ಬೆಂಗಳೂರು:ರಾಜ್ಯಾದ್ಯಂತ ಭಾರಿ ಚರ್ಚೆ ಆಗುತ್ತಿರುವ ಟಿಪ್ಪು ಸುಲ್ತಾನ್ ವಿಷಯವನ್ನ ಪಠ್ಯದಿಂದ ಕೈ ಬಿಡುವ ವಿಚಾರವಾಗಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಇಂದು ಸಭೆ ನಡೆಸಿತು. ಪಠ್ಯ ಪುಸ್ತಕ ನಿರ್ದೇಶನಾಲಯ ನಿರ್ದೇಶಕರು ಹಾಗೂ ಸಮಿತಿ ಸದಸ್ಯರ ಸಭೆಯಲ್ಲಿ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಭಾಗಿಯಾಗಿದ್ದರು.
ಟಿಪ್ಪು ವಿಚಾರ: ಪಠ್ಯ ಪುಸ್ತಕ ಸಮಿತಿ ಸಭೆಯಲ್ಲಿ ಏನೆಲ್ಲ ಚರ್ಚೆ?
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಪಠ್ಯಗಳಲ್ಲಿ ಮಾತ್ರ ಟಿಪ್ಪು ವಿಚಾರ ತೆಗೆಯುವ ನಿರ್ಧಾರವಾಗಿತ್ತು. ಆದರೆ ಈಗ ಪದವಿ ಪಠ್ಯ ಪುಸ್ತಕದಿಂದಲೂ ಟಿಪ್ಪು ಪಾಠವನ್ನು ಕೈಬಿಡಲು ಸರ್ಕಾರದ ಮುಂದಾಗಿದೆ ಎಂದು ಹೇಳಲಾಗ್ತಿದೆ.
ಟಿಪ್ಪು ಸುಲ್ತಾನ್ ಇತಿಹಾಸಕ್ಕೆ ಸಂಬಂಧಿಸಿದ ದಾಖಲೆಗಳನ್ನು ಶಾಸಕ ಅಪ್ಪಚ್ಚು ರಂಜನ್ ನೀಡಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಪಠ್ಯದಲ್ಲಿ ಮಾತ್ರ ಟಿಪ್ಪು ವಿಚಾರ ತೆಗೆಯುವ ನಿರ್ಧಾರವಾಗಿತ್ತು. ಆದರೆ ಈಗ ಪದವಿ ಪಠ್ಯ ಪುಸ್ತಕದಿಂದಲೂ ಟಿಪ್ಪು ಪಾಠ ಕೈಬಿಡಲು ಸರ್ಕಾರದ ಮುಂದಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ವಿಚಾರವಾಗಿ ಅಪ್ಪಚ್ಚು ರಂಜನ್ ದಾಖಲೆಗಳನ್ನು ಪಠ್ಯ ಪುಸ್ತಕ ಸಮಿತಿಗೆ ಒಪ್ಪಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
2-3 ಗಂಟೆಗಳ ಸುದೀರ್ಘ ಕಾಲ ಚರ್ಚೆ ಮಾಡಲಾಗಿದೆ. ಟಿಪ್ಪು ನಡೆಸಿರುವ ದಬ್ಬಾಳಿಕೆ, ದೌರ್ಜನ್ಯಗಳನ್ನು ನಾವು ಸಮಿತಿಗೆ ತಿಳಿಸಿದ್ದೇವೆ. ಇಂತ ಮತಾಂಧನನ್ನು ಎಲ್ಲಾ ಪಠ್ಯ ಪುಸ್ತಕಗಳಿಂದ ಹೊರಗಿಡಬೇಕು. ಈತನ ಪತ್ರ ಸಂಗ್ರಹ ಪುಸ್ತಕದಲ್ಲಿ ಟಿಪ್ಪು ಮಾಡಿದ ಮತಾಂತರ, ಅತ್ಯಾಚಾರ, ದೌರ್ಜನ್ಯ ಬಗ್ಗೆ ಪತ್ರ ಬರೆದಿರುವುದು ನಾವು ಪರ್ಷಿಯನ್ ಭಾಷೆಯ ಪತ್ರವನ್ನು ಭಾಷಾಂತರ ಮಾಡಿದ್ದೇವೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಟಿಪ್ಪು ಪಾಠ ಇರುವ ವಿಚಾರವಾಗಿ ಉನ್ನತ ಶಿಕ್ಷಣ ಸಚಿವರನ್ನ ಭೇಟಿ ಮಾಡುತ್ತೇವೆ. ಸಚಿವ ಅಶ್ವತ್ಥ್ ನಾರಾಯಣ್ ಅವರ ಗಮನಕ್ಕೆ ತಂದು ಮುಂದೆ ಏನು ಮಾಡಬೇಕು ಎಂಬುದರ ಕುರಿತು ತಿಳಿಸುತ್ತೇವೆ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.