ನಡದ ಬೆಳ್ತಂಗಡಿ, ಬಂಟ್ವಾಳ, ಮಂಗಳೂರು ಮತ್ತು ಪುತ್ತೂರು, ಉಡುಪಿಯ ಕಾರ್ಕಳ, ಕುಂದಾಪುರ ಮತ್ತು ಉಡುಪಿ, ಉತ್ತರ ಕನ್ನಡದ ಅಂಕೋಲ, ಭಟ್ಕಳ, ಹಳಿಯಾಳ, ಹೊನ್ನಾವರ, ಕಾರವಾರ, ಕುಮಟ, ಸಿದ್ದಾಪುರ, ಶಿರಸಿ, ಜೊಯಿಡಾ ಮತ್ತು ಯಲ್ಲಾಪುರ ತಾಲ್ಲೂಕುಗಳನ್ನು “ಅತಿವೃಷ್ಟಿ-ಪ್ರವಾಹ ಪೀಡಿತ ಪ್ರದೇಶಗಳು” ಎಂದು ಘೋಷಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
TAGGED:
over-flooded areas Declard